ತುಮಕೂರು: ವಿವಾಹಿತ ಮಹಿಳೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ತುರುವೇಕೆರೆ ತಾಲೂಕಿನ ದುಂಡ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ (Murder Case) ನಡೆದಿದೆ.
ಗಿರೀಶ್ ಎಂಬುವವರ ಪತ್ನಿ ಕಾವ್ಯಾ (23) ಮೃತರು. ಸಂಜೆ ಜಮೀನಿನಿಂದ ದನಗಳನ್ನು ಹೊಡೆದುಕೊಂಡು ಬರುವ ವೇಳೆ ಕೊಲೆ ಮಾಡಲಾಗಿದೆ. ಕೊಲೆಗೈದಿರುವವನು ಅದೇ ಗ್ರಾಮದ ಯುವಕ ಎಂಬ ಮಾಹಿತಿ ಇದ್ದು, ಕೊಲೆ ಮಾಡಿದ ನಂತರ ಯುವಕ ಪರಾರಿಯಾಗಿದ್ದಾನೆ.
ಕೊಲೆಗೆ ನಿಖರ ಕಾರಣ ಏನೆಂಬುವುದು ತಿಳಿದುಬಂದಿಲ್ಲ. ಸ್ಥಳಕ್ಕೆ ಸಿ.ಪಿ.ಐ ಲೋಹಿತ್.ಬಿ.ಎನ್, ಪಿ.ಎಸ್.ಐ.ರಾಮಚಂದ್ರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ | Dead Body Found: ಸ್ನೇಹಿತರ ಜತೆ ಎಣ್ಣೆ ಪಾರ್ಟಿ ಮಾಡಲು ಹೋದವ ಶವವಾಗಿ ಪತ್ತೆ
ದಸರಾ ಆನೆ ಹೊತ್ತು ಸಾಗುತ್ತಿದ್ದ ವಾಹನ ಹರಿದು ಚಾಲಕ ಸಾವು
ಆನೇಕಲ್: ದಸರಾ ಆನೆ ಇದ್ದ ವಾಹನ ಅಪಘಾತಕ್ಕೀಡಾಗಿ, ಚಾಲಕ ಸ್ಥಳದಲ್ಲಿಯೇ ದಾರುಣವಾಗಿ ಮೃತಪಟ್ಟಿರುವ ಘಟನೆ (Road Accident) ಬೆಂಗಳೂರು- ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಹೆದ್ದಾರಿ ಬದಿ ನಿಲ್ಲಿಸಿದ್ದ ವಾಹನ ಇಳಿಜಾರಿನಲ್ಲಿ ಏಕಾಏಕಿ ಮುಂದೆ ಸಾಗಿದ್ದು, ಅದನ್ನು ನಿಲ್ಲಿಸಲು ಹೋದಾಗ ವಾಹನದಡಿ ಸಿಲುಕಿ ಚಾಲಕ ಮೃತಪಟ್ಟಿದ್ದಾನೆ.
ಆರೋಗ್ಯ ಸ್ವಾಮಿ (45) ಮೃತ ಚಾಲಕ. ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ಅಂಬಾರಿ ಉತ್ಸವಕ್ಕಾಗಿ ತಮಿಳುನಾಡಿನ ತಿರುಚ್ಚಿಯಿಂದ ಆನೆಯನ್ನು ಕರೆತರಲಾಗಿತ್ತು. ಮಂಗಳವಾರ ರಾತ್ರಿ ಉತ್ಸವ ಮುಗಿದ ಬಳಿಕ ಆನೆಯನ್ನು ಐಷರ್ ವಾಹನದಲ್ಲಿ ವಾಪಸ್ ಕರೆದೊಯ್ಯಲಾಗುತ್ತಿತ್ತು. ಬೆಂಗಳೂರು- ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸಾನಮಾವು ಸಮೀಪ ವಾಹನ ಅಪಘಾತಕ್ಕೀಡಾಗಿದ್ದು, ಈ ವೇಳೆ ಚಾಲಕ ಮೃತಪಟ್ಟಿದ್ದಾನೆ. ಆನೆ ಪ್ರಾಣಾಪಾಯದಿಂದ ಪಾರಾಗಿದೆ.
ಆನೆಯನ್ನು ಕರೆದೊಯ್ಯುತ್ತಿದ್ದ ಐಷರ್ ವಾಹನದಲ್ಲಿ ಆರು ಮಂದಿ ಇದ್ದರು. ಸಾನಮಾವು ಬಳಿ ಮೂತ್ರ ವಿಸರ್ಜನೆಗೆಂದು ಚಾಲಕ ವಾಹನ ನಿಲ್ಲಿಸಿದ್ದ. ಇಳಿಜಾರಿನಲ್ಲಿ ಅರಣ್ಯ ಪ್ರದೇಶದ ಒಳಗೆ ಏಕಾಏಕಿ ವಾಹನ ಚಲಿಸಿದೆ. ಅದನ್ನು ನಿಲ್ಲಿಸಲು ಮುಂದಾದಾಗ ವಾಹನದಡಿ ಸಿಲುಕಿ ಚಾಲಕ ಮೃತಪಟ್ಟಿದ್ದಾನೆ.
ಇದನ್ನೂ | Newborn Baby: ಬೆಂಗಳೂರಿನ ನಾಗವಾರಪಾಳ್ಯದಲ್ಲಿ ನವಜಾತ ಶಿಶು ಪತ್ತೆ
ಸ್ಥಳಕ್ಕೆ ಹೊಸೂರಿನ ಅಡ್ಕೋ ಪೊಲೀಸರು ಹಾಗೂ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕ್ರೇನ್ ಹಾಗೂ ಜೆಸಿಬಿ ಮೂಲಕ ಆನೆ ಇದ್ದ ವಾಹನವನ್ನು ಸಿಬ್ಬಂದಿ ಹೊರತೆಗೆದಿದ್ದಾರೆ. ಚಾಲಕ ಆರೋಗ್ಯ ಸ್ವಾಮಿಯ ಮೃತದೇಹವನ್ನು ಹೊಸೂರಿನ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.