Site icon Vistara News

ಮತದಾರರ ಸಿಂಪತಿ ಗಳಿಕೆಗೆ ಟಾರ್ಗೆಟ್ ಪದ ಬಳಕೆ: ರಾಹುಲ್‌ ಗಾಂಧಿ ಹೇಳಿಕೆಗೆ ಸಚಿವ ಆನಂದ್‌ ಸಿಂಗ್‌ ಟೀಕೆ

ಆನಂದ್‌ ಸಿಂಗ್

ಬಳ್ಳಾರಿ: ಚುನಾವಣೆಯಲ್ಲಿ ಜನರ ಸಿಂಪತಿ ಗಿಟ್ಟಿಸಿಕೊಳ್ಳಲು ಗಾಂಧಿ ಕುಟುಂಬದವರನ್ನು ಟಾರ್ಗೆಟ್ ಮಾಡುತ್ತಿದಾರೆಂಬ ಪದ ಬಳಕೆಯನ್ನು ರಾಹುಲ್‌ ಗಾಂಧಿ ಮಾಡುತ್ತಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಬಿ.ಎಸ್. ಆನಂದ್‌ ಸಿಂಗ್ ಟೀಕಿಸಿದರು.

ನಗರದಲ್ಲಿ ಶನಿವಾರ ನಡೆದ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶದ ಪೂರ್ವಭಾವಿಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಾಂಧಿ ಕುಟುಂಬವನ್ನು ಟಾರ್ಗೆಟ್ ಮಾಡುತ್ತಿದ್ದಾರೆಂದು ರಾಹುಲ್‌ ಗಾಂಧಿ ಹೇಳುತ್ತಿದ್ದಾರೆ. ಆದರೆ ಯಾರು ಮಾಡುತ್ತಿದ್ದಾರೆಂದು ಹೇಳುತ್ತಿಲ್ಲ. ಬೇರೆ ಪಕ್ಷದವರು ಮಾಡುತ್ತಿದ್ದರಾ ಅಥವಾ ಜನರು ಮಾಡುತ್ತಿದ್ದರಾ ಎಂಬುದನ್ನು ಅವರೇ ತಿಳಿಸಬೇಕೆಂದರು.

ಯಾತ್ರೆಯಿಂದ ದೇಶಕ್ಕೇನು ಲಾಭ?
ರಾಹುಲ್ ಗಾಂಧಿಯವರ ಜೋಡೋ ಯಾತ್ರೆಯಿಂದ ದೇಶಕ್ಕೆ ಏನು ಲಾಭ? ಈ ಯಾತ್ರೆಯಿಂದ ಯಾವ ಸಮಸ್ಯೆ ಪರಿಹಾರ ಮಾಡುತ್ತಾರೋ ಎಂಬುದಕ್ಕೆ ನನಗೆ ಉತ್ತರ ಸಿಗುತ್ತಿಲ್ಲ. ನಾನು ಕಳೆದ ೨೦ ವರ್ಷದಿಂದ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ಆದರೆ ಇವರ ಯಾತ್ರೆ ಬಗ್ಗೆ ನನಗೆ ಗೊತ್ತಾಗುತ್ತಿಲ್ಲ ಎಂದರು.

ಇದನ್ನೂ ಓದಿ | ಭಾರತ್‌ ಜೋಡೋ | ಐಕ್ಯತಾ ಯಾತ್ರೆಗೆ ಪ್ರತಿಯಾಗಿ ಬಿಜೆಪಿ ಜಾಹಿರಾತು ವಾರ್‌

ಆಗಿನ ವಿಚಾರವೇ ಬೇರೆ
ಆಗ ಬಳ್ಳಾರಿ ಚಲೋ ಆಲೋಚನೆ ಮಾಡಿದ್ದರು, ಯಾವುದೋ ಸಂದರ್ಭದಲ್ಲಿ ಯಾವುದೋ ವಿಚಾರಕ್ಕೆ ಆಗಿನ ಸಮಾವೇಶ ಮಾಡಿದ್ದಾರೆ, ಎಲ್ಲ ಸಂದರ್ಭದಲ್ಲಿ ಅದೇ ನಡೆಯುತ್ತದೆ ಎಂದರೆ ತಪ್ಪು, ಯಾವ ವಿಚಾರಕ್ಕೆ ಬಳ್ಳಾರಿಯಲ್ಲಿ ಸಮಾವೇಶ ಮಾಡುತ್ತಾರೋ ತಿಳಿಯುತ್ತಿಲ್ಲ ಎಂದರು.

