Site icon Vistara News

Maski Election Results: ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ತುರ್ವಿಹಾಳ್‌ಗೆ ಮತ್ತೆ ಗೆಲುವು, ಬಿಜೆಪಿಗೆ ತಪ್ಪಲಿಲ್ಲ ಸೋಲು

basanagouda turvihal won the maski constituency

ಬೆಂಗಳೂರು: ಮಸ್ಕಿ ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ್ ಅವರು ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್ ಅವರು ಮತ್ತೆ ಸೋಲಿಸಿದ್ದಾರೆ. ಗೆಲುವಿನ ಅಂತರ 13053 ಮತಗಳಾಗಿವೆ. ಪ್ರತಾಪ್ ಗೌಡ ಪಾಟೀಲ್ ಅವರು 66513 ಮತಗಳನ್ನು ಪಡೆದುಕೊಂಡರು, ಬಸನಗೌಡ ತುರ್ವಿಹಾಳ್ ಅವರು 79566 ಮತ ಪಡೆದುಕೊಂಡು ಭರ್ಜರಿ ಜಯ ಸಾಧಿಸಿದ್ದಾರೆ. ಜೆಡಿಎಸ್ ಪಕ್ಷದ ರಾಘವೇಂದ್ರ ನಾಯಕ್ ಅವರು 1305 ಮತಗಳನ್ನು ಪಡೆದುಕೊಂಡಿದ್ದಾರೆ(Maski Election Results).

2023ರ ಚುನಾವಣೆಯ ಅಭ್ಯರ್ಥಿಗಳು

ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿಯಿಂದ ಪ್ರತಾಪ್ ಗೌಡ ಪಾಟೀಲ್, ಕಾಂಗ್ರೆಸ್ ಪಕ್ಷದಿಂದ ಆರ್ ಬಸನಗೌಡ ತುರುವಿಹಾಳ, ಜೆಡಿಎಸ್ ಪಕ್ಷದಿಂದ ರಾಘವೇಂದ್ರ ಕಣದಲ್ಲಿದ್ದರು.

2018ರ ಚುನಾವಣೆಯ ಫಲಿತಾಂಶ ಏನಾಗಿತ್ತು?

ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಕ್ಷೇತ್ರವು, ರಾಯಚೂರು ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಕ್ಷೇತ್ರವು ಹಲವು ಬಾರಿ ವಿಚಿತ್ರ ಸನ್ನಿವೇಶಗಳಿಗೆ ಸಾಕ್ಷಿಯಾಗಿದೆ. 2008, 2013, 2018ರಲ್ಲಿ ಪ್ರತಾಪ್ ಗೌಡ ಕ್ರಮವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ಪ್ರತಾಪ್ ಗೌಡ ಅವರ ಬಿಜೆಪಿಗೆ ಸೇರ್ಪಡೆಯಾದರು. ಬಳಿಕ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಬಸನಗೌಡ ತುರವೀಹಾಳ ಅವರು ಪ್ರತಾಪಗೌಡ ವಿರುದ್ಧ 30606 ಅಂತರದಲ್ಲಿ ಗೆಲುವು ಕಂಡಿದ್ದರು. ತರುವೀಹಾಳ ಅವರು 86337 ಮತ್ತು ಪ್ರತಾಪಗೌಡ ಪಾಟೀಲ್ 55731 ಮತಗಳನ್ನು ಪಡೆದುಕೊಂಡಿದ್ದರು.

Exit mobile version