Site icon Vistara News

ಮಂಗಳೂರು ಸ್ಫೋಟ | ಕುಕ್ಕರ್‌ ಸ್ಫೋಟದ ಮರುಕ್ಷಣವೇ ‘ಆತ್ಮಾಹುತಿ ಬಾಂಬ್’ ಬಗ್ಗೆ ಝಾಕೀರ್ ನಾಯ್ಕ್ ಟ್ವೀಟ್! ಏನಿದು ಕನೆಕ್ಷನ್‌?

Shariq zakir

ಮಂಗಳೂರು: ಮಂಗಳೂರಿನ ನಾಗುರಿಯಲ್ಲಿ ನವೆಂಬರ್‌ ೧೯ರ ಸಂಜೆ ೪.೧೯ಕ್ಕೆ ಕುಕ್ಕರ್‌ ಬಾಂಬ್‌ ಸ್ಫೋಟ (ಮಂಗಳೂರು ಸ್ಫೋಟ) ಸಂಭವಿಸಿದ ಒಂದೂವರೆ ಗಂಟೆ ಮಧ್ಯಂತರದಲ್ಲಿ ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌ನ ಮುಖ್ಯಸ್ಥ, ಧಾರ್ಮಿಕ ಭಾಷಣಕಾರ ಝಾಕಿರ್‌ ನಾಯ್ಕ್‌ ಮಾಡಿರುವ ಟ್ವೀಟ್‌ ಭಾರಿ ಚರ್ಚೆಗೆ ಕಾರಣವಾಗಿದೆ.

ಮಂಗಳೂರಿನಲ್ಲಿ ಬಾಂಬ್‌ ಸ್ಫೋಟಕ್ಕೆ ಸಂಚು ನಡೆಸಿ, ಕುಕ್ಕರ್‌ ಬಾಂಬ್‌ ಸಾಗಿಸುವ ಹಂತದಲ್ಲೇ ಸ್ಫೋಟಿಸಿದ್ದರಿಂದಾಗಿ ಗಾಯಗೊಂಡ ಉಗ್ರ ಶಾರಿಕ್‌ ಝಾಕಿರ್‌ ನಾಯ್ಕ್‌ನ ಮಾತುಗಳಿಂದ ಪ್ರಭಾವಿತನಾಗಿದ್ದ ಎಂಬ ಅಂಶ ಇತ್ತೀಚೆಗೆ ಬಯಲಾಗಿತ್ತು. ಶಾರಿಕ್‌ನ ಮೊಬೈಲ್‌ನಲ್ಲಿ ಝಾಕಿರ್‌ ನಾಯ್ಕ್‌ನ ಚಿತ್ರಗಳಿದ್ದದ್ದು, ಆತನ ಕೆಲವು ಭಾಷಣದ ತುಣುಕುಗಳು ಇದ್ದದ್ದು ಕಂಡುಬಂದಿತ್ತು. ಇದು ಝಾಕಿರ್‌ ನಾಯ್ಕ್‌ ಮತ್ತು ಶಾರಿಕ್‌ ನಡುವಿನ ಸಂಬಂಧವನ್ನು ಸಾರಿ ಹೇಳುತ್ತಿತ್ತು.

ಶಾರಿಕ್‌ ಝಾಕಿರ್‌ ನಾಯ್ಕ್‌ನನ್ನು ಭೇಟಿಯಾಗಿದ್ದನೇ ಎನ್ನುವ ಬಗ್ಗೆ ಸ್ಷಷ್ಟತೆ ಇಲ್ಲ. ಆದರೆ, ಅವನಿಂದ ಪ್ರೇರಿತನಾಗಿದ್ದ ಎನ್ನುವುದು ಮಾತ್ರ. ಇದೇ ಹೊತ್ತಿಗೆ ಝಾಕಿರ್‌ ನಾಯ್ಕ್‌ಗೆ ಶಾರಿಕ್‌ ಬಗ್ಗೆ ಗೊತ್ತಿದೆಯೋ ಎನ್ನುವುದು ಸ್ಪಷ್ಟವಿಲ್ಲ. ಅದರೆ, ಶಾರಿಕ್‌ ನಡೆಸಿದ ಕೃತ್ಯ ಝಾಕಿರ್‌ ವರೆಗೆ ತಲುಪಿರುವ ಸಾಧ್ಯತೆ ದಟ್ಟವಾಗಿದೆ. ಇದು ಆತ ಮಾಡಿದ ಟ್ವೀಟ್‌ನಿಂದ ಸ್ವಲ್ಪಮಟ್ಟಿಗೆ ಸ್ಪಷ್ಟವಾಗುತ್ತಿದೆ.

