Site icon Vistara News

ರೈತರಿಗೆ ಉಪಯೋಗವಿಲ್ಲದ ಕಾಫಿ ಮಂಡಳಿ ರದ್ದುಪಡಿಸಿ: ಶಾಸಕ ಎಂ.ಪಿ.ಕುಮಾರಸ್ವಾಮಿ ಆಗ್ರಹ

ಕಾಫಿ ಮಂಡಳಿ

ಬೆಂಗಳೂರು: ಕಾಫಿನಾಡಿನ ರೈತರಿಗೆ ಉಪಯೋಗವಿಲ್ಲದ ಈಗಾಗಲೇ ಅಸ್ತಿತ್ವದಲ್ಲಿರುವ ಕಾಫಿ ಅಭಿವೃದ್ಧಿ ಮಂಡಳಿಯನ್ನು ರದ್ದುಗೊಳಿಸಬೇಕು ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಂಗಳವಾರ ಅಧಿವೇಶನದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ಅವರು, ಕಾಫಿ ಅಭಿವೃದ್ಧಿ ಮಂಡಳಿಯಿಂದ 2018ರಿಂದ ಕಾಫಿ ಬೆಳೆ ರೈತರಿಗೆ ಇದುವರೆಗೂ ಯಾವುದೇ ಅತಿವೃಷ್ಟಿ ಪರಿಹಾರ ಬಂದಿಲ್ಲ, ಈ ಬಾರಿ ಮಲೆನಾಡು ಭಾಗದಲ್ಲಿ ಶೇ.33ರಷ್ಟು ಮಳೆಯಾಗಿದೆ ಎಂದು ಕೃಷಿ, ಕಂದಾಯ ಇಲಾಖೆ, ತೋಟಗಾರಿಕಾ ಇಲಾಖೆ ವರದಿ ನೀಡಿದ್ದರೆ, ಕಾಫಿ ಅಭಿವೃದ್ಧಿ ಮಂಡಳಿ ಶೇ.22ರಷ್ಟು ಮಳೆಯಾಗಿದೆ ಎಂದು ವರದಿ ನೀಡಿದೆ. ಆದರೆ, ಈ ಬಾರಿ ಮಲೆನಾಡು ಭಾಗದಲ್ಲಿ ಅತ್ಯಧಿಕ ಮಳೆಯಾಗಿದೆ. ಈ ರೀತಿ ಸುಳ್ಳು ವರದಿ ನೀಡಿ ಜನರ ಹಾದಿ ತಪ್ಪಿಸುವುದು ಸರಿಯಲ್ಲ ಎಂದು ತಿಳಿಸಿದರು.

ಇದನ್ನೂ ಓದಿ | Super Speciality Hospital | ಉತ್ತರ ಕನ್ನಡದಲ್ಲಿ ಪಿಪಿಪಿ ಮಾದರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲವೇ ಮೆಡಿಕಲ್‌ ಕಾಲೇಜು

ಕಾಫಿ ಅಭಿವೃದ್ಧಿ ಮಂಡಳಿಯಿಂದ ಯಾವುದೇ ಉಪಯೋಗವಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮನ್ನು ನಿರ್ಲಕ್ಷಿಸಿವೆ ಎಂಬ ಆತಂಕದಲ್ಲಿ ಬೆಳೆಗಾರರು ಇದ್ದಾರೆ. ಕಾಫಿಯಿಂದ ಈ ಹಿಂದೆ ವಾರ್ಷಿಕವಾಗಿ ವಿದೇಶಿ ವಿನಿಮಯದಿಂದ ೫ ಸಾವಿರ ಕೋಟಿ ರೂಪಾಯಿ ಆದಾಯ ಪಡೆಯಲಾಗುತ್ತಿತ್ತು. ಪ್ರಸ್ತುತ 9 ಸಾವಿರ ಕೋಟಿ ರೂಪಾಯಿ ಆದಾಯ ಪಡೆಯಲಾಗುತ್ತದೆ ಎಂದು ಹೇಳಿದರು.

ಕಾಫಿಯನ್ನು ದೊಡ್ಡ ಉದ್ಯಮ, ವಾಣಿಜ್ಯ ಬೆಳೆಯನ್ನಾಗಿ ಪರಿಗಣಿಸಿರುವುದು ಸರಿಯಲ್ಲ. ಇದನ್ನು ಕೃಷಿ ಬೆಳೆಯನ್ನಾಗಿ ಪರಿಗಣಿಸಿದರೆ ರೈತರಿಗೆ ಸರ್ಕಾರದ ಸವಲತ್ತುಗಳು ದೊರೆಯಲಿದೆ. ಕೇಂದ್ರ ಫಸಲ್ ಬಿಮಾ ಯೋಜನೆಯ ವ್ಯಾಪ್ತಿಯಲ್ಲಿ ತರಬೇಕು ಎಂದು ಆಗ್ರಹಿಸಿದ ಅವರು, ಮಲೆನಾಡು ಭಾಗದಲ್ಲಿ ಪ್ರತಿವರ್ಷ ಹೆಚ್ಚು ಪ್ರಮಾಣದ ಮಳೆಯಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಚಿಕ್ಕಮಗಳೂರು, ಮಡಿಕೇರಿ, ಹಾಸನ ಜಿಲ್ಲೆಯನ್ನು ಅತಿವೃಷ್ಟಿ ಪ್ರದೇಶ ಎಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | ಶಿಕ್ಷಕರ ನೇಮಕಾತಿ ಹಗರಣ ನಡೆದಿದೆ, ಆದರೆ ನಾವು ಹೊಣೆಯಲ್ಲ ಎಂದ ಕಿಮ್ಮನೆ ರತ್ನಾಕರ

Exit mobile version