ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ನಿ ಸ್ಪಂದನಾ ಅವರನ್ನು ಕಳೆದುಕೊಂಡ ತಮ್ಮ ಬಾಲ್ಯದ ಗೆಳೆಯ ವಿಜಯ ರಾಘವೇಂದ್ರ (Spandana Vijay Raghavendra) ಅವರಿಗೆ ಸಾಂತ್ವನ ಹೇಳಿದ್ದಾರೆ. ವಿಜಯ ರಾಘವೇಂದ್ರ ಅವರ ಶಾಲಾ ದಿನಗಳ ಗೆಳೆಯರಾದ ಪ್ರಿಯಾಂಕ್, ಈ ಕುರಿತು ತಮ್ಮ ಹೇಳಿಕೆ ನೀಡಿದ್ದಾರೆ.
ಸ್ಪಂದನ ನಿಧನದಿಂದ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ವೈಯಕ್ತಿಕವಾಗಿ ಸ್ಪಂದನ ತುಂಬಾ ಸ್ನೇಹಜೀವಿಯಾಗಿದ್ದು, ನಮ್ಮ ಕುಟುಂಬದ ಮೇಲೆ ಪ್ರಭಾವ ಬೀರಿದ್ದಾರೆ. ವಿಜಯ್ ಮತ್ತು ನಾನು ಸ್ಕೂಲ್- ಕಾಲೇಜುಗಳಲ್ಲಿ ಜೊತೆಗೆ ಓದಿದವರು. ವಿಜಯ್ ಅವರಲ್ಲಿ ಯಾವಾಗಲೂ ಸ್ಟಾರ್ ವರ್ತನೆ ಇರಲಿಲ್ಲ. ಎರಡು ವಾರದ ಹಿಂದೆ ನನಗೆ ಕಾಲ್ ಮಾಡಿದ್ದರು. 3ನೇ ಬಾರಿಗೆ ಮಂತ್ರಿ ಆಗಿದೀಯ, ನಿನಗೆ ಸನ್ಮಾನ ಮಾಡಬೇಕು ಅಂದಿದ್ದರು.
30 ನಿಮಿಷ ಜತೆಯಾಗಿ ಕಾಲ ಕಳೆಯೋಣ, ಡಿನ್ನರ್‌ಗೆ ಸೇರೋಣ, ಶಾಲೆಯ ಸ್ನೇಹಿತರು ಮೀಟ್ ಮಾಡೋಣ. ಆಗಸ್ಟ್ 15ರ ನಂತರ ಭೇಟಿಯಾಗೋಣ ಅಂದಿದ್ದರು ಎಂದು ಖರ್ಗೆ ತಿಳಿಸಿದರು.
ಈ ಘಟನೆ ಅಘಾತವಾಗಿದೆ. ಇವರಿಬ್ಬರೂ ಬಹಳಷ್ಟು ಹೃದಯಗಳನ್ನ ಗೆದ್ದಿದ್ದಾರೆ. ಎಲ್ಲರ ಜೊತೆ ಮಾತನಾಡುವವರು. ಬೇರೆಯವರ ಯಶಸ್ಸಿನಲ್ಲಿ ಸಂತೋಷ ಕಾಣುವವರು. ಸ್ಪಂದನಾ ಸಹೋದರರಿಗೆ ಸ್ಫೂರ್ತಿಯಾಗಿದ್ದರು. 37 ವರ್ಷ ಸಾಯುವ ವಯಸ್ಸು ಅಲ್ಲ. ಈ ಕಷ್ಟ ಕಾಲದಲ್ಲಿ ಕುಟುಂಬಕ್ಕೆ ದೇವರು ಸಹಿಸಿಕೊಳ್ಳುವ ಶಕ್ತಿ ತುಂಬಲಿ ಎಂದು ಪ್ರಿಯಾಂಕ್ ಖರ್ಗೆ ಪ್ರಾರ್ಥಿಸಿದರು.
ಇದನ್ನೂ ಓದಿ: Spandana Vijay Raghavendra : ಸ್ಪಂದನಾ ಜಿಮ್ ಸೇರಿದ್ದು ಬಾಡಿ ಬಿಲ್ಡ್ ಮಾಡಲು ಅಲ್ಲ, ಜೋತುಬಿದ್ದ ಚರ್ಮ tight ಆಗಲು!