ಏನು ಟ್ವೀಟ್‌ ಮಾಡಿದ್ದಾನೆ ಝಾಕಿರ್‌ ನಾಯ್ಕ್?
ಮಂಗಳೂರಿನಲ್ಲಿ ಸ್ಫೋಟ ಸಂಭವಿಸಿದ್ದು ನವೆಂಬರ್‌ ೧೯ರ ಸಂಜೆ ೪.೨೯ಕ್ಕೆ. ಅದೇ ದಿನ ಸಂಜೆ ೬.೧೩ಕ್ಕೆ ಝಾಕಿರ್‌ ನಾಯ್ಕ್‌ ಟ್ವೀಟ್‌ ಮಾಡಿದ್ದಾನೆ. ‘ಇಸ್ಲಾಂನಲ್ಲಿ ಆತ್ಮಾಹುತಿ ಬಾಂಬ್‌ಗೆ ಅವಕಾಶ ಇದ್ಯಾ?” ಎಂದು ಟ್ವೀಟ್‌ ಮಾಡಿ ಒಂದು ವಿಡಿಯೊ ಲಿಂಕನ್ನು ಅಪ್ಲೋಡ್‌ ಮಾಡಿದ್ದಾನೆ ಝಾಕಿರ್‌ ನಾಯ್ಕ್‌.

ಆ ವಿಡಿಯೊದ ಲಿಂಕನ್ನು ಝಾಕಿರ್‌ ನಾಯ್ಕ್‌ ಅಧಿಕೃತ ಟ್ವಿಟರ್ ‌ಖಾತೆಯಲ್ಲಿ ಪೋಸ್ಟ್ ಮಾಡಿದ್ದಾನೆ. ಆದರೆ, ಭಾರತದಲ್ಲಿ ಆತನ ಯೂಟ್ಯೂಬ್‌ ಖಾತೆಗೆ ನಿರ್ಬಂಧ ಇರುವುದರಿಂದ ಅದು ಭಾರತದಲ್ಲಿ ಕಾಣಿಸಿಕೊಂಡಿಲ್ಲ.

ಝಾಕೀರ್ ನಾಯ್ಕ್ ಮತ್ತು ಆತನ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ಗೆ ಭಾರತದಲ್ಲಿ ನಿರ್ಬಂಧವಿದೆ. ಝಾಕಿರ್‌ ನಾಯ್ಕ್‌ ಸದ್ಯ ಮಲೇಶಿಯದಲ್ಲಿದ್ದು, ಅಲ್ಲಿಂದಲೇ ಇಡಿ ಜಗತ್ತಿನೊಂದಿಗೆ ಸಂಪರ್ಕ ಸಾಧಿಸುತ್ತಿದ್ದಾನೆ.

ಇದನ್ನೂ ಓದಿ | ಮಂಗಳೂರು ಸ್ಫೋಟ | ಉಗ್ರ ಶಾರಿಕ್‌ ಮೇಲೆ ಝಾಕಿರ್‌ ನಾಯ್ಕ್‌ ಭಾಷಣಗಳ ಪ್ರಭಾವ? ಮೊಬೈಲ್‌ನಲ್ಲಿ ಸಿಕ್ತು ಕ್ಲೂ

Exit mobile version