Site icon Vistara News

CCB Raid: ಮೀಟರ್ ಬಡ್ಡಿ ದಂಧೆ; 4 ಕಡೆ ಸಿಸಿಬಿ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ನಗದು, ಚಿನ್ನಾಭರಣ ವಶ

cash and gold ornaments

ಬೆಂಗಳೂರು: ಮೀಟರ್ ಬಡ್ಡಿ ದಂಧೆ (CCB Raid) ನಡೆಸುತಿದ್ದ ನಾಲ್ಕು ಕಡೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ಲಕ್ಷಾಂತರ ರೂ. ಮೌಲ್ಯದ ನಗದು, ಚಿನ್ನಾಭರಣ ವಶಕ್ಕೆ ಪಡೆದಿದ್ದು, ಆರೋಪಿಗಳ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಚಾಮರಾಜ ಪೇಟೆಯಲ್ಲಿ ವೆಂಕಟೇಶ, ಬಸವನಗುಡಿಯಲ್ಲಿ ಎಎಸ್‌ಐ ಪುತ್ರಿ ಶೀಲ, ಕಾಮಾಕ್ಷಿ ಪಾಳ್ಯದ ರೌಡಿ ಶೀಟರ್ ಜಗದೀಶ್ ಅಲಿಯಾಸ್ ಟಾಮಿ, ಬಸವೇಶ್ವರ ನಗರದಲ್ಲಿ ಒಬ್ಬರ ಮನೆ ಮೇಲೆ ದಾಳಿ ನಡೆದಿದ್ದು, ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ದಾಳಿ ವೇಳೆ 42,42,000 ರೂ. ಮೌಲ್ಯದ ನಗದು, ಚಿನ್ನಾಭರಣ ಸೇರಿ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇದರಲ್ಲಿ 23,42,400 ರೂ. ನಗದು, 7,00,000 ರೂ. ಮೌಲ್ಯದ 127 ಗ್ರಾಂ ಚಿನ್ನಾಭರಣ, 10 ಕೆಜಿ ಬೆಳ್ಳಿ, ಚೆಕ್‌ಗಳು- 109, ಡಿಮಾಂಡ್ ಪ್ರಾಮಿಸರಿ ನೋಟ್-50, ಖಾಲಿ ಬಾಂಡ್ ಪೇಪರ್-42, ಶುದ್ಧ ಕ್ರಯ ಪ್ರತ್ರಗಳು-85, ಸಾಲ ನಮೂದಿಸಿದ ದಾಖಲಾತಿ-35, ಇ- ಸ್ಪಾಂಪ್ ಪೇಪರ್‌ಗಳು-11, ಪಾಕೆಟ್ ಪುಸ್ತಕ-45, ಅಗ್ರಿಮೆಂಟ್ ಪ್ರತಿಗಳು-15, ರೋಲೆಕ್ಸ್ ವಾಚ್‌-6 ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ | Monkey Attack : ಮಂಗನ ದಾಳಿಗೆ ವ್ಯಕ್ತಿ ಬಲಿ; ರಾತ್ರಿ ಹೊರಬಂದಾಗ ಕಾದು ಕುಳಿತು ಅಟ್ಯಾಕ್‌

ಬಡ್ಡಿಗೆ ಸಾಲ ಕೊಟ್ಟು ಸಾರ್ವಜನಿಕರಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುವ ಮೂಲಕ ಕಿರುಕುಳ ನೀಡಲಾತ್ತಿದೆ ಎಂದು ತನಿಖೆ ವೇಳೆ ತಿಳಿದುಬಂದಿದೆ.

