Site icon Vistara News

Karnataka Election 2023: ಶಾಸಕ ಸುನಿಲ್‌ ನಾಯ್ಕ ಒಬ್ಬ ಅಯೋಗ್ಯ; ಅವರಿಗೆ ಈ ಬಾರಿ ಟಿಕೆಟ್‌ ಬೇಡ: ಶಂಕರ ನಾಯ್ಕ

Karnataka Election 2023 updates MLA Sunil Naik is an unworthy person dont give him party ticket says Shankar Naik

ಕಾರವಾರ: ಭಟ್ಕಳ ಶಾಸಕ ಸುನಿಲ್ ನಾಯ್ಕ ವಿರುದ್ಧ ಸ್ವಪಕ್ಷೀಯರಿಂದಲೇ ಅಸಮಾಧಾನ ಭುಗಿಲೆದ್ದಿದೆ. ಸುನಿಲ್‌ ನಾಯ್ಕ‌ಗೆ ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆಗೆ (Karnataka Election 2023) ಟಿಕೆಟ್ ನೀಡದಂತೆ ಒತ್ತಾಯಗಳು ಕೇಳಿಬಂದಿವೆ. ಈ ಬಗ್ಗೆ ಬಿಜೆಪಿ ಕಾರ್ಯಕರ್ತರು ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಸಕರ ವಿರುದ್ಧ ಅಯೋಗ್ಯ ಎಂದೂ ಏಕವಚನದಲ್ಲಿ ವಾಗ್ದಾಳಿ ನಡೆಸಲಾಗಿದೆ.

ಭಾನುವಾರ (ಮಾ. 19) ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಶಂಕರ ನಾಯ್ಕ, ಶಾಸಕ ಸುನಿಲ್ ನಾಯ್ಕ ಒಬ್ಬ ಅಯೋಗ್ಯ. ಆತ ಶಾಸಕ ಸ್ಥಾನಕ್ಕೆ ಯೋಗ್ಯನಲ್ಲ. ಈ ಬಗ್ಗೆ ಹಿಂದು ಹಾಗೂ ಬಿಜೆಪಿ ಕಾರ್ಯಕರ್ತರಿಗೆ ಯಾವುದೇ ಅನುಮಾನ ಇಲ್ಲ. ಆತ ಬಿಜೆಪಿ ಸದಸ್ಯನಾಗಲೂ ಅನರ್ಹ ಎಂದು ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಶಂಕರ ನಾಯ್ಕ ಗಂಭೀರ ಆರೋಪ ಮಾಡಿದರು.

ಸುದ್ದಿಗೋಷ್ಠಿ ನಡೆಸುತ್ತಿರುವ ಬಿಜೆಪಿ ಕಾರ್ಯಕರ್ತರು

ಇದನ್ನೂ ಓದಿ: Vijay Sankalpa Yatre: ಗುಬ್ಬಿ ಭಿನ್ನಮತಕ್ಕೆ ಹೆದರಿ ಬಿಜೆಪಿ ನಾಯಕರು ಬರಲೇ ಇಲ್ಲ; ನಾಲ್ವರು ಆಕಾಂಕ್ಷಿಗಳದ್ದೇ ರ‍್ಯಾಲಿ !

ನಮ್ಮ ಅಭಿಪ್ರಾಯದ ಪ್ರಕಾರ ದೊಡ್ಡ ಪ್ರಾಣಿ ಎಂದರೆ ಗೋವು. ಆದರೆ ಶಾಸಕ ಸುನಿಲ್ ನಾಯ್ಕ ದೊಡ್ಡ ಪ್ರಾಣಿಯೊಂದರ ಮಾಂಸ ಸೇವನೆ ಮಾಡಿರುವ ಫೋಟೊ ವೈರಲ್ ಆಗಿದೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದರು.

