Site icon Vistara News

ಟಿಪ್ಪು ಹುತಾತ್ಮ ದಿನಾಚರಣೆ V/S ದೊಡ್ಡ ನಂಜೇಗೌಡ, ಉರಿಗೌಡ ದಿನಾಚರಣೆ

ಮಂಡ್ಯ: ಟಿಪ್ಪು ಸುಲ್ತಾನ್‌ ಹುತಾತ್ಮ ದಿನಾಚರಣೆ ಮಾಡಬೇಕು ಎಂದು ಒಂದು ಗುಂಪು, ಟಿಪ್ಪುವನ್ನು ಕೊಂದ ದೊಡ್ಡ ನಂಜೇಗೌಡ, ಉರಿಗೌಡರ ದಿನಾಚರಣೆ ಮಾಡಲು ಮತ್ತೊಂದು ಗುಂಪು.

ಶ್ರೀರಂಗಪಟ್ಟಣದಲ್ಲಿ ಇದೀಗ ಟಿಪ್ಪು ಹುತಾತ್ಮ ದಿನಾಚರಣೆ V/S ದೊಡ್ಡ ನಂಜೇಗೌಡ, ಉರಿಗೌಡ ದಿನಾಚರಣೆ ಎಂಬಂತಾಗಿದೆ. ಟಿಪ್ಪು ಮೃತಪಟ್ಟ ದಿನ ಮೇ 4ರಂದು ಶ್ರೀರಂಗಪಟ್ಟಣದಲ್ಲಿ ಹುತಾತ್ಮ ದಿನಾಚರಣೆ ನಡೆಸಲು ಮಂಡ್ಯದ ಅನೇಕ ಸಂಘಟನೆಗಳು ಹಾಗೂ ಮುಸ್ಲಿಂ ಸಂಘಟನೆಗಳು ಮುಂದಾಗಿವೆ.

ಬಹುಸಂಸ್ಕೃತಿ ಸಾಮರಸ್ಯ ಮೇಳ ಎಂಬ ಹೆಸರಿನೊಂದಿಗೆ ಟಿಪ್ಪು ಸುಲ್ತಾನ್ ಹುತಾತ್ಮ ದಿನಾಚರಣೆ ಆಯೋಜನೆ ಮಾಡಲಾಗುತ್ತಿದೆ. ವಿವಿಧ ಸಂಘಟನೆಗಳ ಮುಖಂಡರ ಕಾಲ್ನಡಿಗೆ ಸೇರಿ ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ.

ಇದಕ್ಕೆ ಪ್ರತಿಯಾಗಿ ಕೆಲ ಸಂಘಟನೆಗಳು ಟಿಪ್ಪು ಸುಲ್ತಾನ್‌ರನ್ನು ಹತ್ಯೆ ಮಾಡಿದ ದೊಡ್ಡ ನಂಜೇಗೌಡ ಹಾಗೂ ಉರಿಗೌಡರ ದಿನಾಚರಣೆಯನ್ನು ಆಯೋಜಿಸಲು ಮುಂದಾಗಿವೆ. ಮೈಸೂರು ಪ್ರಾಂತ್ಯದ ರಾಜಮಾತೆ ಲಕ್ಮಮ್ಮಣ್ಣಿ ಬಂಟರಾಗಿದ್ದವರು. 1799ರ ಮಾರ್ಚ್ 27ರಂದು ಇನ್ನೇನು ಕೈಗೆ ಸಿಕ್ಕೇಬಿಟ್ಟನೆಂಬಂತೆ ಸನಿಹ ಬಂದಿದ್ದ ಟಿಪ್ಪು, ಇವರೆಲ್ಲರ ಕೈಯಿಂದ ತಪ್ಪಿಸಿಕೊಂಡು ಶ್ರೀರಂಗಪಟ್ಟಣದ ಕೋಟೆ ಸೇರಿಕೊಂಡ. ಅದೇ ವರ್ಷದ ಮೇ 4ರಂದು ಬ್ರಿಟಿಷರು ಕೋಟೆಯನ್ನು ಮುತ್ತಿಗೆ ಹಾಕಿದಾಗ ದೊಡ್ಡ ನಂಜೇಗೌಡ ಹಾಗೂ ಉರಿಗೌಡರಿಂದ ಹತ್ಯೆಯಾಯಿತು. ಹೀಗಾಗಿ ದೊಡ್ಡ ನಂಜೇಗೌಡ, ಉರಿಗೌಡರ ದಿನಾಚರಣೆ ನಡೆಸಲಾಗುತ್ತದೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕ್ರಾಂತಿಕಾರಕ ಬದಲಾವಣೆಗಾಗಿಯೇ ನೂತನ ಶಿಕ್ಷಣ ನೀತಿ: ನೃಪತುಂಗ ವಿವಿ ಉದ್ಘಾಟಿಸಿದ ಅಮಿತ್‌ ಷಾ

ಅಲ್ಲದೇ, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಟಿಪ್ಪು ದಿನಾಚರಣೆಗೆ ವಿರುದ್ದವಾಗಿ ದೊಡ್ಡ ನಂಜೇಗೌಡ ಹಾಗೂ ಉರಿಗೌಡರ ದಿನ ಆಚರಣೆ ಮಾಡಲಾಗುವುದು ಎಂಬ ಸಂದೇಶಗಳು ಹರಿದಾಡುತ್ತಿವೆ. ಮಂಡ್ಯದ ವಿವಿಧ ತಾಲೂಕುಗಳಲ್ಲಿ ಆಚರಣೆಗೆ ಸಿದ್ದತೆ ನಡೆದಿದೆ.

Exit mobile version