ಮಂಡ್ಯ: ಬಿಗ್ ಬಾಸ್ ಸೀಸನ್ 10ರ (BBK Season 10) ಸ್ಪರ್ಧಿಯಾಗಿ ಗಮನ ಸೆಳೆದಿದ್ದ ವರ್ತೂರಿನ ಕೃಷಿಕ ವರ್ತೂರು ಸಂತೋಷ್ ವಿರುದ್ಧ ಹಳ್ಳಿಕಾರ್ ಸಂರಕ್ಷಕರು ಸಿಡಿದೆದ್ದಿದ್ದಾರೆ. ವರ್ತೂರ್ ಸಂತೋಷ್ (Varthur Santhosh) ಬಿಗ್ ಬಾಸ್ ಮನೆಯಲ್ಲಿದ್ದಾಗ ಹಳ್ಳಿಕಾರ್ ಒಡೆಯ ಬಿರುದು ವಿವಾದಕ್ಕೆ ಸೃಷ್ಟಿಯಾಗಿತ್ತು.
ಈ ಹಿಂದೆ ಹಳ್ಳಿಕಾರ್ ತಳಿ ಸಂರಕ್ಷಕರು ವರ್ತೂರು ಬೆಂಬಲಿಗರಿಗೆ ತಿಳುವಳಿಕೆ ಹೇಳಲು ಚರ್ಚಾಗೋಷ್ಠಿ ಏರ್ಪಡಿಸಿದ್ದರು. ಅಂದು ವರ್ತೂರು ಸಂತೋಷ್ ಬೆಂಬಲಿಗರು ಹಾಗೂ ತಲಾತಲಾಂತರಿಂದ ಹಳ್ಳಿಕಾರ್ ತಳಿ ಸಂರಕ್ಷಕರ ನಡುವೆ ಜಟಾಪಟಿ ಶುರುವಾಗಿತ್ತು. ಈ ವಾಗ್ವಾದದಿಂದಾಗಿ ಕಾರ್ಯಕ್ರಮದ ಅರ್ಧದಲ್ಲೆ ಸಂತೋಷ್ ಬೆಂಬಲಿಗರನ್ನು ಪೊಲೀಸರು ಕಳುಹಿಸಿದ್ದರು. ನಂತರ ಬಿಗ್ ಬಾಸ್ ಮನೆಯಿಂದ ಹೊರ ಬಂದ ವರ್ತೂರ್ ಸಂತೋಷ್ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದರು. ಹಿರಿಯ ಹಳ್ಳಿಕಾರ್ ಸಂರಕ್ಷಕರ ವಿರುದ್ಧ ಸಂತೋಷ್ ಏಕವಚನದಲ್ಲಿ ಹರಿಹಾಯ್ದಿದ್ದರು.
ಇದನ್ನೂ ಓದಿ: Actor Darshan: ದೇಹ ಅಷ್ಟೇ ಅಲ್ಲ, ಮಾತೂ ತೂಕ ಇರ್ಬೇಕು; ದರ್ಶನ್‌ಗೆ ಉಮಾಪತಿ ತಿರುಗೇಟು!
ವರ್ತೂರ್ ಸಂತೋಷ್ ಮಾತಿಗೆ ಹಳ್ಳಿಕಾರ್ ಸಂರಕ್ಷಕರು ಮತ್ತೆ ಸಿಡಿದೆದ್ದಿದ್ದಾರೆ. ಹಳ್ಳಿಕಾರ್ ಒಡೆಯ ಎಂದು ಕರೆಸಿಕೊಳ್ಳುವುದು, ಬಿಂಬಿಸಿಕೊಳ್ಳುತ್ತಿರುವುದು ಸರಿಯಲ್ಲ. ಇದು ಹಳ್ಳಿಕಾರ್ ಜನಾಂಗಕ್ಕೆ ಅಪಮಾನವಾಗಿದೆ. ತಲಾತಲಾಂತರಿಂದ ಹಳ್ಳಿಕಾರ್ ಸಂರಕ್ಷಣೆ ಮಾಡುತ್ತಿರುವ ರೈತರಿಗೂ ಹಾಗು ಅವರ ಭಾವನೆಗೂ ಧಕ್ಕೆಯಾಗಿದೆ ಎಂದು ಹಳ್ಳಿಕಾರ್ ಸಂರಕ್ಷಕರು ಕಿರಿಕಾರಿದ್ದಾರೆ.
ಗೂಗಲ್‌ನಲ್ಲಿಯೂ ಛೇರ್ ಮೇನ್ ಆಫ್ ಆಲ್ ಇಂಡಿಯಾ ಹಳ್ಳಿಕಾರ್ ಕನ್ಜರ್ವೇಷನ್ ಎಂದು ರಾಂಗ್ ಮೆಸೇಜ್ ನೀಡಿದ್ದಾರೆ. ಇದರಿಂದ ಮುಂದಿನ ಪೀಳಿಗೆಗೆ ತಪ್ಪು ಸಂದೇಶ ಹೋಗುತ್ತೆ. ವರ್ತೂರ್ ಸಂತೋಷನಿಂದಲೇ ಹಳ್ಳಿಕಾರ್ ತಳಿ ಹುಟ್ಟಿತು ಎಂದು ಬಿಂಬಿತವಾಗಬಹುದು. ಆದ್ದರಿಂದ ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇವೆ. ಎಲ್ಲಾ ದಾಖಲಾತಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಶೀಘ್ರ ಕಾನೂನು ಸಮರ ಸಾರುತ್ತೇವೆ. ಗೂಗಲ್ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ ಎಂದು ಹಳ್ಳಿಕಾರ್ ಸಂರಕ್ಷಕ ರವಿಪಟೇಲ್ ತಿಳಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