ಬೆಂಗಳೂರು: ರಾಜ್ಯದಲ್ಲಿ ನಡೆಯಲಿದೆಯಾ ಭಾರಿ ರಾಜಕೀಯ ಬೆಳವಣಿಗೆ? (Political Development) ಲೋಕಸಭಾ ಚುನಾವಣೆ (Lok Sabha Election 2024) ಬಳಿಕ ದೊಡ್ಡ ಮಟ್ಟದ ಆಪರೇಷನ್‌ಗೆ (Mega Operation) ತಯಾರಿ ನಡೆಯುತ್ತಿದೆಯಾ? ಆ ಮೂವರು ನಾಯಕರ ಪ್ಲ್ಯಾನ್ ವರ್ಕೌಟ್ ಆದರೆ ಸರ್ಕಾರ ಪತನವಾಗುತ್ತದೆಯೇ? ಇಂಥದ್ದೊಂದು ಮುನ್ಸೂಚನೆ ಈಗ ರಾಜ್ಯ ರಾಜಕೀಯದಲ್ಲಿ (Karnataka Politics) ಕಾಣಿಸಿಕೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಅನೇಕ ಚಟುವಟಿಕೆ ನಡೆಯುತ್ತಿರುವುದು ಇದಕ್ಕೆ ಪುಷ್ಟಿ ನೀಡುತ್ತಿವೆ. ಹಲವು ರೀತಿಯ ಲೆಕ್ಕಾಚಾರಗಳು ಈಗ ನಡೆಯುತ್ತಲಿದ್ದು, ಮುಂದೆ ಏನು ಬೇಕಾದರೂ ಆಗಬಹುದು ಎಂಬ ಪರಿಸ್ಥಿತಿ ತಲೆದೋರಬಹುದಾಗಿದೆ.
ರಾಜ್ಯ ರಾಜಕೀಯದಲ್ಲಿ ಮೈತ್ರಿ ಲೆಕ್ಕಾಚಾರವು ಈಗ ಇಂಥ ಬೆಳವಣಿಗೆಗೆ ಶ್ರೀಕಾರ ಹಾಡುತ್ತಿದೆ. ಮೈತ್ರಿ ಮೂಲಕ ಚುನಾವಣೆ ಎದುರಿಸಲಿರುವ ಜೆಡಿಎಸ್-ಬಿಜೆಪಿ (JDS BJP alliance) ಭಾರಿ ತಂತ್ರಗಾರಿಕೆಯನ್ನು (Political Strategy) ಹೆಣೆಯುತ್ತಿದೆ. ಅಲ್ಲದೆ, ಮೈತ್ರಿ ಮಾತುಕತೆ ವೇಳೆ ಈ ಬಗ್ಗೆ ಬಿಜೆಪಿ ನಾಯಕರ ಮುಂದೆ ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (Former Chief Minister and JDS Legislature Party leader HD Kumaraswamy) ಅವರು ಕೆಲವು ಲೆಕ್ಕಾಚಾರಗಳನ್ನು ಹೇಳಿದ್ದಾರೆನ್ನಲಾಗಿದೆ.
ಇದನ್ನೂ ಓದಿ: Tiger attack: ಹುಲಿ ದಾಳಿಗೆ ರೈತ ಬಲಿ; ಜಾನುವಾರು ಮೇಯಿಸಲು ಹೋದವನ ಮೇಲೆ ಅಟ್ಯಾಕ್
ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಹಿಂದಿನ ಮರ್ಮ ಏನು?
ಪದೇ ಪದೆ ಸರ್ಕಾರ ಬದಲಾವಣೆ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ. ಇನ್ನಾರು ತಿಂಗಳಿಗೆ ಸರ್ಕಾರ ಇರುವುದಿಲ್ಲ ಎಂದೂ ಮಾತನಾಡುತ್ತಿದ್ದಾರೆ. ಅದಕ್ಕೆ ಬಿಜೆಪಿಯ ಆ ನಾಯಕನ ಸಪೋರ್ಟ್ ಬೇಕು ಎಂದು ಹೇಳಿದ್ದಾರೆ. ಹಾಗಾದರೆ ಆ ನಾಯಕ ಯಾರು? ಎಂಬುದು ಸದ್ಯದ ಕುತೂಹಲವಾಗಿದ್ದು, ಈ ಬಗ್ಗೆ ವಿಸ್ತಾರ ನ್ಯೂಸ್‌ನಲ್ಲಿ ಎಕ್ಸ್‌ಕ್ಲೂಸಿವ್ ಸ್ಟೋರಿಯೊಂದನ್ನು ನೀಡಲಾಗಿದೆ.
ಏನಿದು ರಾಜಕೀಯ ಲೆಕ್ಕಾಚಾರ?
