ಬೆಂಗಳೂರು: ಶುಕ್ರವಾರ (ನವೆಂಬರ್ ೧೧) ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು ೪ ಗಂಟೆ ೪೫ ನಿಮಿಷಗಳ ಕಾಲ ರಾಜಧಾನಿಯಲ್ಲಿರುತ್ತಾರೆ. ಆ ಸಮಯದಲ್ಲಿ ಅವರು ಯಾವ ಹೊತ್ತಿಗೆ ಎಲ್ಲಿರುತ್ತಾರೆ ಎನ್ನುವ ಕ್ಷಣ ಕ್ಷಣದ ಮಾಹಿತಿ ಈಗ ಲಭ್ಯವಾಗಿದೆ.
ಪ್ರಧಾನಿ ಮೋದಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ಏಳು ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಯಾವುದು ಎಷ್ಟು ಹೊತ್ತಿಗೆ ಮತ್ತು ಎಲ್ಲಿ ಎಂಬ ಮಾಹಿತಿ ಇಲ್ಲಿದೆ.
ಬೆಳಗ್ಗೆ ೯.೦೦ ಗಂಟೆಗೆ ಅಗಮನ
ಬೆಳಗ್ಗೆ ೯.೦೦: ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ
೯.೦೫: ವಿಮಾನ ನಿಲ್ದಾಣದಿಂದ ಹೆಲಿಪ್ಯಾಡ್‌ಗೆ ಆಗಮನ
೯.೨೫: ಹೆಲಿಕಾಪ್ಟರ್ ಮೂಲಕ ಬೆಂಗಳೂರಿನ ಎಎಫ್‌ಟಿಸಿಸಿ ಹೆಲಿಪ್ಯಾಡ್‌ನಲ್ಲಿ ಇಳಿಯುವುದು.
ವಿಧಾನಸೌಧದ ಆವರಣದಲ್ಲಿ
೯.೪೫: ಹೆಲಿಪ್ಯಾಡ್‌ನಿಂದ ರಸ್ತೆ ಮೂಲಕ ಸಾಗಿ ವಿಧಾನ ಸೌಧದ ಆವರಣ ಪ್ರವೇಶ
೯.೪೫ರಿಂದ ೯.೫೫: ದಾಸ ಶ್ರೇಷ್ಠ ಕನಕದಾಸರು ಮತ್ತು ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಗಳಿಗೆ ಪುಷ್ಪಾರ್ಚನೆ
೧೦.೦೦: ವಿಧಾನಸೌಧದ ಆವರಣದಿಂದ ನಿರ್ಗಮನ
ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ
೧೦.೨೦: ವಿಧಾನಸೌಧದಿಂದ ರಸ್ತೆಯ ಮೂಲಕ ಸಾಗಿ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮನ
೧೦.೨೦ರಿಂದ ೧೦.೪೦: ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಭಾರತ್ ಗೌರವ್ ಕಾಶಿ ದರ್ಶನ್ ರೈಲುಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡುವುದು.
ರೈಲು ನಿಲ್ದಾಣದಿಂದ ಹೆಲಿಪ್ಯಾಡ್ ವರೆಗೆ
೧೦.೪೫: ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ನಿರ್ಗಮನ
೧೦.೫೫: ಎಎಫ್‌ಟಿಸಿಸಿ ಹೆಬ್ಬಾಳ್ ಹೆಲಿಪ್ಯಾಡ್, ಬೆಂಗಳೂರುಗೆ ಆಗಮನ
೧೧.೦೦: ಹೆಬ್ಬಾಳ್ ಹೆಲಿಪ್ಯಾಡ್‌ನಿಂದ MI- 17 ಹೆಲಿಕಾಪ್ಟರ್ ಮೂಲಕ ನಿರ್ಗಮನ
ವಿಮಾನ ನಿಲ್ದಾಣ ಎರಡನೇ ಟರ್ಮಿನಲ್ ಉದ್ಘಾಟನೆ
೧೧.೨೦: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ
೧೧.೨೫: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಸ್ತೆ ಮೂಲಕ ನಿರ್ಗಮನ
೧೧.೩೦: ಟರ್ಮಿನಲ್ – ೨ ಕಟ್ಟಡಕ್ಕೆ ಆಗಮನ
೧೧.೩೦ರಿಂದ ೧೧.೫೦: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ೨ ಉದ್ಘಾಟನೆ ಮತ್ತು ವೀಕ್ಷಣೆ
೧೧.೫೦: ಟರ್ಮಿನಲ್ ೨ ಕಟ್ಟಡದಿಂದ ನಿರ್ಗಮನ
ಕೆಂಪೇಗೌಡರ ಪ್ರತಿಮೆ ಅನಾವರಣ
ಮಧ್ಯಾಹ್ನ ೧೨.೦೦ ಗಂಟೆ: ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ ಸ್ಥಳಕ್ಕೆ ಆಗಮನ
೧೨.೦೦ರಿಂದ ೧೨.೨೦: ನಾಡಪ್ರಭು ಕೆಂಪೇಗೌಡರ ೧೦೮ ಅಡಿ ಎತ್ತರದ ಭವ್ಯ ಕಂಚಿನ ಪ್ರಗತಿ ಪ್ರತಿಮೆ ಲೋಕಾರ್ಪಣೆ
೧೨.೨೦: ಪ್ರತಿಮೆ ಆವರಣದಿಂದ ನಿರ್ಗಮನ
ಸಾರ್ವಜನಿಕ ಕಾರ್ಯಕ್ರಮ
೧೨.೩೦: ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಆಗಮನ
೧೨.೩೦ರಿಂದ ೧.೩೦: ಸಾರ್ವಜನಿಕ ಕಾರ್ಯಕ್ರಮ
೧.೩೦: ಸಾವರ್ಜನಿಕ ಕಾರ್ಯಕ್ರಮ ಸ್ಥಳದಿಂದ ನಿರ್ಗಮನ
೧.೪೦: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ
೧.೪೫: ವಿಮಾನದ ಮೂಲಕ ಚೆನ್ನೈಗೆ ಪಯಣ