ಬೆಂಗಳೂರು: ಅತಿಯಾದರೆ ಅಮೃತವೂ ವಿಷ ಎಂಬ ಗಾದೆ ಮಾತು ಮೊಬೈಲ್ ಫೋನ್‌ಗೆ (Mobile Addiction) ಅನ್ವಯವಾಗುತ್ತದೆ. ಕೈನಲ್ಲೊಂದು ಫೋನ್ ಇದ್ದರೆ ಇಡಿ ಪ್ರಪಂಚವನ್ನೇ ಮರೆತು ಬಿಡುವವರು ಸ್ವಲ್ಪ ಎಚ್ಚರದಿಂದ ಇರಬೇಕು, ಇಲ್ಲದಿದ್ದರೆ ನಿಮ್ಮ ಹೃದಯಕ್ಕೆ (Heart Diseases) ತೊಂದೆಯಾಗುವ ಅಪಾಯವಿದೆ.
ಇತ್ತೀಚೆಗೆ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಕೋವಿಡ್ ಬಳಿಕ ಜನರ ಜೀವನ ಶೈಲಿ ಸಂಪೂರ್ಣ ಬದಲಾಗಿ ಹೋಗಿದೆ. ಯಾಂತ್ರಿಕ ಜೀವನಕ್ಕೆ ಒಗ್ಗಿಕೊಂಡಿರುವ ಜನರಿಗೆ ಹೃದಯ ಸಂಬಂಧಿ ಕಾಯಿಲೆ ಹೆಚ್ಚಾಗುತ್ತಿದೆ. ದೈಹಿಕ ವ್ಯಾಯಾಮದ ಕೊರತೆಯಿಂದಾಗಿ, ಹೆಚ್ಚಿನ ಜನರು ಇಂದು ಅನೇಕ ರೋಗಗಳಿಂದ ಬಳಲುತ್ತಿದ್ದಾರೆ.
ಪ್ರಮುಖವಾಗಿ ಹೃದಯ ಸಂಬಂಧಿತ ಕಾಯಿಲೆ, ಅಧಿಕ ರಕ್ತದೊತ್ತಡ ಸಮಸ್ಯೆ ಹೆಚ್ಚಾಗುತ್ತಿದೆ. ಬಹುತೇಕರು ಏಕಾಏಕಿ ಹೃದಯಾಘಾತಕ್ಕೆ ತುತ್ತಾಗುತ್ತಿದ್ದಾರೆ. ಹೃದಯಾಘಾತಕ್ಕೆ ಮೊಬೈಲ್ ಬಳಕೆಯೂ ಕೂಡ ಕಾರಣ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Sugarcane Juice Benefits: ಕಬ್ಬಿನ ಹಾಲು ಎಂಬ ಭೂಲೋಕದ ಅಮೃತ: ಬೇಸಿಗೆಯಲ್ಲಿ ಕುಡಿಯಲು ಮರೆಯದಿರಿ!
ಮೊಬೈಲ್ ಬಳಕೆಯಿಂದಾಗುವ ಸಮಸ್ಯೆಗಳು
ಅರ್ಧಗಂಟೆಗೂ ಹೆಚ್ಚು ಸಮಯ ಮೊಬೈಲ್‌ನಲ್ಲಿ ಮಾತಾಡಿದರೆ ಬಿಪಿ, ಹೃದಯಾಘಾತದ ಸಮಸ್ಯೆ ಎದುರಾಗಲಿದೆ. ರೇಡಿಯೊ ತರಂಗಾಂತರ ಶಕ್ತಿಯಿಂದ ರಕ್ತದೊತ್ತಡದ ಮೇಲೆ ಪರಿಣಾಮ ಬೀರಲಿದೆ. ಮೊಬೈಲ್ ಬಳಕೆಯಿಂದ ಆರೋಗ್ಯದಲ್ಲಿ ಏರುಪೇರು ಆಗಲಿದೆ. ಅನಗತ್ಯ ಮಾತುಕತೆ ಹಾಗೂ ದೀರ್ಘಾವಧಿ ಬಳಕೆಯು ದೈಹಿಕ, ಮಾನಸಿಕ ಅಸಮತೋಲನಕ್ಕೆ ಕಾರಣವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮೊಬೈಲ್ ಕರೆಗಳ ಮಾತುಕತೆ ಅವಧಿಯು ಕಡಿಮೆ ಇದ್ದಷ್ಟೂ ಆರೋಗ್ಯ ಉತ್ತಮವಾಗಿ ಇರಲಿದೆ. ತೀರಾ ಅವಶ್ಯಕತೆ ಇರುವಾಗ ಮೊಬೈಲ್ ಬಳಸಿ, ಗೀಳಿಗೆ ಬೀಳಬೇಡಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಇನ್ನಷ್ಟು ಆರೋಗ್ಯ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