Site icon Vistara News

Mangalore News | ಉದ್ಘಾಟನೆ ಹಂತಕ್ಕೆ ತಲುಪಿದ್ದ ಹರೇಕಳ-ಅಡ್ಯಾರ್ ಕಿಂಡಿ ಅಣೆಕಟ್ಟು ಕಾಮಗಾರಿಗೆ ಹೈಕೋರ್ಟ್‌ ತಡೆ!

kindi dam Link Bridge high court

ಉಳ್ಳಾಲ: ಭೂಸ್ವಾಧೀನ ಪ್ರಕ್ರಿಯೆ ನಡೆಸದೆ ಭೂಮಾಲೀಕರಿಗೆ ಪರಿಹಾರಧನ ನೀಡದೆ ಆರಂಭಿಸಿದ್ದ ಹರೇಕಳ-ಅಡ್ಯಾರ್ ಸಂಪರ್ಕ ಸೇತುವೆ ಹಾಗೂ ಅಣೆಕಟ್ಟು ನಿರ್ಮಾಣದ ಕಾಮಗಾರಿಯನ್ನು ತಕ್ಷಣಕ್ಕೆ ಸ್ಥಗಿತಗೊಳಿಸಿ, ಮುಂದಿನ ಆದೇಶದವರೆಗೆ ಯಥಾಸ್ಥಿತಿ ಕಾಪಾಡುವಂತೆ ರಾಜ್ಯ ಉಚ್ಚ ನ್ಯಾಯಾಲಯ ಆದೇಶ ನೀಡಿದ್ದು, ಕಾಮಗಾರಿ ಸ್ಥಗಿತಗೊಂಡಿದೆ.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಡಿ ಅಡ್ಯಾರ್ -ಹರೇಕಳ ಸಂಪರ್ಕಿಸುವಲ್ಲಿ ನೇತ್ರಾವತಿ ನದಿಗೆ ಪಶ್ಚಿಮವಾಹಿನಿ ಯೋಜನೆಯಲ್ಲಿ ಸೇತುವೆ ಸಹಿತ ಉಪ್ಪು ನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ೨೧೫.೬೨ ಕೋಟಿ ರೂ. ಅನುದಾನದಲ್ಲಿ ೨೦೨೧ಕ್ಕೆ ಟೆಂಡರ್ ಆಗಿ ೨೦೨೦ಕ್ಕೆ ಕಾಮಗಾರಿ ಆರಂಭಿಸಲಾಗಿತ್ತು. ಸೇತುವೆ ಕಾಮಗಾರಿ ಸಂಪೂರ್ಣ ಮುಗಿದಿದ್ದರೂ, ಎರಡು ಕಡೆಗಳಲ್ಲಿ ಸಂಪರ್ಕಿಸುವ ರಸ್ತೆಗೆ ಜಾಗದ ತಕರಾರು ಇರುವುದರಿಂದ ಉದ್ಘಾಟನೆಗೊಳ್ಳದೆ ಹಾಗೆಯೇ ಉಳಿದಿದೆ.

ಈ ನಡುವೆ ಸೇತುವೆ ಬದಿಯ ಭೂಮಾಲೀಕರಾಗಿರುವ ಕಡೆಂಜ ಮೋಹನದಾಸ್ ರೈ ಸೇರಿದಂತೆ ಐವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ | Animal attack | ಚಿರತೆ ಆಯ್ತು, ಆನೆ ಹೋಯ್ತು.. ಈಗ ಕರಡಿ ಸರದಿ: ಮನೆ ಪಕ್ಕವೇ ಓಡಾಟ ಕಂಡು ಬೆಚ್ಚಿಬಿದ್ದ ಜನ!

೨೦೨೦ರಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಹಾಯಕ ಅಭಿಯಂತರರು ಇಂಗ್ಲಿಷ್‌ ಪತ್ರಿಕೆಯೊಂದರಲ್ಲಿ ನೀಡಿರುವ ಜಾಹೀರಾತಿನಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಗೊಳ್ಳಲಿರುವ ಪ್ರದೇಶದ ಸುತ್ತಲಿನ ೧೧೦ ಎಕರೆ ಭೂಮಿ ನೀರಿನಿಂದ ಮುಳುಗುವ ಸಂಭವ ಇದೆ. ಈ ಭಾಗದ ಭೂ ಒತ್ತುವರಿ ಪ್ರಕ್ರಿಯೆ ತಕ್ಷಣದಿಂದ ಆರಂಭವಾಗಲಿದೆ. ಸ್ಥಳೀಯರು ಸಹಕರಿಸುವಂತೆ ಕೋರಿ ಪ್ರಕಟಣೆ ನೀಡಿದ್ದರು. ಆದರೆ, ಸೇತುವೆಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಮುಳುಗಡೆಯಾಗಲಿರುವ ಪ್ರದೇಶದ ಭೂ ಒತ್ತುವರಿ ಸಂಬಂಧ ಭೂಮಾಲೀಕರಿಗೆ ನೋಟಿಸ್‌ ಅನ್ನೂ ನೀಡಿಲ್ಲ. ಅಲ್ಲದೆ, ಮಾಹಿತಿಯನ್ನು ನೀಡದೆ ಕಾಮಗಾರಿಯನ್ನು ಮುಂದುವರಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದರು.

ಈ ಬಗ್ಗೆ ಎರಡು ವರ್ಷಗಳ ಹಿಂದೆಯೇ ಹರೀಶ್ ಶೆಟ್ಟಿ ಎಂಬುವವರು ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿಯನ್ನು ಕೇಳಿದ್ದರೂ ಈವರೆಗೆ ಮಾಹಿತಿಗಳನ್ನು ನೀಡಲಾಗಿಲ್ಲ. ಮೂರು ತಿಂಗಳ ಹಿಂದೆ ಕಡೆಂಜ ಮೋಹನದಾಸ್ ರೈ ಅವರು ಮಾಹಿತಿಯನ್ನು ಕೇಳಿದ್ದರೂ ಈವರೆಗೂ ಮಾಹಿತಿ ದೊರಕಿಲ್ಲ.

ಈಗ ಹೈಕೋರ್ಟ್‌ನಲ್ಲಿ ಡಿ. ೧೬ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಯಾವುದೇ ಕಾಮಗಾರಿ ನಡೆಸದಂತೆ ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ | BITM Silver jubilee | ಡಿ.17ರಂದು ಬಳ್ಳಾರಿಯಲ್ಲಿ ಬಿಐಟಿಎಂ ಸಂಸ್ಥೆಯ ರಜತ ಮಹೋತ್ಸವ

Exit mobile version