ಮಡಿಕೇರಿ: ನಿವೃತ್ತ ಸೇನಾ ಯೋಧನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯ ಮಡಿಕೇರಿ ನಗರದಲ್ಲಿ ನಡೆದಿದೆ. ಮಡಿಕೇರಿ ನಗರದ ಉಕ್ಕುಡ ನಿವಾಸಿ ಸಂದೇಶ್ (40) ಮೃತ ದುರ್ದೈವಿ. ವಿವಾಹಿತ ಮಹಿಳೆಯೊಬ್ಬಳ ಸಂಗಕ್ಕೆ ಬಿದ್ದು ಆಕೆಯಿಂದಲೇ ಹನಿಟ್ರ್ಯಾಪ್‌ಗೆ ಒಳಗಾಗಿ ಸಂದೇಶ ಪ್ರಾಣ ಕಳೆದುಕೊಳ್ಳುವ ಸ್ಥಿತಿ ಬಂದಿದೆ.
ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದೇಶ್ ಒಂದು ತಿಂಗಳ ಹಿಂದೆ ನಿವೃತ್ತರಾಗಿದ್ದರು. ಸಂದೇಶ್‌ಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಡಿಕೇರಿ ನಗರದ ಗಣಪತಿ ಬೀದಿಯ ವಿವಾಹಿತ ಮಹಿಳೆ ಟಾರ್ಚರ್ ನೀಡುತ್ತಿದ್ದಾಳೆ. ಆಕೆಯ ಕಾಟ ಸಹಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಂದೇಶ್ ಡೆತ್ ನೋಟ್ ಬರೆದಿಟ್ಟಿದ್ದಾರೆ.
ಸಂದೇಶ್ ಪತ್ನಿ ನೀಡಿದ ದೂರಿನನ್ವಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಹುಡುಕಾಡಿದ ಪೊಲೀಸರಿಗೆ ಸಂದೇಶ್ ಮನೆಯ ಸಮೀಪದ ಪಂಪಿನ ಕೆರೆ ಬಳಿ ಸಂದೇಶ್ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ಹಿನ್ನಲೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕೆರೆಯಲ್ಲಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಇದೆಲ್ಲದರ ನಡುವೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಸಂದೇಶ್ ಪತ್ನಿ ಯಶೋಧ, ನನ್ನ ಪತಿಗೆ ಇಬ್ಬರು ಮಕ್ಕಳನ್ನು ಹೊಂದಿರುವ ಮಹಿಳೆಯೊಬ್ಬಳು ಫ್ರೆಂಡ್ ಅಂತ ಪರಿಚಯ ಮಾಡಿಕೊಂಡಿದ್ದಳು. ಬಳಿಕ ಆಕೆ ನನ್ನ ಪತಿಯನ್ನು ಮರುಳು ಮಾಡಿ ಅವರೊಂದಿಗೆ ಸುತ್ತಾಡಿ ಕೊನೆಗೆ ಅವರನ್ನು ಬ್ಲಾಕ್‌ಮೇಲ್ ಮಾಡಿ ಆತ್ಮಹತ್ಯೆಗೆ ಪ್ರಚೋದಿಸಿದ್ದಾಳೆ ಅಂತ ಆರೋಪಿಸಿದ್ದಾರೆ.
ಇದೇ ಸಂದೇಶ್ ಹಾಗೂ ವಿವಾಹಿತ ಮಹಿಳೆ ದೇಶದ ಹಲವೆಡೆ ಸುತ್ತಾಡಿರುವ ಫೊಟೋಗಳು ಲಭ್ಯವಾಗಿದ್ದು, ಸಂದೇಶ್ ಪತ್ನಿಯ ಜೊತೆಗೂ ಆಕೆ ಫ್ರೆಂಡ್ ಅಂತ ಪರಿಚಯ ಮಾಡಿಕೊಂಡಿದ್ದಳಂತೆ. ಕೊನೆ ಕೊನೆಗೆ ಸಂದೇಶ್ ಪತ್ನಿಗೆ ವಿಚಾರ ತಿಳಿದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು ಅನ್ನುವ ಮಾಹಿತಿ ಕೂಡ ಲಭ್ಯವಾಗಿದೆ.
ಒಟ್ಟಿನಲ್ಲಿ ಪರಸ್ತ್ರಿ ಸಂಗ ಮಾಡಿ ಆಕೆಯಿಂದಲೇ ಟಾರ್ಚರ್‌ಗೆ ಒಳಗಾಗಿ ನಿವೃತ್ತ ಯೋಧ ಪ್ರಾಣವನ್ನಂತೂ ಕಳೆದುಕೊಳ್ಳುವಂತಾಗಿದೆ. ಅದೇನೇ ಆದ್ರೂ ಪೊಲೀಸ್ ತನಿಖೆಯ ಬಳಿಕ ಇಡೀ ಪ್ರಕರಣಕ್ಕೆ ಒಂದು ಕ್ಲಾರಿಟಿ ಸಿಗಲಿದೆ.
ಡೆತ್ ನೋಟ್‌ನಲ್ಲಿ ಏನಿದೆ?
ವಿವಾಹಿತ ಮಹಿಳೆ, ಆಕೆಯ ತಾಯಿ ಮತ್ತು ತಂಗಿ ಸೇರಿಕೊಂಡು ನನ್ನನ್ನು ಹನಿ ಟ್ರ್ಯಾಪ್‌ಗೆ ಬೀಳಿಸಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಅವರು ಮೂವರು ನನ್ನ ಸಾವಿಗೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಬರೆಯಲಾಗಿದೆ.
