Site icon Vistara News

ಮಂಗಳೂರು ಸ್ಫೋಟ | ಉಗ್ರ ಕೃತ್ಯಕ್ಕೆ ನಂಟು, ತೀರ್ಥಹಳ್ಳಿಯ ಐದು ಮನೆಗಳ ಮೇಲೆ ಪೊಲೀಸರ ದಾಳಿ

Mangalore blast raid at Shimogga

ಶಿವಮೊಗ್ಗ: ಮಂಗಳೂರು ಆಟೊ ರಿಕ್ಷಾ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಶಂಕಿತ ಉಗ್ರರಿಗೆ ಸಂಬಂಧಪಟ್ಟಿದೆ ಎನ್ನಲಾದ ತೀರ್ಥಹಳ್ಳಿಯ ಐದು ಮನೆಗಳ ಮೇಲೆ ಸೋಮವಾರ ಬೆಳಗಿನ ಜಾವ ಪೊಲೀಸರು ದಾಳಿ ನಡೆಸಿದ್ದಾರೆ.

ಮಂಗಳೂರು ಕೋರ್ಟ್ ನಿಂದ ಸರ್ಚ್ ವಾರಂಟ್ ಪಡೆದು ಈ ದಾಳಿ ನಡೆಸಲಾಗಿದೆ. ಮೋಸ್ಟ್ ವಾಂಟೆಡ್‌ ಮತೀನ್, ಬಂಧಿತ ಮಾಜ್ ಗೆ ಸಂಬಂಧಿಸಿದ ಎರಡು ಮನೆಗಳ ಮೇಲೂ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಸಾಜಿದ್ ಮತ್ತು ಶಾರೀಕ್ ಸಂಬಂಧಿಯೊಬ್ಬರ ಮನೆಯಲ್ಲೂ ಪರಿಶೀಲನೆ ನಡೆದಿದೆ. ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ದಾಳಿ ನಡೆದ ಪ್ರದೇಶ

ಆಗುಂಬೆ ಠಾಣಾಧಿಕಾರಿ ಶಿವಕುಮಾರ್, ಮಾಳೂರು ಠಾಣಾಧಿಕಾರಿ ಪ್ರವೀಣ್ ನೀಲಮ್ಮನವರ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಎಸಗಿದ ಕೃತ್ಯಗಳ ಕುರಿತು ಕೆಲವು ಸಾಕ್ಷ್ಯಾಧಾರಗಳು ಮತ್ತು ಮಹತ್ವದ ಸುಳಿವುಗಳು ಲಭ್ಯವಾಗಿವೆ ಎನ್ನಲಾಗಿದೆ.

ದಾಳಿ ನಡೆದ ಮನೆ

ಭಾಬುವಾರ ಶಾರೀಕ್ ಚಿಕ್ಕಮ್ಮನನ್ನು ಮಂಗಳೂರಿಗೆ ಡಿ ವೈ ಎಸ್ ಪಿ ನೇತೃತ್ವದ ತಂಡ ಕರೆದೊಯ್ದು ವಿಚಾರಣೆ ನಡೆಸಿತ್ತು. ಅವರು ಶಾರೀಕ್ ಬಗ್ಗೆ ಕೆಲವು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಶಾರೀಕ್ ನ ಸಂಚು ಏನಾಗಿತ್ತು? ಉಗ್ರ ಸಂಘಟನೆಗಳು ಮತ್ತು ಮುಸ್ಲಿಂ ಮೂಲಭೂತವಾದಿ ಸಂಘಟನೆಯ ಪ್ರಮುಖರ ಜತೆ ಆತನ ನಂಟೇನು ಎಂಬ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ | Mangalore Blast | Confirm! ಮಂಗಳೂರು ಬಾಂಬ್‌ ಸ್ಫೋಟದ ರೂವಾರಿ ತೀರ್ಥಹಳ್ಳಿಯ ಶಾರಿಕ್‌

Exit mobile version