ಬಾಗಲಕೋಟೆ: ತಾಯಿಯೊಬ್ಬಳು ತನ್ನ ಮೂವರು ಪುಟಾಣಿ ಹೆಣ್ಣು ಮಕ್ಕಳಿಗೆ ವಿಷ ಉಣಿಸಿ ತಾನೂ ಆತ್ಮಹತ್ಯೆ (Mass suicide) ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಬಾಗಲಕೋಟೆ ತಾಲೂಕಿನ ತಿಮ್ಮಾಪುರ ಗ್ರಾಮ ಇಂಥಹುದೊಂದು ಹೃದಯ ಹಿಂಡುವ ಘಟನೆಗೆ ಸಾಕ್ಷಿಯಾಗಿದೆ.
ರೇಖಾ ಬಗಲಿ(೨೮) ಎಂಬ ಮಹಿಳೆಯೇ ತನ್ನ ಮಕ್ಕಳಾದ ಸನ್ನಿಧಿ(೭), ಸಮೃದ್ಧಿ (೪), ಶ್ರೀನಿಧಿ(೨) ಎಂಬ ಮಕ್ಕಳಿಗೆ ವಿಷಯ ಉಣಿಸಿ ಕೊಂದು ತಾನೂ ಪ್ರಾಣ ಕಳೆದುಕೊಂಡವರು.
ಮೃತ ರೇಖಾ ಬಗಲಿ ಅವರು ಮಾಜಿ ಸಚಿವ ಎಚ್ ವೈ ಮೇಟಿ ಅವರ ಸಹೋದರಿಯ ಕಡೆಯ ಸಂಬಂಧಿಕರು ಎಂದು ತಿಳಿದುಬಂದಿದೆ. ರೇಖಾ ಅವರು ಇತ್ತೀಚೆಗೆ ಮಾನಸಿಕವಾಗಿ ತುಂಬಾ ನೊಂದಿದ್ದರು ಎಂದು ತಿಳಿದುಬಂದಿದೆ.
ನನಗೆ ಮೂರೂ ಜನರ ಹೆಣ್ಣು ಮಕ್ಕಳೇ ಇರುವುದು. ಅವರ ಓದು, ಅವರನ್ನು ಬೆಳೆಸೋದು, ಮದುವೆ ಮಾಡಿಸೋದು ನನಗೆ ಸಾಧ್ಯವೇ? ಎಂದು ಯೋಚಿಸಿಯೇ ಅವರು ಕಂಗಾಲಾಗಿದ್ದರು. ಚಿಂತಿಸಿಯೇ ಮಾನಸಿಕವಾಗಿ ಬಳಲಿದ್ದರು ಎಂದು ಹೇಳಲಾಗಿದೆ. ಬಾಗಲಕೋಟೆ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿ ಕುಟುಂಬಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ | Student suicide | ಪ್ರಿನ್ಸಿಪಾಲ್ ಬೈದದ್ದಕ್ಕೆ ಕಾನೂನು ವಿದ್ಯಾರ್ಥಿ ಆತ್ಮಹತ್ಯೆ