ಮಹಿಳೆಯ ಅನೈತಿಕ ಸಂಬಂಧಗಳು ನನಗೆ ತಿಳಿದುಬಂದ ಬಳಿಕ ಅವರೆಲ್ಲರೂ ನನ್ನನ್ನು ಫಾಲೋ ಮಾಡಲು, ಮೆಂಟಲ್ ಟಾರ್ಚರ್ ನೀಡಲು ಶುರು ಮಾಡಿದರು ಎಂದು ರೆಸಾರ್ಟ್ ಒಂದರ ಮಾಲೀಕ, ಒಬ್ಬ ಪೊಲೀಸ್ ಹಾಗೂ ಇಬ್ಬರು ಇತರರ ಹೆಸರನ್ನು ಸಂದೇಶ್ ಉಲ್ಲೇಖಿಸಿದ್ದಾರೆ. ನನ್ನ ಒಂದು ಕಾರು ಮತ್ತು ಎಲ್ಲ ಡಾಕ್ಯುಮೆಂಟ್ಸ್ ಆಕೆಯ ಮನೆಯಲ್ಲಿದೆ ಎಂದು ಸಂದೇಶ್ ಡೆತ್ ನೋಟ್‌ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ : Drowned In Canal : ವಿಸಿ ನಾಲೆ ದುರಂತ; ಉರುಳಿ ಬಿದ್ದ ಕಾರು, ನಾಲ್ವರು ಮುಳುಗಿರುವ ಶಂಕೆ!
ಕೇರಳದಿಂದ ಪ್ರವಾಸ ಬಂದಿದ್ದ ವಿದ್ಯಾರ್ಥಿನಿ ಕೆಆರ್‌ಎಸ್‌ನಲ್ಲಿ ಮೃತ್ಯು
ಮೈಸೂರು: ಕೆಆರ್‌ಎಸ್ ಉದ್ಯಾನಕ್ಕೆ (KRS dam) ಪ್ರವಾಸ ಬಂದಿದ್ದ ಕೇರಳದ ವಿದ್ಯಾರ್ಥಿನಿಯೊಬ್ಬಳು (Student from Kerala) ಫಿಟ್ಸ್ ಕಾಯಿಲೆಯಿಂದ ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾಳೆ (Student Death). ಕೇರಳದ ಪಾಲಕ್ಕಾಡ್ ಜಿಲ್ಲೆಯ ಸರ್ಕಾರಿ ಶಾಲೆಯ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಶ್ರೀಸಯನಾ(15) ಮೃತಪಟ್ಟ ದುರ್ದೈವಿ.
ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಟೀಮ್ ಶಾಲಾ ಪ್ರವಾಸದಲ್ಲಿ ಮೈಸೂರಿಗೆ ಬಂದಿತ್ತು. ನವೆಂಬರ್ ಐದರಂದು ಕೇರಳದಿಂದ ಮೈಸೂರಿಗೆ ಆಗಮಿಸಿದ ಸ್ಕೂಲ್ ಟೀಮ್ ಸೋಮವಾರ ಮೈಸೂರಿನ ಎಲ್ಲ ಸ್ಥಳಗಳನ್ನು ವೀಕ್ಷಿಸಿದ ಬಳಿಕ ಕೆ.ಆರ್.ಎಸ್‌ಗೆ ತೆರಳಿತ್ತು. ಅಲ್ಲಿ ಬೃಂದಾವನ ಗಾರ್ಡನ್ಸ್ ವೀಕ್ಷಿಸಿ ಮರಳುವಾಗ ಸಯನಾ ಹಠಾತ್ ಕುಸಿದು ಬಿದ್ದು ಮೃತಪಟ್ಟಿದ್ದಾಳೆ.
ಈ ಸಾವಿನ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದವು. ವಿದ್ಯಾರ್ಥಿನಿ ನೀರಿಗೆ ಬಿದ್ದು ಸಾವು, ಹೃದಯಾಘಾತದಿಂದ ಸಾವು ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹರಡಿತ್ತು. ಆದರೆ, ಆಕೆಯ ತಂದೆ ಶಶಿಕುಮಾರ್ ಅವರು ಮಗಳಿಗೆ ಫಿಟ್ಸ್ ಕಾಯಿಲೆ ಇತ್ತು. ಅದರಿಂದಾಗಿಯೇ ಆಕೆ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ತಿಳಿಸಿದ್ದಾರೆ.
ಕೆ.ಆರ್.ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದ್ದು, ಅದರಲ್ಲಿ ಕೂಡಾ ಅಪಸ್ಮಾರ ಸಮಸ್ಯೆಯಿಂದ ಮೃತಪಟ್ಟ ಮಾಹಿತಿ ಹೊರಬಿದ್ದಿದೆ. ಇದೀಗ ಕುಟುಂಬ ಆಕೆಯ ಮೃತದೇಹವನ್ನು ಕೇರಳಕ್ಕೆ ತೆಗೆದುಕೊಂಡು ಹೋಗಿದೆ.
ಕೇರಳದಿಂದ ಬಂದಿದ್ದ ಸ್ಕೂಲ್ ಟೀಮ್ ಈ ರೀತಿ ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡಾಗ, ಒಬ್ಬ ಬಾಲಕಿ ಮೃತಪಟ್ಟ ಹೊತ್ತಿನಲ್ಲಿ ತಂಡಕ್ಕೆ ಮತ್ತು ಕುಟುಂಬಕ್ಕೆ ನೆರವಾಗಿದ್ದು ಸುವರ್ಣ ಕರ್ನಾಟಕ ಕೇರಳ ಸಮಾಜದ ಅಧ್ಯಕ್ಷ ಡಾ.ಮನು ಮೆನನ್ ಎಂದು ತಂಡ ನೆನಪು ಮಾಡಿಕೊಂಡಿದೆ.