ಕಲಬುರಗಿ: ಹಿಂದಿನ ಕಾಲದ ದೇವಸ್ಥಾನ ಎಂದರೆ ಅಲ್ಲಿನ ಗರ್ಭಗುಡಿಯಲ್ಲಿ ಶಿವಲಿಂಗ (Shivalinga) ಇರುತ್ತದೆ ಎಂಬ ಪ್ರತೀತಿ ಇದೆ. ಈ ಹಿನ್ನೆಲೆಯಲ್ಲಿ ಕೆಲವು ದುಳ್ಳರು ನಿಧಿಯ (Treasure Hunter) ಆಸೆಗಾಗಿ ಚಿತ್ತಾಪುರ ತಾಲೂಕಿನ ಸೂಗೂರ ಎನ್ ಗ್ರಾಮದಲ್ಲಿನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ (Mallikarjuna Temple) ಶಿವಲಿಂಗವನ್ನು ಅಗೆದಿರುವ ಪ್ರಕರಣ ಬೆಳಕಿಗೆ ಬಂದಿದೆ. ಹುಣ್ಣಿಮೆಯ ದಿನದಂದೇ ಈ ಕೃತ್ಯವನ್ನು ಎಸಗಿದ್ದು, ಕೊನೆಗೆ ನಿಂಬೆ ಹಣ್ಣನ್ನು ಸ್ಥಳದಲ್ಲಿ ಬಿಟ್ಟು ಹೋಗಿದ್ದಾರೆ.
ಚಿತ್ತಾಪುರದ ಸೂಗೂರ ಎನ್ ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಅದರದ್ದೇ ಆದ ಇತಿಹಾಸವಿದೆ. ಇದು ನೂರು ವರ್ಷಕ್ಕೂ ಹಿಂದಿನ ದೇವಾಲಯವಾಗಿದ್ದು, ಪೂಜೆ- ಪುನಸ್ಕಾರಗಳು ನಡೆಯುತ್ತಿರುತ್ತವೆ. ಹೀಗಾಗಿ ಈ ಶಿವ ಲಿಂಗದ ಕೆಳಗೆ ನಿಧಿ ಇರಲೇಬೇಕೆಂದು ಅಂದುಕೊಂಡಿರುವ ದುಷ್ಕರ್ಮಿಗಳು ಶನಿವಾರ ಮಧ್ಯ ರಾತ್ರಿ ನಂತರ ದೇಗುಲಕ್ಕೆ ನುಗ್ಗಿದ್ದಾರೆ. ಬಾಗಿಲನ್ನು ಒಡೆದು ಒಳ ಬಂದವರು ಶಿವಲಿಂಗವನ್ನೇ ಅಗೆದಿದ್ದಾರೆ.
ಇದನ್ನೂ ಓದಿ: ಕುಡಿಯಲೂ ಆಗದ ಬಾವಿ ನೀರು! ಪಲ್ಗುಣಿ ನದಿಗೆ ತ್ಯಾಜ್ಯ ಬಿಟ್ಟ ಖಾಸಗಿ ಕಂಪನಿಯ ಅಡುಗೆ ಎಣ್ಣೆ ಘಟಕ ಬಂದ್‌ಗೆ ಶಿಫಾರಸು
ದೇವಸ್ಥಾನದಲ್ಲಿರುವ ಶಿವಲಿಂಗವನ್ನು ಅಗೆದು ಪಕ್ಕಕ್ಕೆ ಇಟ್ಟ ದುಷ್ಕರ್ಮಿಗಳು, ಶಿವಲಿಂಗ ತೆಗೆದು ಶಿವಲಿಂಗದ ಕೆಳಗೆ ಮತ್ತಷ್ಟು ಅಗೆದಿದ್ದಾರೆ. ಅಲ್ಲಿ ನಿಧಿಗಾಗಿ ಹುಡುಕಾಟ ನಡೆಸಿದ್ದಾರೆ. ಶಿವಲಿಂಗದ ಕೆಳಗೆ ಏನೂ ಸಿಗದೇ ಹೋಗಿದ್ದರಿಂದ ಪುನಃ ಕಲ್ಲಿನಿಂದ ಮುಚ್ಚಿ ತೆರಳಿದ್ದಾರೆ.
ನಿಂಬೆ ಹಣ್ಣು, ಬಾಳೆ ಹಣ್ಣು ಇಟ್ಟು ಹೋದರು!
ಶಿವಲಿಂಗ ಅಗೆಯುವ ಮುನ್ನ ದೇವಸ್ಥಾನದ ಒಳಗೆ ಬಾಳೆ ಹಣ್ಣು ಮತ್ತು ನಿಂಬೆ ಹಣ್ಣನ್ನು ದುಷ್ಕರ್ಮಿಗಳು ತಂದಿಟ್ಟಿದ್ದರು. ಆದರೆ, ಹೋಗುವಾಗ ಅವುಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಇವುಗಳನ್ನು ಏಕೆ ತಂದಿದ್ದಾರೆ? ತಿನ್ನಲು ತಂದಿದ್ದರಾ? ಅಥವಾ ನಿಧಿ ಸಿಕ್ಕರೆ ಪೂಜೆ ಮಾಡಲು ತಂದಿದ್ದರಾ? ಎಂಬುದು ಸಹ ತಿಳಿದು ಬಂದಿಲ್ಲ.
ಇದನ್ನೂ ಓದಿ: Congress Guarantee: ಮಹಿಳೆಯರೂ ಬಸ್ ಟಿಕೆಟ್ ಪಡೆಯಲೇಬೇಕು: ಟಿಕೆಟ್‌ನಲ್ಲೂ ಪ್ರಚಾರ ಗಿಟ್ಟಿಸಿಕೊಂಡ ಕಾಂಗ್ರೆಸ್!
ಈ ಹಿಂದೆಯೂ ಎರಡು ಬಾರಿ ನಿಧಿಗಾಗಿ ಶೋಧ
ಮಲ್ಲಿಕಾರ್ಜುನ ಎಂಬುವವರ ಜಮೀನಿನಲ್ಲಿರುವ ಈ ದೇವಸ್ಥಾನದಲ್ಲಿ ಈ ಹಿಂದೆಯೂ ಎರಡು ಬಾರಿ ನಿಧಿಗಾಗಿ ಇದೇ ಶಿವಲಿಂಗವನ್ನು ಅಗೆಯಲಾಗಿತ್ತು. ಆದರೆ, ಯಾರು ಮಾಡಿದ್ದಾರೆ? ಎಲ್ಲಿಂದ ಬಂದವರು ಮಾಡಿದ್ದಾರೆ? ಸ್ಥಳೀಯರೋ? ಅಥವಾ ಬೇರೆ ಕಡೆಯವರೋ? ಎಂಬಿತ್ಯಾದಿ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ವಾಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