Site icon Vistara News

Elephant killed : 20 ವರ್ಷದ ಹೆಣ್ಣು ಕಾಡಾನೆಯನ್ನು ಗುಂಡಿಟ್ಟು ಕೊಂದ ದುಷ್ಕರ್ಮಿಗಳು

Miscreants kills wild elephant at Kodagu

Miscreants kills wild elephant at Kodagu

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮತ್ತು ಮಾನವ ಸಂಘರ್ಷ (Elephant and human conflict) ಮುಂದುವರಿದಿದೆ. ಇಲ್ಲಿ ಕಾಡಾನೆಗಳು (Wild elephants) ಕಾಡಿನ ಭಾಗದಲ್ಲಿ ಮನುಷ್ಯರ ಮೇಲೆ ದಾಳಿ ಮಾಡುವುದು ಸಾಮಾನ್ಯವಾಗಿದ್ದರೆ ಈ ಬಾರಿ ಕಿಡಿಗೇಡಿಗಳು 20 ವರ್ಷ ಪ್ರಾಯದ ಹೆಣ್ಣು ಕಾಡಾನೆಯನ್ನೇ ಗುಂಡಿಟ್ಟು (Elephant killed) ಕೊಂದಿದ್ದಾರೆ.

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಬಾಳುಗೋಡಿನಲ್ಲಿ ಘಟನೆ ನಡೆದಿದೆ. ಇಲ್ಲಿನ ರಸೂಲ್‌ಪುರ ಮತ್ತು ಬಾಳುಗೋಡು ನಡುವಿನ ಜಗದೀಶ್‌ ಎಂಬವರಿಗೆ ಸೇರಿದ ತೋಟದಲ್ಲಿ ಆನೆಯನ್ನು ಕೊಲೆ ಮಾಡಲಾಗಿದೆ.

ಆನೆಯನ್ನು ಗುಂಡಿಟ್ಟು ಕೊಲ್ಲಲಾದ ಕಾಫಿ ತೋಟದಲ್ಲಿ ಅರಣ್ಯಾಧಿಕಾರಿಗಳ ಪರಿಶೀಲನೆ

ಈ ಕಾಡಾನೆ ಆಹಾರ ಅರಸಿ ಬಾಳುಗೋಡಿನ ಜನವಸತಿ ಪ್ರದೇಶಕ್ಕೆ ಬಂದಿತ್ತು ಎನ್ನಲಾಗಿದೆ. ಅದು ತೋಟದೊಳಗೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಗಳು ಭೇಟಿ ನೀಡಿದ್ದಾರೆ. ಆನೆ ಹತ್ಯೆಗೈದ ವ್ಯಕ್ತಿಗಳ ಪತ್ತೆಗೆ ಮುಂದಾಗಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಆನೆಗಳ ದಾಳಿಯಿಂದ ಹಲವಾರು ಸಾವುಗಳು ಸಂಭವಿಸಿವೆ. ಕೆಲವು ವಾರಗಳ ಹಿಂದೆ ಇಲ್ಲಿ ಒಂದೇ ದಿನ ಅಜ್ಜ ಮತ್ತು ಮೊಮ್ಮಗನನ್ನು ಆನೆ ಬಲಿ ಪಡೆದಿತ್ತು. ಆಗ ಸಾರ್ವಜನಿಕರು ಆನೆಯನ್ನು ತಕ್ಷಣ ಹಿಡಿಯದಿದ್ದರೆ ತಾವೇ ಅದನ್ನು ಹಿಡಿದು ಕೊಲ್ಲುವುದಾಗಿ ಎಚ್ಚರಿಕೆ ನೀಡಿದ್ದರು. ಕೊನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ಹಿಡಿದಿದ್ದರು.

ಈ ನಡುವೆ ಆನೆಗಳ ಉಪಟಳ ತಾಳಲಾಗದೆ ಜನರೇ ಕಾನೂನನ್ನು ಕೈಗೆತ್ತಿಕೊಳ್ಳಲು ಮುಂದಾಗುತ್ತಿರುವ ವಿದ್ಯಮಾನಗಳು ಅಲ್ಲಲ್ಲಿ ನಡೆಯುತ್ತಿವೆ.

