ಮಂಡ್ಯ: ರೌಡಿ ಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ (Rowdy Sheeter Murder) ಮಾಡಿದ ಘಟನೆ ಮಂಡ್ಯ ಜಿಲ್ಲೆ (Mandya News) ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿಯಲ್ಲಿ ನಡೆದಿದೆ.
ವಿನಯ್ ಅಲಿಯಾಸ್ ಕುಂಟ ವಿನು(32) ಕೊಲೆಯಾದ ರೌಡಿಶೀಟರ್. ಈಗ ಬೈಕ್‌ನಲ್ಲಿ (Team attacks rowdy Sheeter) ತನ್ನ ಫಾರ್ಮ್ ಹೌಸ್‌ಗೆ ಹೋಗುವ ವೇಳೆ ಬೆನ್ನಟ್ಟಿ ಕೊಲೆ ಮಾಡಲಾಗಿದೆ. ವಿನಯ್ ಬೈಕ್‌ನಲ್ಲಿ ಹೋಗುತ್ತಿದ್ದಾಗ ಒಂದು ಒಮಿನಿ ಕಾರಿನಲ್ಲಿ ಆತನನ್ನು ಬೆನ್ನಟ್ಟಿ ಬೈಕ್ ಗೆ ಕಾರನ್ನು ಬೆನ್ನಟ್ಟಿ ಡಿಕ್ಕಿ ಹೊಡೆಸಿ ನಂತರ ಹತ್ಯೆ ಕೊಲೆ ಮಾಡಲಾಗಿದೆ.
ಬೈಕ್‌ಗೆ ಕಾರು ಡಿಕ್ಕಿಯಾಗುತ್ತಿದ್ದಂತೆಯೇ ಉರುಳಿ ಬಿದ್ದ ವಿನಯ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ. ಆತ ಸತ್ತಿರುವುದನ್ನು ದೃಢಪಡಿಸಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ.
ಶ್ರೀರಂಗಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಂಶಯಿತ ಆರೋಪಿಗಳನ್ನು ಪಟ್ಟಿ ಮಾಡಿ ಹುಡುಕಾಟ ನಡೆಸುತ್ತಿದ್ದಾರೆ.
ವಿನಯ್ ಈ ಹಿಂದೆ ಹಲವು ಸಮಾಜದ್ರೋಹಿ ಕೆಲಸಗಳಲ್ಲಿ ಭಾಗಿಯಾಗಿದ್ದು, ಅದಕ್ಕಾಗಿ ಆತನ ಮೇಲೆ ರೌಡಿ ಶೀಟ್ ಹಾಕಲಾಗಿದೆ. ಆತನ ಮೇಲೆ ಹಲವರಿಗೆ ದ್ವೇಷವಿದೆ ಎನ್ನಲಾಗಿದೆ. ಆತನಿಂದ ತೊಂದರೆಗೆ ಒಳಗಾದ ರೌಡಿ ತಂಡಗಳು ಮತ್ತು ಆತನ ವಿರೋಧಿ ಗ್ಯಾಂಗ್‌ಗಳಲ್ಲಿ ಯಾವುದೋ ಒಂದು ಆತನನ್ನು ಕೊಲೆ ಮಾಡಿರುವ ಸಾಧ್ಯತೆಗಳಿವೆ.
ಪೊಲೀಸರು ಆ ಭಾಗದಲ್ಲಿ ವಾಹನಗಳ ಸಂಚಾರವೂ ಸೇರಿದಂತೆ ಎಲ್ಲ ರೀತಿಯ ತಾಂತ್ರಿಕ ವಿಚಾರಗಳನ್ನು ಗಮನಿಸಿ ತನಿಖೆ ನಡೆಸುತ್ತಿದ್ದಾರೆ
ಮಗನನ್ನು ಬಸ್ಸಿಗೆ ಬಿಡಲು ಹೋಗಿದ್ದ ಅಪ್ಪ ಮೃತ್ಯು
ಮಂಡ್ಯ: ಮಂಡ್ಯ ತಾಲೂಕಿನ ತೂಬಿನಕೆರೆ ಗ್ರಾಮದ ಬಳಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸ್ಥಳದಲ್ಲೇ ಸಾವು ಕಂಡಿದ್ದಾರೆ. ಕಾಶಿ ವಿಶ್ವನಾಥ್ (59) ಮೃತ ದುರ್ದೈವಿ.
ಮೈಸೂರು ಜಿಲ್ಲೆ ನಂಜನಗೂಡು ನಿವಾಸಿಯಾಗಿರುವ ವಿಶ್ವನಾಥ್ ಅವರು ಪಿ ಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಅವರು ಮಗನನ್ನು ಬೆಂಗಳೂರಿಗೆ ಬಿಡಲೆಂದು ಬೆಳಗ್ಗೆ ಬೇಗನೆ ಮನೆ ಬಿಟ್ಟಿದ್ದರು. ಮಗನನ್ನು ಬಸ್ಸಿಗೆ ಬಿಟ್ಟು ಮರಳಿ ಮನೆಗೆ ಹೋಗುವಾಗ ಈ ದುರಂತ ಸಂಭವಿಸಿದೆ.
ಇದನ್ನೂ ಓದಿ: Actor Nagabhushana : ಯಾವ್ಯಾವ ಕೇಸ್‌ನಲ್ಲಿ ನಟ ನಾಗಭೂಷಣ್ ಲಾಕ್; ಈ ಶಿಕ್ಷೆ ಗ್ಯಾರಂಟಿನಾ?
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೈಕ್ ನೇರವಾಗಿ ಕ್ಯಾಂಟರ್‌ಗೆ ಡಿಕ್ಕಿ ಹೊಡೆದಿದೆ. ದುರಂತದಿಂದಾಗಿ ಮನೆಯಲ್ಲಿ ದೊಡ್ಡ ಮಟ್ಟದ ಆಕ್ರಂದನ ಕೇಳಿಬಂದಿದೆ. ಮಗನನ್ನು ಬಿಟ್ಟು ಬರುವ ವೇಳೆ ಆಗಿರುವ ದುರಂತ ಇನ್ನೂ ಹೆಚ್ಚು ನೋವನ್ನು ಉಂಟು ಮಾಡಿದೆ.