ಲೋಕಸಭಾ ಚುನಾವಣೆ ಬಳಿಕ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಹೆಚ್ಚು ಸ್ಥಾನ ಗೆದ್ದರೆ ಕಷ್ಟ. ಮತ್ತೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದರೆ ರಾಜ್ಯ ಸರ್ಕಾರಕ್ಕೆ ಅಭದ್ರತೆ ಕಾಡಲಿದೆ. ದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ (Home Minister Amit Shah) ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (BJP national president JP Nadda) ಅವರನ್ನು ಎಚ್.ಡಿ. ಕುಮಾರಸ್ವಾಮಿ ಭೇಟಿ ಮಾಡಿದಾಗ ಈ ಬಗ್ಗೆ ಚರ್ಚೆ ನಡೆದಿದೆ ಎಂದು ಹೇಳಲಾಗಿದೆ.
ಮಹಾರಾಷ್ಟ್ರ ಮಾದರಿಯಲ್ಲಿ ಬದಲಾವಣೆ ಬಗ್ಗೆ ಮಾತನಾಡಿರುವ ಎಚ್‌ಡಿಕೆ
ರಾಜ್ಯ ಕಾಂಗ್ರೆಸ್‌ನಲ್ಲಿ ಇರುವ ಬಣ ಪಾಲಿಟಿಕ್ಸ್ (Faction Politics) ಬಗ್ಗೆ ಚರ್ಚೆ ಮಾಡಲಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಕಡಿಮೆ ಸ್ಥಾನ ಗೆದ್ದರೆ ನಾಯಕತ್ವ ಬದಲಾವಣೆ ಬಗ್ಗೆ ಮಾತುಗಳು ಕೇಳಿಬರುತ್ತವೆ. ಆಗ ಮತ್ತಷ್ಟು ಅಸಮಾಧಾನಗಳು, ಗೊಂದಲಗಳು ಹೆಚ್ಚಾಗುತ್ತವೆ. ಬಣಗಳ ತಿಕ್ಕಾಟ ಪ್ರಾರಂಭವಾಗುತ್ತದೆ. ಅದರ ಅನುಕೂಲವನ್ನು ನಾವು ಪಡೆಯಬೇಕು ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಬೇಕು ಯಡಿಯೂರಪ್ಪ ಅವರ ಸಪೋರ್ಟ್
ಅಸಮಾಧಾನಿತ ಶಾಸಕರು ನನ್ನ ಜತೆ ಸಂಪರ್ಕದಲ್ಲಿ ಇದ್ದಾರೆ. ಮಹಾರಾಷ್ಟ್ರ ಮಾದರಿಯಲ್ಲಿ ಬದಲಾವಣೆ ಆಗುತ್ತದೆ. ಇದಕ್ಕೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ (Former CM BS Yediyurappa) ಅವರ ಬೆಂಬಲ ಬೇಕೇ ಬೇಕು ಎಂದು ಅಮಿತ್ ಶಾ ಬಳಿ ಎಚ್.ಡಿ. ಕುಮಾರಸ್ವಾಮಿ ಕೇಳಿದ್ದಾರೆ ಎನ್ನಲಾಗಿದೆ.
ಮೈತ್ರಿ ಕೇವಲ ಲೋಕಸಭೆ ಚುನಾವಣೆಗೆ ಅಷ್ಟೇ ಸೀಮಿತವಲ್ಲ. ಮುಂದೆ ಸರ್ಕಾರ ಬದಲಿಸಲೂ ಬೇಕು ಎಂದು ಸ್ವತಃ ಅಮಿತ್ ಶಾ ಅವರು ಈ ವೇಳೆ ಹೇಳಿದ್ದಾರೆನ್ನಲಾಗಿದೆ. ಸಮ್ಮಿಶ್ರ ಸರ್ಕಾರ ತರಲು ಇಂದಿನಿಂದಲೇ ಪ್ಲ್ಯಾನ್ ಮಾಡಿ ಎಂದು ಅಮಿತ್ ಶಾ ಹೇಳಿದ್ದಾರೆ. ಲೋಕಸಭೆ ಚುನಾವಣೆಯನ್ನು ಗೆದ್ದು ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ತರುವುದೇ ನಮ್ಮ ಉದ್ದೇಶ ಎಂದ ಅಮಿತ್ ಶಾ ಇದೇ ವೇಳೆ ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Monsoon Deficit 2023: ದೇಶದಲ್ಲಿ 5 ವರ್ಷದಲ್ಲೇ ಕನಿಷ್ಠ ಮಳೆ; ಶೀಘ್ರವೇ ಬೆಲೆ ಏರಿಕೆ ಗ್ಯಾರಂಟಿ!
ಹೀಗಾಗಿ ಅಮಿತ್ ಶಾ, ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಒಂದಾಗಿ ಪ್ಲ್ಯಾನ್ ಮಾಡಿದರೆ ಈ ಬಾರಿ ಲೋಕಸಭಾ ಚುನಾವಣೆಯ ನಂತರ ರಾಜ್ಯ ರಾಜಕೀಯದಲ್ಲಿ ಭಾರಿ ಬದಲಾವಣೆ ಆಗಬಹುದು ಎಂಬ ಲೆಕ್ಕಾಚಾರಗಳು ನಡೆದಿವೆ.