ನೀರು ತರಲೆಂದು ನದಿಗೆ ತೆರಳಿದ್ದ ಬಾಲಕನ ಹೊತ್ತೊಯ್ದ ಮೊಸಳೆ

ರಾಯಚೂರು: ರಾಜ್ಯದ ಹಲವು ಭಾಗಗಳಲ್ಲಿ ಮೊಸಳೆಗಳ ಹಾವಳಿ (Crocodile attack), ಆತಂಕ ದಿನೇದಿನೆ ಜೋರಾಗುತ್ತಿದೆ. ರಾಯಚೂರಿನಲ್ಲಿ (Raichur News) ಬಾಲಕನೊಬ್ಬ (Crocodile kills boy) ಮೊಸಳೆಗೆ ಬಲಿಯಾಗಿರುವ ವಿದ್ಯಮಾನ ಈ ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ.

ರಾಯಚೂರಿನ ಕುರವಕಲಾ ಗ್ರಾಮದಲ್ಲಿ ನೀರಿಗಾಗಿ ನದಿಗೆ ತೆರಳಿದ್ದ ಬಾಲಕನೊಬ್ಬನನ್ನು ಮೊಸಳೆ ಹೊತ್ತೊಯ್ದಿದೆ. ನವೀನ್(9) ಎಂಬ ಬಾಲಕನೇ ಮೊಸಳೆಯ ಕೈಯಲ್ಲಿ ಸಿಕ್ಕಿ ಹಾಕಿಕೊಂಡವನು.

ಮೊಸಳೆ ಬಾಯಿಗೆ ಸಿಲುಕಿದ ಬಾಲಕ

ಬಾಲಕನ ನವೀನ್‌ನ ಕುಟುಂಬದವರ ಜಮೀನು ಕೃಷ್ಣಾ ನದಿಯ ಪಕ್ಕದಲ್ಲಿದೆ. ಕುಟುಂಬದ ಸದಸ್ಯರು ಈ ಜಮೀನಿನಲ್ಲಿ ಕೆಲಸ ಮಾಡಲೆಂದು ಹೋಗಿದ್ದರು. ಅವರ ಜತೆ ನವೀನ್‌ ಕೂಡಾ ತೆರಳಿದ್ದ. ಈ ನಡುವೆ, ಬಾಯಾರಿಕೆ ಆಯಿತೆಂದು ನವೀನ್‌ನ ಪೋಷಕರು ನೀರು ಕುಡಿಯಲು ನದಿಯ ಬಳಿಗೆ ಹೋಗಿದ್ದರು.

ಈ ಸಂದರ್ಭದಲ್ಲಿ ನವೀನ್‌ ಕೂಡಾ ಕೃಷ್ಣಾ ನದಿಯ ದಡಕ್ಕೆ ತೆರಳಿದ್ದ. ತಾನೂ ನೀರು ಕುಡಿದಿದ್ದಲ್ಲದೆ, ಬಾಟಲ್‌ಗೆ ನೀರು ತುಂಬಿಸಲು ಮುಂದಾದ. ಈ ವೇಳೆ ಒಮ್ಮಿಂದೊಮ್ಮೆಗೇ ಮೊಸಳೆ ದಾಳಿ ಮಾಡಿದೆ.

ಇದೀಗ ಬಾಲಕನನ್ನು ಹೊತ್ತೊಯ್ದಿರುವ ಮೊಸಳೆ ಮತ್ತು ನವೀನ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಯಾಪಲದಿನ್ನಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಗ್ನಿಶಾಮಕ ದಳ ಮತ್ತು ಸ್ಥಳೀಯರಿಂದ ಕಾರ್ಯಾಚರಣೆ ನಡೆಯುತ್ತಿದೆ. ಮಗನನ್ನು ಕಣ್ಣೆದುರೇ ಮೊಸಳೆ ಹೊತ್ತೊಯ್ದ ಘಟನೆಯನ್ನು ಕಣ್ಣಾರೆ ಕಂಡ ಕುಟುಂಬದ ಮಂದಿ ಕಂಗಾಲಾಗಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ಕೃಷ್ಣಾ ನದಿ ತೀರದ ಕೊರ್ತಕುಂದ ಗ್ರಾಮದಲ್ಲಿ 9 ವರ್ಷದ ಬಾಲಕ ಪವನ್ ಮೇಲೆ ಮೊಸಳೆ ದಾಳಿ ಮಾಡಿತ್ತು. ಆದರೆ ಅವನು ಸ್ಥಳೀಯರ ಸಮಯಪ್ರಜ್ಞೆಯಿಂದ ಪಾರಾಗಿದ್ದ.

ಇದನ್ನೂ ಓದಿ: Elephant calf dead: ಕೆರೆಗೆ ಬಿದ್ದ ಬಳಿಕ ತಾಯಿ ಜತೆ ಹೋಗದೆ ದುಬಾರೆ ಸೇರಿದ್ದ ಆನೆ ಮರಿ ಮೃತ್ಯು

Exit mobile version