ಭಟ್ಕಳದ ಮುಸ್ಲಿಮರ ಪರಮೋಚ್ಚ ಸಂಸ್ಥೆ ತಂಜೀಂ ಮುಖಂಡರ ಜತೆ ಶಾಸಕ ಸುನಿಲ್, ಪಾರ್ಟಿ ಮಾಡಿರುವ ಫೋಟೊಗಳು ವೈರಲ್ ಆಗಿವೆ. ಅವರು ತಂಜೀಂನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಬಿಜೆಪಿ ಟಿಕೆಟ್ ಸಿಗುವುದಿಲ್ಲವೆಂದು ಕಾಂಗ್ರೆಸ್ ಟಿಕೆಟ್ ಗಳಿಸಿಕೊಳ್ಳುವ ಕಾರಣಕ್ಕೆ ತಂಜೀಂ ಜತೆಗಿನ ಒಪ್ಪಂದದ ಭಾಗವಾಗಿ ಹಾಗೂ ಉದ್ದೇಶಪೂರ್ವಕವಾಗಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರಿಗೆ ಮುಸ್ಲಿಂ ಹೋಟೆಲ್‌ನಿಂದ ತರಿಸಿದ ಹಲಾಲ್ ಮಾಂಸದ ಊಟವನ್ನು ಉಣಬಡಿಸಿದ್ದಾರೆ. ಈ ಮೂಲಕ ಸಿ.ಟಿ. ರವಿ ಅವರು ತಲೆ ತಗ್ಗಿಸುವಂತೆ ಮಾಡಿದ್ದಾರೆ. ಇದನ್ನು ಸ್ವತಃ ಸುನಿಲ್ ನಾಯ್ಕ ಅವರೇ ಒಪ್ಪಿಕೊಂಡಿದ್ದಾರೆ. ಹಾಗಿದ್ದರೆ ಹಲಾಲ್ ವಿರುದ್ಧ ಬಿಜೆಪಿ ನಡೆಸಿದ ಹೋರಾಟಗಳ ಅರ್ಥವೇನು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸ್ವಾರ್ಥಕ್ಕಾಗಿ ಟಿಪ್ಪುವನ್ನು ವಿರೋಧಿಸುವುದು ತಪ್ಪು: ಹರಿಪ್ರಕಾಶ್‌ ಕೋಣೆಮನೆ

ಭಟ್ಕಳದಲ್ಲಿ ಶಾಸಕ ಸುನಿಲ್ ಒಂದು ರೀತಿಯಲ್ಲಿ ಸರ್ವಾಧಿಕಾರಿ ನಾಯಕನಂತಾಗಿದ್ದಾರೆ. ಅವರ ವಿರುದ್ಧ ಮಾತನಾಡುವವರ ಫೋಟೊಗಳನ್ನು ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡಲಾಗುತ್ತದೆ. ಈ ಫೇಕ್ ಐಡಿಗಳ ಪಿತಾಮಹ ಸುನಿಲ್ ನಾಯ್ಕ ಮತ್ತವರ ದಂಡುಪಾಳ್ಯ ತಂಡ. ಶಾಸಕ ಸುನಿಲ್ ಅಧಿಕಾರದಲ್ಲಿ ಹಿಂದುತ್ವ, ಹಿಂದು ಕಾರ್ಯಕರ್ತರು ಅಪಾಯದಲ್ಲಿದ್ದಾರೆ. ಈ ಬಾರಿ ಬಿಜೆಪಿ ಟಿಕೆಟ್ ಸುನಿಲ್‌ಗೆ ನೀಡಬಾರದು. ಒಂದು ವೇಳೆ ನೀಡಿದರೆ ಸುನಿಲ್ ವಿರುದ್ಧ ನಿಲ್ಲುವ ಯಾವುದೇ ಪ್ರಬಲ ಅಭ್ಯರ್ಥಿಗೆ ಹಿಂದು ಕಾರ್ಯಕರ್ತರು ಬೆಂಬಲಿಸಲಿದ್ದಾರೆ ಎಂದರು.

Exit mobile version