Site icon Vistara News

Midday Meal Scheme | ಮಕ್ಕಳ ಮಧ್ಯಾಹ್ನದ ಊಟಕ್ಕೆ ತಟ್ಟಿದ ಬಿಸಿ; ಪ್ರತಿಭಟನೆಗಿಳಿದ ನೌಕರರು

Midday Meal Scheme Protest

ಬೆಂಗಳೂರು: ಏಕಾಏಕಿ ಕೆಲಸದಿಂದ ತೆಗೆದ ಬಿಸಿಯೂಟ ನೌಕರರಿಗೆ (Midday Meal Scheme) ಪರಿಹಾರ ಕೊಡುವಂತೆ ಆಗ್ರಹಿಸಿ ಬಿಸಿಯೂಟ ನೌಕರರು ಪ್ರತಿಭಟನೆಗೆ ಇಳಿದಿದ್ದಾರೆ. ನೌಕರರ ಪ್ರತಿಭಟನೆ ಎಫೆಕ್ಟ್‌ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ಅಡ್ಡಿಯಾಗಿದೆ.

ನಗರದ ಫ್ರೀಡಂಪಾರ್ಕ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಬಿಸಿಯೂಟ ನೌಕರರು ಜಮಾಯಿಸಿದ್ದು, ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. 2001ರಲ್ಲಿ ಬಿಸಿಯೂಟ ಯೋಜನೆ ಪ್ರಾರಂಭವಾಗಿದ್ದು, 1 ಲಕ್ಷದ 19 ಸಾವಿರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ 50 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಲಾಗುತ್ತಿದೆ. ಆದರೆ, ನಮ್ಮನ್ನು ಸರ್ಕಾರ ಕಡೆಗಣಿಸಿದೆ ಎಂದು ಬಿಸಿಯೂಟ ನೌಕಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿವಿಧ ಜಿಲ್ಲೆಗಳಿಂದ ಆಗಮಿಸುತ್ತಿರುವ ಬಿಸಿಯೂಟ ನೌಕರರು

19 ವರ್ಷಗಳಿಂದ ದುಡಿಸಿಕೊಂಡು ಇದೀಗ ಯಾವುದೇ ಪರಿಹಾರ ಇಲ್ಲದೆ ಕೆಲಸದಿಂದ ಕೈ ಬಿಟ್ಟಿದ್ದಾರೆಂದು ಬಿಸಿಯೂಟ ನೌಕರರು ಕಿಡಿಕಾರಿದ್ದಾರೆ. 2,500 ರೂಪಾಯಿಗೆ ಕೆಲಸ ಮಾಡುತ್ತಿದ್ದು, 60 ವರ್ಷ ತುಂಬಿದ 6 ಸಾವಿರ ಬಿಸಿಯೂಟ ನೌಕರರನ್ನು ವಜಾ ಮಾಡಲಾಗಿದೆ. ಯಾವುದೇ ಪರಿಹಾರ ನೀಡದೆ ಸರ್ಕಾರ ಇವರನ್ನು ಕೆಲಸದಿಂದ ವಜಾಗೊಳಿಸಿದೆ. ಈ ಸಂಬಂಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಮನವಿ ಮಾಡಲಾಗುವುದು ಎಂದರು.

ಇದನ್ನೂ ಓದಿ | ಬಿಸಿಯೂಟದಲ್ಲಿ ರಾಗಿ ಮುದ್ದೆ, ಜೋಳದ ರೊಟ್ಟಿ ನೀಡಲು ಸರ್ಕಾರ ಚಿಂತನೆ, ಕರಾವಳಿಯಲ್ಲಿ ಅಪಸ್ವರ

Exit mobile version