ಹಾವೇರಿ: ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಹೋರಾಟ ತಾರ್ಕಿಕ ಅಂತ್ಯಕ್ಕೆ ಬಂದಿದೆ. ವಿಧಾನ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಸಿಎಂ ತಾತ್ವಿಕ ಒಪ್ಪಿಗೆ ನೀಡಿದ್ದಾರೆ. ನವೆಂಬರ್‌ನೊಳಗೆ ರಾಜ್ಯ ಸರ್ಕಾರ ಮೀಸಲಾತಿ ವಿಚಾರದಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲಿದ್ದು, ಬಳಿಕ ಮುಂದಿನ ಹೋರಾಟದ ನಿರ್ಣಯ ಮಾಡೋಣ ಎಂದು ಪಂಚಮಸಾಲಿ ಸಮಾಜಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರ ಶಿಗ್ಗಾವಿಯ ನಿವಾಸದ ಮುಂದೆ ಮಂಗಳವಾರ ಪಂಚಮಸಾಲಿ ಸಮಾಜದಿಂದ 2ಎ ಮೀಸಲಾತಿಗಾಗಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆಯಲ್ಲಿ ಶಾಸಕ ಅರವಿಂದ ಬೆಲ್ಲದ ಜತೆ ಪಾಲ್ಗೊಂಡು ಮಾತನಾಡಿದ ಅವರು, ಶಿಗ್ಗಾಂವಿ ಸಿಎಂ ನಿವಾಸದ ಮುಂದೆ ಐತಿಹಾಸಿಕ ಹೋರಾಟ ಮಾಡುವ ಮೂಲಕ ಮೀಸಲಾತಿ ಕೊಡದಿದ್ದರೆ ಏನು ಪರಿಣಾಮ ಆಗುತ್ತದೆ ಎನ್ನುವ ಸಂದೇಶ ಸರ್ಕಾರಕ್ಕೆ ನೀಡಲಾಗಿದೆ. ಕಳೆದ ಅಧಿವೇಶನದಲ್ಲಿ ಒಂದು ವಾರದಲ್ಲಿ ಸರ್ವಪಕ್ಷದ ಸಭೆ ಕರೆಯುವುದಾಗಿ ಬೊಮ್ಮಾಯಿ ಹೇಳಿದ್ದರು. ಸೋಮವಾರವೂ ಸಿಎಂ ಸಭೆ ನಡೆಸಿದ್ದಾರೆ. ಮೀಸಲಾತಿ ವಿಷಯಕ್ಕೆ ತಾರ್ಕಿಕ ಅಂತ್ಯ ಕೊಡುತ್ತೇವೆ ಎಂದು ಸಿಎಂ ಹೇಳಿರುವುದಾಗಿ ತಿಳಿಸಿದರು.
ಇದನ್ನೂ ಓದಿ | PSI Scam | ಗದ್ದಲದಲ್ಲೇ ಸರ್ಕಾರದ ಉತ್ತರ, ತಾಳ್ಮೆ ಕಳೆದುಕೊಂಡ ಪ್ರಿಯಾಂಕ್ ಖರ್ಗೆ: ಚರ್ಚೆ ಮುಕ್ತಾಯ
ನನಗೆ ಮಂತ್ರಿಯಾಗುವ ಆಸೆ ಇಲ್ಲ, ಸಮಾಜಕ್ಕೆ ದ್ರೋಹ ಮಾಡಬಾರದು ಎನ್ನುವ ಗಟ್ಟಿ ನಿರ್ಧಾರ ಮಾಡಿದ್ದೇನೆ.ನಮ್ಮ ಸಮಾಜದ ಇಬ್ಬರು ಶಾಸಕರು ಹೊರತುಪಡಿಸಿ, ಎಲ್ಲ ಸಮಾಜದ ಶಾಸಕರು ಸದನದಲ್ಲಿ ಬೆಂಬಲ ಕೊಟ್ಟಿದ್ದಾರೆ. ಮೀಸಲಾತಿ ಬಗ್ಗೆ ಚರ್ಚಿಸಲು ಅಧಿವೇಶದಲ್ಲಿ ಅವಕಾಶ ನೀಡುತ್ತೇವೆ ಎಂದು ಸಿಎಂ ಹೇಳಿದ್ದಾರೆ ಎಂದರು.
ಎರಡು ಮೂರು ದಿನಗಳಿಂದ ಸ್ವಾಮೀಜಿಗೆ ಧಮ್ಕಿ ಹಾಕಲಾಗುತ್ತಿದೆ. ಶಿಗ್ಗಾಂವಿಯಲ್ಲಿ ಸಭೆ ಮಾಡಿಸಲ್ಲ ಎಂದು ಹೇಳಿದ್ದಾರೆ.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ಶಿಗ್ಗಾಂವಿಯಲ್ಲಿ ಐತಿಹಾಸಿಕ ಹೋರಾಟ ನಡೆದಿದ್ದು, ಪಂಚಮಸಾಲಿ ಸಮಾಜದ ಬೇಡಿಕೆ ಏನು ಎಂದು ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಸದನದಲ್ಲಿ ನಮ್ಮ ಹುಲಿ ಯತ್ನಾಳ್ ಅವರು ಮೀಸಲಾತಿ ವಿಷಯ ಮಂಡಿಸಿದ್ದಾರೆ. ಮೀಸಲಾತಿಗಾಗಿ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಮೀಸಲಾತಿ ಕೊಡದೆ ಬೊಮ್ಮಾಯಿ, ಬಿಎಸ್‌ವೈ ನಡು ದಾರಿಯಲ್ಲಿ ಕೈಬಿಟ್ಟರು: ಬಸವಜಯ ಮೃತ್ಯುಂಜಯ ಸ್ವಾಮೀಜಿ