Site icon Vistara News

Mass Suicide : ಒಂದೇ ಕುಟುಂಬದ ಮೂವರು ಆತ್ಮಹತ್ಯೆ, ತಂದೆ-ತಾಯಿ ಜತೆ ವಿವಾಹಿತ ಮಗಳ ದುರಂತ ಅಂತ್ಯ

suicide symbolic

#image_title

ಹಾವೇರಿ: ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆಯೊಂದು (Mass Suicide) ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ.

ಹನುಮಂತಗೌಡ ಪಾಟೀಲ (54), ಅವರ ಪತ್ನಿ ಲಲಿತಾ ಪಾಟೀಲ(50) ಮತ್ತು ಮಗಳು ನೇತ್ರಾ ಪಾಟೀಲ(22) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.

ಹನುಮಂತ ಗೌಡ ಪಾಟೀಲ ಅವರದ್ದು ಮಧ್ಯಮ ವರ್ಗದ ಕುಟುಂಬ. ಅವರು ಸಾಲ ಮಾಡಿ ಮಗಳು ನೇತ್ರಾಳ ಮದುವೆ ಮಾಡಿದ್ದರು. ಆದರೆ ಮಗಳ ಮದುವೆಗೆ ಮಾಡಿದ ಸಾಲವನ್ನು ತೀರಿಸಲಾಗದೆ ಭಾರಿ ಕಷ್ಟಪಡುತ್ತಿದ್ದರು.

ಒಂದು ಕಡೆ ಸಾಲಗಾರರ ಕಾಟ, ಸಾಲ ಮರುಪಾವತಿ ಮಾಡಲು ಬೇರೆ ಯಾವುದೇ ದಾರಿ ಕಾಣದೆ ಇರುವ ಆತಂಕದಿಂದ ಅವರು ಸಾಯುವ ನಿರ್ಧಾರಕ್ಕೆ ಬಂದಿದ್ದರು. ಮಗಳು ಮನೆಗೆ ಬಂದ ವೇಳೆಯೇ ಅವರು ಆಕೆಗೆ ಗೊತ್ತಿಲ್ಲದಂತೆ ನೇಣು ಬಿಗಿದುಕೊಂಡಿದ್ದರು. ಮಗಳ ಜತೆ ಸಾಲ ಮತ್ತಿತರ ವಿಚಾರಗಳ ಬಗ್ಗೆ ಮೊದಲು ಚರ್ಚೆ ನಡೆಸಿರುವ ಸಾಧ್ಯತೆಗಳಿವೆ.

ತಂದೆ-ತಾಯಿ ಇಬ್ಬರೂ ಪ್ರಾಣ ಕಳೆದುಕೊಂಡಿರುವುದನ್ನು ನೋಡಿದ ನೇತ್ರಾ ತಾನೂ ನೇಣಿಗೆ ಕೊರಳೊಡ್ಡಿದ್ದು, ಒಟ್ಟಿಗೇ ಎಲ್ಲರೂ ಬದುಕನ್ನು ಕಳೆದುಕೊಂಡಂತಾಗಿದೆ. ಸ್ಥಳಕ್ಕೆ ಸವಣೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡೌರಿ ಹಣಕ್ಕಾಗಿ ಪತ್ನಿಯನ್ನು ತವರಿಗೆ ಕಳುಹಿಸಿ ನೇಣು ಹಾಕಿಕೊಂಡ!

ಆನೇಕಲ್: ಅವರಿಗೆ ಮದುವೆಯಾಗಿ ೧೦ ವರ್ಷಗಳೇ ಕಳೆದಿತ್ತು. ಆದರೆ, ಇತ್ತೀಚೆಗೆ ಮದ್ಯ ವ್ಯಸನಿಯಾಗಿದ್ದ ಹಣ ತರುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಕೆಲವು ದಿನಗಳ ಹಿಂದೆ ಪತ್ನಿಯ ಮೇಲೆ ಹಲ್ಲೆ ಮಾಡಿ ತವರಿಗಟ್ಟಿದ ಆತ ಇತ್ತ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ (Suicide case) ಕಳೆದುಕೊಂಡಿದ್ದಾನೆ.

ಬೆಂಗಳೂರು ಹೊರವಲಯ ದಕ್ಷಿಣ ತಾಲೂಕಿನ ಬನ್ನೇರುಘಟ್ಟ ಸಮೀಪದ ಶ್ಯಾನಭೋಗನಹಳ್ಳಿಯಲ್ಲಿ ಘಟನೆ ನಡೆದಿದ್ದು, ಇಲ್ಲಿನ ರಾಜೇಶ್(35) ಮೃತ ವ್ಯಕ್ತಿ.

ವೃತ್ತಿಯಲ್ಲಿ ಗಣೇಶ ಮೂರ್ತಿ ತಯಾರಿಕೆ ಮಾಡುತ್ತಿದ್ದ ಈತನಿಗೆ ಹತ್ತು ವರ್ಷಗಳ ಹಿಂದೆ ನಗರದ ಪುಟ್ಟೇನಹಳ್ಳಿ ವಾಸಿ ಲಾವಣ್ಯ ಜೊತೆ ವಿವಾಹವಾಗಿತ್ತು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಇತ್ತೀಚೆಗೆ ಮದ್ಯವ್ಯಸನಿಯಾಗಿದ್ದ ರಾಜೇಶ್ ಪದೇಪದೆ ಡೌರಿ ತರುವಂತೆ ಒತ್ತಾಯಿಸಿ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದ. ವಾರದ ಹಿಂದೆಯೂ ಪತ್ನಿಗೆ ಹಲ್ಲೆ ಮಾಡಿ ತವರಿಗೆ ಕಳುಹಿಸಿದ್ದ. ಹಣ ತಾರದೆ ಇದ್ದರೆ ಮನೆಗೆ ಬಿಟ್ಟುಕೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದ. ಈ ನಡುವೆ, ಶನಿವಾರ ರಾತ್ರಿ ರಾತ್ರಿ ವೇಲ್ ನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ : Teacher Suicide: ಪ್ರತಿಭಟನೆಗೆ ಬಂದು ರೈಲಿಗೆ ತಲೆಕೊಟ್ಟ ಅನುದಾನಿತ ಶಾಲಾ ಶಿಕ್ಷಕ

Exit mobile version