ಮಂಗನ ದಾಳಿಗೆ ವ್ಯಕ್ತಿ ಬಲಿ; ರಾತ್ರಿ ಹೊರಬಂದಾಗ ಕಾದು ಕುಳಿತು ಅಟ್ಯಾಕ್‌

Monkey attack kills man in Chitradurga

ದಾವಣಗೆರೆ: ಚಿರತೆ ದಾಳಿ, ಆನೆ ದಾಳಿ, ಹುಲಿ-ಕರಡಿ ದಾಳಿ ಆಯಿತು. ಈಗ ಮಂಗಗಳು ಕೂಡಾ ಮನುಷ್ಯರನ್ನು ಬೆನ್ನಟ್ಟಿ ಕೊಲ್ಲುವ ಹಂತಕ್ಕೆ ಪರಿಸ್ಥಿತಿ ತಲುಪಿದೆಯಾ? ಹೌದು ಎನ್ನುತ್ತದೆ ದಾವಣಗೆರೆ ಜಿಲ್ಲೆಯ (Davanagere News) ಹೊನ್ನಾಳಿ ತಾಲೂಕಿನಲ್ಲಿ ನಡೆದ ಘಟನೆ. ಇಲ್ಲಿನ ಅರಕೆರೆ ಎ.ಕೆ. ಕಾಲೊನಿಯಲ್ಲಿ ಮಂಗನ ದಾಳಿಗೆ (Monkey Attack) ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ (Man dies of Monkey attack).

ಇಲ್ಲಿನ 70 ವರ್ಷದ ಗುತ್ಯಪ್ಪ ಎಂಬವರ ಮನೆ ಪರಿಸರದಲ್ಲಿ ಮಂಗಗಳ ಉಪಟಳ ಭಾರಿ ಜಾಸ್ತಿಯಾಗಿದೆ. ಭಾನುವಾರ ರಾತ್ರಿ ಗುತ್ಯಪ್ಪ ಅವರು ಮೂತ್ರ ವಿಸರ್ಜನೆಗೆಂದು ಎದ್ದು ಹೊರಬಂದಾಗ ಅವರ ಮನೆಯ ಅಂಗಳದಲ್ಲೇ ಇದ್ದ ಕೋತಿ ಅವರ ಮೇಲೆ ದಾಳಿ ಮಾಡಿದೆ. ಅವರ ಮುಖ ಮತ್ತು ಕೈಗಳಿಗೆ ಕಚ್ಚಿ, ಪರಚಿ ಗಾಯ ಮಾಡಿದೆ. ಗುತ್ಯಪ್ಪ ಅವರ ಚೀರಾಟ ಕೇಳಿ ಮನೆಯವರು ಹೊರಗೋಡಿ ಬಂದಾಗ ಕೋತಿ ಅವರನ್ನು ಬಿಟ್ಟು ಪರಾರಿಯಾಗಿದೆ.

ಆದರೆ, ಅಷ್ಟು ಹೊತ್ತಿಗೆ ಗುತ್ಯಪ್ಪ ಅವರು ನೆಲಕ್ಕೆ ಉರುಳಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟು ಹೊತ್ತಿಗೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಅವರು ಮಂಗದ ದಾಳಿಗೆ ಒಳಗಾದ ಹೊತ್ತಿನಲ್ಲಿ ಭಯದಿಂದ ಹೃದಯಾಘಾತವಾಗಿ ಪ್ರಾಣ ಕಳೆದುಕೊಂಡಿರಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ | Self Harming: ದಪ್ಪ ಇದೇನೆ ಎಂದು ಮನನೊಂದು ಕಟ್ಟಡದಿಂದ ಜಿಗಿದು MBBS ವಿದ್ಯಾರ್ಥಿನಿ ಆತ್ಮಹತ್ಯೆ

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಭೇಟಿ ಅವರು ಭೇಟಿ ನೀಡಿ ಮೃತ ಗುತ್ಯಪ್ಪನ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಭಾಗದಲ್ಲಿ ಕರಡಿ, ಚಿರತೆ, ಮಂಗಗಳ ಕಾಟ ಹೆಚ್ಚಾಗಿದೆ ಎಂದು ರೇಣುಕಾಚಾರ್ಯ ಬಳಿ ಗ್ರಾಮಸ್ಥರು ದೂರು ಹೇಳಿಕೊಂಡರು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ರೇಣುಕಾಚಾರ್ಯ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version