ಚಿತ್ರದುರ್ಗ: ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಇಲ್ಲಿನ ಮುರುಘಾಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ವಿವಿಧ ಪೀಠಾಧಿಪತಿಗಳು ಹಾಗೂ ರಾಜಕೀಯ ಮುಖಂಡರು ನೈತಿಕ ಬೆಂಬಲ ನೀಡುತ್ತಿದ್ದಾರೆ.
ಬಸವಮೂರ್ತಿ ಮಾದಾರ ಚನ್ನಯ್ಯಶ್ರೀಗಳು ಮುರುಘಾಮಠಕ್ಕೆ ಭೇಟಿ ನೀಡಿದ ಮುರುಘಾಶರಣರ ಜತೆ ಕೆಲಸಕಾಲ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಗಾಣಿಗ ಮಠದ ಬಸವಕುಮಾರ್ ಶ್ರೀಗಳು ಸಹ ಉಪಸ್ಥಿತರಿದ್ದರು.
ಮಠ-ಪರಂಪರೆಗೆ ಬದ್ಧ- ಮಾದಾರ ಚನ್ನಯ್ಯಶ್ರೀ
ಮಠ ಮತ್ತು ಪರಂಪರೆಯ ಜತೆಗೆ ನಾವು ಬದ್ಧವಾಗಿದ್ದೇವೆ. ನಾವು ಮುರುಘಾಮಠದ ಮುರುಘಾಶ್ರೀಗಳ ಶಿಷ್ಯರಾಗಿದ್ದು, ಅವರ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ನಾವು ಆ ಬಗ್ಗೆ ಹೆಚ್ಚೇನೂ ಮಾತನಾಡಲಾರೆವು ಎಂದು ಮಾದಾರ ಚನ್ನಯ್ಯಶ್ರೀ ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ| ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಜತೆಗೆ ದಲಿತ ದೌರ್ಜನ್ಯ ಕೇಸ್ ಕೂಡಾ ದಾಖಲು
ಮುರುಘಾಮಠಕ್ಕೆ ಅದರದ್ದೇ ಆದ ಪರಂಪರೆ ಇದ್ದು, ಶ್ರೀಮಠಕ್ಕೆ ಭಕ್ತ ಸಮೂಹ ದೊಡ್ಡದಿದೆ. ಇನ್ನು ಆಡಳಿತ ಮಂಡಳಿಯೂ ಇದ್ದು, ಎಲ್ಲವೂ ನಿರಾತಂಕವಾಗಿ ಸಾಗಲಿದೆ. ಕಾನೂನು ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ನಾವು ಮುರುಘಾಶ್ರೀ ಶಿಷ್ಯರಾಗಿರುವುದರಿಂದ ಬಹುದೊಡ್ಡ ತೀರ್ಮಾನದ ಬಗ್ಗೆ ಮಾತನಾಡಲಾಗುವುದಿಲ್ಲ. ಮಠ, ಪರಂಪರೆಯ ಜತೆಗಿರುತ್ತೇವೆಂದು ಮುಜುಗರ ಇಲ್ಲದೆ ಹೇಳುತ್ತೇವೆ ಎಂದು ತಿಳಿಸಿದರು.
ಷಡ್ಯಂತ್ರದ ಬಗ್ಗೆ ಬೇರೆ ಮುಖಂಡರು, ರಾಜಕಾರಣಿಗಳಂತೆ ನಾವು ಮಾತನಾಡುವುದು ಕಷ್ಟ. ಷಡ್ಯಂತ್ರ ಇರಬಹುದು, ಮುರುಘಾ ಶ್ರೀಗಳು ನಮ್ಮ ಜತೆ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ ಎಂದು ಹೇಳಿದ ಮಾದಾರ ಚನ್ನಯ್ಯ ಶ್ರೀಗಳು ಹೇಳಿದರು.
ಮುರುಘಾಶ್ರೀ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದರಿಂದ ಪೀಠ ತ್ಯಾಗ ಮಾಡಬೇಕು ಎಂಬ ಆರೋಪ ಕೇಳಿಬಂದಿರುವ ಬಗ್ಗೆ ಸುದ್ದಿಗಾರರು ಪ್ರಶ್ನಿಸಿದಾಗ, ಇದು ಭಕ್ತ ಸಮೂಹ ಮತ್ತು ಆಡಳಿತ ಮಂಡಳಿಗೆ ಬಿಟ್ಟ ವಿಚಾರ. ಅನೇಕ ಧುರೀಣರು ಮಠಕ್ಕೆ ಬಂದು ಹೋಗುತ್ತಿದ್ದಾರೆ. ನಾವು ಅವರ ತೀರ್ಮಾನಕ್ಕೆ ಕಾಯುತ್ತಿದ್ದೇವೆ ಎಂದು ಉತ್ತರಿಸಿದರು.
ಶಾಸಕರ ಭೇಟಿ
ಮುರುಘಾ ಮಠಕ್ಕೆ ಚಿತ್ರದುರ್ಗ ಬಿಜೆಪಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಭೇಟಿ ನೀಡಿ ಮುರುಘಾ ಶರಣರ ಬಳಿ ಕೆಲಕಾಲ ಚರ್ಚೆ ನಡೆಸಿದರು. ಬಳಿಕ ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ ಆಗಮಿಸಿ ಚರ್ಚೆ ನಡೆಸಿದ್ದಾರೆ. ಒಬ್ಬೊಬ್ಬರೇ ಸ್ಥಳೀಯ ಮುಖಂಡರು ಭೇಟಿ ನೀಡಿ ಶ್ರೀಗಳಿಗೆ ಧೈರ್ಯ ತುಂಬುತ್ತಿದ್ದಾರೆಂದು ಹೇಳಲಾಗಿದೆ.
ಇದನ್ನೂ ಓದಿ | ಮುರುಘಾ ಶ್ರೀ ಪ್ರಕರಣ | ಶ್ರೀಗಳ ಬಂಧನ ಆಗ್ರಹಿಸಿ ದಲಿತ ಮುಖಂಡರಿಂದ ಪ್ರತಿಭಟನೆ