ಕಲಬುರಗಿ: ಕಲಬುರಗಿ ನಗರದ ಉದನೂರ್ ರಸ್ತೆ ಪಕ್ಕದ ಬಯಲು ಪ್ರದೇಶದಲ್ಲಿ ಏರ್ ಪಿಸ್ತೂಲ್‌ವೊಂದನ್ನು (Air Pistol) ದುಷ್ಕರ್ಮಿಗಳು ಬಿಟ್ಟು ಹೋಗಿದ್ದಾರೆ. ತಡರಾತ್ರಿ ನಾಲ್ಕೈದು ಜನ ಸೇರಿ ಪಾರ್ಟಿ ಮಾಡಿದ ಬಳಿಕ ಮರೆತು ಅಲ್ಲಿಯೇ ಬಿಟ್ಟುಹೋಗಿದ್ದಾರೆನ್ನಲಾಗಿದೆ.
ಶನಿವಾರ (ಜ.೧೪) ಬೆಳಗ್ಗೆ ಈ ರಸ್ತೆ ಮಾರ್ಗವಾಗಿ ಬಂದ ಸಾರ್ವಜನಿಕರಿಗೆ ಏರ್ ಪಿಸ್ತೂಲ್ ಕಂಡಿದ್ದು, ಆತಂಕಕ್ಕೊಳಗಾಗಿದ್ದಾರೆ. ದೂರದಿಂದ ನೋಡಿದಾಗ ಗನ್ ರೀತಿಯಲ್ಲೇ ಕಂಡು ಬಂದಿತ್ತು. ಹತ್ತಿರ ಹೋಗಿ ನೋಡಿದಾಗ ಏರ್ ಪಿಸ್ತೂಲ್ ಎಂಬುದು ಗೊತ್ತಾಗಿದೆ.
ತಡರಾತ್ರಿ ದಾರಿಯಲ್ಲಿ ಹೋಗುವವರನ್ನು ಸುಲಿಗೆ ಮಾಡಲು ಬಳಸಿದ್ದಾರೆಯೇ ಎಂಬ ಅನುಮಾನ ಮೂಡಿದೆ. ಕಲಬುರಗಿ ಹೊರವಲಯದ ರಿಂಗ್ ರಸ್ತೆಯಲ್ಲಿ ಹೆಚ್ಚು ರಾಬರಿ, ಕಳ್ಳತನಗಳಂತಹ ಕೃತ್ಯಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ಶಂಕೆ ವ್ಯಕ್ತವಾಗಿದೆ. ದುಷ್ಕರ್ಮಿಗಳು ಕುಡಿದ ನಶೆಯಲ್ಲಿ ರಸ್ತೆ ಪಕ್ಕದಲ್ಲಿಯೇ ಬಿಟ್ಟು ಹೋಗಿದ್ದಾರೆ. ಸ್ಥಳಕ್ಕೆ ಸಬ್ ಅರ್ಬನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Karnataka Election : ಸಿಎಂ ಬೊಮ್ಮಾಯಿ ಕ್ಲಾಸ್; ಆಡಿಯೊ ನನ್ನದಲ್ಲ, 100% ನಮ್ಮದೇ ಬಹುಮತವೆಂದ ಸಿಪಿವೈ