Site icon Vistara News

Manvi Election Results: ಮಾನ್ವಿಯಲ್ಲಿ ಗೆದ್ದು ಮಿಂಚಿದ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ನಾಯಕ್, ಜೆಡಿಎಸ್‌ಗೆ ಸೋಲು

hampayya nayak won the manvi constituency

ಬೆಂಗಳೂರು: ರಾಯಚೂರು ಜಿಲ್ಲೆಯ ಮಾನ್ವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಂಪಯ್ಯ ನಾಯಕ್ ಅವರು 66922 ಮತಗಳನ್ನು ಪಡೆದುಕೊಂಡು ಬಿಜೆಪಿಯ ಬಿ ವಿ ನಾಯಕ್ ವಿರುದ್ಧ ಗೆಲುವು ಸಾಧಿಸಿದ್ದಾರೆ. ಜೆಡಿಎಸ್‌ ರಾಜಾ ವೆಂಕಟಪ್ಪ ನಾಯಕ್ 25,990 ಮತಗಳನ್ನು ಪಡೆದುಕೊಂಡಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಗೆಲುವಿನ ಅಂತರ 7719 ಮತಗಳು. ಬಿ ವಿ ನಾಯಕ್ ಅವರು 59203 ಮತಗಳನ್ನು ಪಡೆದುಕೊಂಡಿದ್ದಾರೆ(Manvi Election Results).

2023ರ ಚುನಾವಣೆ ಅಭ್ಯರ್ಥಿಗಳು

ಕಾಂಗ್ರೆಸ್‌ನಿಂದ ಜಿ ಹಂಪಯ್ಯ ನಾಯಕ್, ಜೆಡಿಎಸ್‌ನಿಂದ ರಾಜಾ ವೆಂಕಟಪ್ಪ ನಾಯಕ್ ಮತ್ತು ಬಿಜೆಪಿಯಿಂದ ಬಿ ವಿ ನಾಯಕ್ ಅವರು ಚುನಾವಣಾ ಕಣದಲ್ಲಿದ್ದರು.

2018ರ ಚುನಾವಣೆ ಫಲಿತಾಂಶ ಏನಾಗಿತ್ತು?

ಪರಿಶಿಷ್ಟ ಜನಾಂಗಕ್ಕೆ ಮೀಸಲಾಗಿರುವ ಮಾನ್ವಿ ಕ್ಷೇತ್ರವು ರಾಯಚೂರು ಜಿಲ್ಲೆಯ ವಿಶಿಷ್ಟ ಕ್ಷೇತ್ರವಾಗಿದೆ. 2018ರ ಚುನಾವಣೆಯಲ್ಲಿ ಜೆಡಿಎಸ್‌ನ ರಾಜಾ ವೆಂಕಟಪ್ಪ ನಾಯಕ್ 53548 ಮತಗಳನ್ನು ಪಡೆದುಕೊಂಡು, 15815 ಮತಗಳ ಅಂತರದಲ್ಲಿ ತಮ್ಮ ಪ್ರತಿಸ್ಪರ್ಧಿ ಡಾ. ತನುಶ್ರೀ ಅವರ ವಿರುದ್ಧ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನಿಂದ ಬಂಡಾಯ ಎದ್ದು ಸ್ಪರ್ಧಿಸಿದ್ದ ಡಾ. ತನುಶ್ರೀ ಅವರು 37733 ಮತಗಳನ್ನುಪಡೆದುಕೊಂಡಿದ್ದರು. ಬಿಜೆಪಿಯ ಶರಣಪ್ಪಾ ಕೆ ಗುಡದಮನಿ ಅವರು 30250 ಹಾಗೂ ಕಾಂಗ್ರೆಸ್‌ನ ಜಿ ಹಂಪಯ್ಯ ನಾಯಕ್ ಅವರು 28,177 ಮತಗಳನ್ನು ಪಡೆದುಕೊಂಡಿದ್ದರು.

Exit mobile version