ತನ್ನನ್ನು ಕಟ್ಟಪ್ಪನಿಗೆ ಹೋಲಿಸಿಕೊಂಡ ಸಚಿವ
ಪೂರ್ವಭಾವಿ ಸಭೆಯಲ್ಲಿ ಮಾತನಾಡುವಾಗ ಸಚಿವ ಬಿ.ಎಸ್.ಆನಂದ್ ಸಿಂಗ್, ತಾವು ಈ ಹಿಂದೆ ಕಾಂಗ್ರೆಸ್ ಸೇರ್ಪಡೆ ವಿಚಾರವನ್ನು ಬಾಹುಬಲಿಯ ಕಟ್ಟಪ್ಪನ ಕಥೆಗೆ ಹೋಲಿಸಿದರು. ನಾನು ಕಟ್ಟಪ್ಪನಾಗಿ ವಿಜಯನಗರ ಜಿಲ್ಲೆಯ ಹೊಸದಾಗಿ ಆರಂಭವಾಗಿದೆ. ಬಿಜೆಪಿಯಲ್ಲಿ ಹಲವು ವರ್ಷಗಳಿಂದ ಇದ್ದೇನೆ. ನಾನು ಕಾಂಗ್ರೆಸ್ ಸೇರ್ಪಡೆಯಾಗಿರುವ ವಿಚಾರ ಈಗ ಬೇಡ ಎಂದು ತಿಳಿಸಿದರು.

ಗನ್ ಹಿಡಿಯಲು ಆರ್‌ಎಸ್‌ಎಸ್‌ ಹೇಳಲ್ಲ, ಪಿಎಫ್ಐ ಹೇಳುತ್ತೆ!
ಅಲ್ಪಸಂಖ್ಯಾತರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್‌ ಬ್ಯಾನ್ ಮಾಡಬೇಕೆಂದು ಹೇಳುತ್ತಿದ್ದಾರೆ. ಆದರೆ ಆರ್‌ಎಸ್‌ಎಸ್‌ ಮೂಲಕವೇ ಭಾರತೀಯರ ಸಂಸ್ಕೃತಿ ಮತ್ತು ಸುರಕ್ಷತೆ ಎತ್ತಿ ಹಿಡಿದಿದೆ. ಆರ್‌ಎಸ್‌ಎಸ್‌ನಲ್ಲಿ ಬಾಂಬ್ ಹೇಗೆ ಹಾಕಬೇಕು? ಗನ್ ಹೇಗೆ ಬಳಕೆ ಮಾಡಬೇಕೆನ್ನುವುದನ್ನು ಹೇಳಿಕೊಡುವುದಿಲ್ಲ. ಆದರೆ ಪಿಎಫ್ಐ ಈ ಕೆಲಸ ಮಾಡುತ್ತಿದೆ ಎಂದರು.

ಕಾಂಗ್ರೆಸ್‌ನ ಕೊನೇ ಯಾತ್ರೆ ಇದು
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ ಜೋಡೋ ಯಾತ್ರೆ ಮಾಡುತ್ತಿದ್ದಾರೆ. ಭಾರತ ಜೋಡೋ ಎಲ್ಲಿ ಆಗುತ್ತೆ ಅನ್ನೊದು ಗೊತ್ತಿಲ್ಲ. ಇದು ಕಾಂಗ್ರೆಸ್‌ನ ಕೊನೆಯ ಪಾದಾಯಾತ್ರೆ. ಕನ್ಯಾಕುಮಾರಿಯಿಂದ ಪಾದಯಾತ್ರೆ ಅಂತಾರೆ. ಆದರೆ ರಾತ್ರೋ ರಾತ್ರಿ ಬಂದು ಬಿಡ್ತಾ ಇದ್ದಾರೆ ಎಂದು ಭಾರತ್‌ ಜೋಡೋ ಯಾತ್ರೆಯನ್ನು ವ್ಯಂಗ್ಯ ಮಾಡಿದರು.

ಈ ಸಂದರ್ಭದಲ್ಲಿ ಸಂಸದ ದೇವೇಂದ್ರಪ್ಪ, ಜಿಲ್ಲಾಧ್ಯಕ್ಷ ಮುರಾಹರಿಗೌಡ, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಬಿಜೆಪಿ ಮುಖಂಡರಾದ ಸಿದ್ದೇಶ್, ಓಬಳೇಶ್, ವೀರಶೇಖರ ರೆಡ್ಡಿ, ಚಿದಾನಂದ್ ಯಾದವ್, ಗಾದಿಲಿಂಗನಗೌಡ, ಬೇವಿನಹಳ್ಳಿ ಪ್ರಕಾಶ್ ಸೇರಿದಂತೆ ಇತರರು ಇದ್ದರು.

ಇದನ್ನೂ ಓದಿ | ಭಾರತ್‌ ಜೋಡೋ | ಎರಡನೇ ದಿನಕ್ಕೆ ಮಳೆ ಅಡ್ಡಿ

Exit mobile version