Site icon Vistara News

Medical‌ Negligence | ವೈದ್ಯರಿಲ್ಲದೇ ಕೊನೆಯುಸಿರೆಳೆದ ಬಾಲಕ; ಎಚ್‌ಡಿ ಕುಮಾರಸ್ವಾಮಿ ಮುಂದೆ ಶವ ಇಟ್ಟು ಕಣ್ಣೀರು

Medical‌ Negligence ತುಮಕೂರು ಮಧುಗಿರಿ ಕೊಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ

ತುಮಕೂರು: ಇಲ್ಲಿನ ಮಧುಗಿರಿ ತಾಲೂಕಿನ ಕೊಡಿಗೆನಹಳ್ಳಿಯಲ್ಲಿ ಶುಕ್ರವಾರ ಮಧ್ಯಾಹ್ನ ಬಾಲಕನೊಬ್ಬ ನೀರಿನ ಸಂಪಿಗೆ ಬಿದ್ದು ಅಸ್ವಸ್ಥನಾಗಿದ್ದ. ಕೂಡಲೇ ಬಾಲಕನನ್ನು (Medical‌ Neglect) ಆಸ್ಪತ್ರೆಗೆ ಕರೆತರಲಾಯಿತಾದರೂ, ವೈದ್ಯರಿಲ್ಲದೇ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ. ಬಾಲಕನ ಮೃತದೇಹವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದಿಟ್ಟು ಗ್ರಾಮಸ್ಥರು ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.

ಕೊಡಿಗೆನಹಳ್ಳಿ ನಿವಾಸಿ ಶೌಕತ್ ಪುತ್ರ ಸಾದೀಕ್ ಶಾಲೆಯಿಂದ ಮನೆಗೆ ಬಂದಾಗ ನೀರಿನ ಸಂಪ್‌ಗೆ ಬಿದ್ದು ಅಸ್ವಸ್ಥಗೊಂಡಿದ್ದ. ಮಗು ಜೀವವಿದ್ದಾಗಲೇ ಕೊಡಿಗೆನಹಳ್ಳಿ ಆಸ್ಪತ್ರೆಗೆ ಕುಟುಂಬಸ್ಥರು ಕರೆತಂದಿದ್ದಾರೆ. ಆದರೆ ವೈದ್ಯರಿಲ್ಲದೇ ಆಸ್ಪತ್ರೆಯಲ್ಲಿ ಮಗು ಕೊನೆಯುಸಿರೆಳೆದಿದೆ. ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸುವಂತೆ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರನ್ನು ಗ್ರಾಮಸ್ಥರು ಒತ್ತಾಯಿಸಿದರು.

ಆಂಬ್ಯುಲೆನ್ಸ್‌ ಇಲ್ಲದೆ ಮಹಿಳೆ ಸಾವು
ಆಟೋ ಪಲ್ಟಿಯಾಗಿ ಮಹಿಳೆಯೊಬ್ಬರು ಗಂಭೀರ ಗಾಯಗೊಂಡಿದ್ದರು. ಈ ವೇಳೆ ಆದರೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಇಲ್ಲದೇ, ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದಾಗಿ ಚಿಕಿತ್ಸೆ ಸಿಗದೇ ಕಳೆದ ಎರಡು ದಿನಗಳ ಹಿಂದಷ್ಟೇ ಮಹಿಳೆ ಮೃತಪಟ್ಟಿದ್ದರು ಎಂದು ಆಕ್ರೋಶ ಹೊರಹಾಕಿದರು.

ಸಾಂತ್ವನ ಹೇಳಿದ ಕುಮಾರಸ್ವಾಮಿ
ಇದೇ ವೇಳೆ ಕುಮಾರಸ್ವಾಮಿ ಅವರು ಕುಟುಂಬಿಕರಿಗೆ ಸಾಂತ್ವನ ಹೇಳಿದರು. ಸಿಎಂ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್‌ಗೆ ಕರೆ ಮಾಡಿ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಡಿಹೆಚ್ಓ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಕೊಡಿಗೆನಹಳ್ಳಿ ಪೊಲೀಸ್ ಠಾಣೆಗೆ ವೈದ್ಯರ ವಿರುದ್ಧ ದೂರು ಕೊಡುವಂತೆ ಕುಟುಂಬಸ್ಥರಿಗೆ ಸಲಹೆ ನೀಡಿದರು.

ಇದನ್ನೂ ಓದಿ | JDS Pancharatna Yatre | ಪಂಚರತ್ನ ರಥಯಾತ್ರೆಯಲ್ಲಿ ಮಗುವಿಗೆ ನಾಮಕರಣ ಮಾಡಿದ ಮಾಜಿ ಸಿಎಂ ಕುಮಾರಸ್ವಾಮಿ

Exit mobile version