ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ಬೆಂಗಳೂರಿಗೆ ಆಗಮಿಸಿ ದೇವನಹಳ್ಳಿ ಸಮೀಪ ಬೋಯಿಂಗ್ ಇಂಡಿಯಾ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸೆಂಟರ್ ಕ್ಯಾಂಪಸನ್ನು (BIETC Campus) ಲೋಕಾರ್ಪಣೆ ಮಾಡಿದರು (Modi in Bangalore). ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದ ಜನರು ʻಮೋದಿ.. ಮೋದಿʼ ಎಂದು ಘೋಷಣೆ ಕೂಗಿದಾಗ ಪ್ರಧಾನಿಯವರು ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರನ್ನು ನೋಡಿ ನಕ್ಕ ಘಟನೆ ನಡೆಯಿತು. ಒಟ್ಟಾರೆಯಾಗಿ ಈ ಕಾರ್ಯಕ್ರಮದಲ್ಲಿ ಸಿಎಂ ಮತ್ತು ಪ್ರಧಾನಿ ಮೋದಿಯವರು ಕುಚುಕು ಗೆಳೆಯರಂತೆ (Modi-Siddaramaiah became friends) ಕಂಡರು!
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ ಅವರನ್ನು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆತ್ಮೀಯವಾಗಿ ಬರ ಮಾಡಿಕೊಂಡರು. ಜತೆಗೆ ಹಲವು ಸಚಿವರೂ ಸಾಥ್ ನೀಡಿದ್ದರು. ಅಲ್ಲಿಂದ ಕಾರ್ಯಕ್ರಮಕ್ಕೆ ಬಂದಾಗಲೂ ಮೋದಿ ಮತ್ತು ಸಿದ್ದರಾಮಯ್ಯ ಅವರ ನಡುವಿನ ಆತ್ಮೀಯತೆ ಮುಂದುವರಿದಿತ್ತು.
ಬಿಐಐಟಿಸಿ ಕ್ಯಾಂಪಸ್ ವೀಕ್ಷಣೆಯ ಸಂದರ್ಭದಲ್ಲಿ ಇಬ್ಬರೂ ಅಲ್ಲಿನ ವಿವರಣೆಗಳನ್ನು ಕುತೂಹಲದಿಂದ ಕೇಳಿಸಿಕೊಂಡರು. ಕೆಲವೊಂದು ವಿಚಾರಗಳನ್ನು ಸ್ವತಃ ಪ್ರಧಾನಿ ಮೋದಿಯವರೇ ಸಿದ್ದರಾಮಯ್ಯ ಅವರಿಗೆ ವಿವರಿಸಿದರು. ಬಳಿಕ ವೇದಿಕೆಯಲ್ಲಿ ಮಧ್ಯೆ ರಾಜ್ಯಪಾಲರನ್ನು ಕೂರಿಸಿದರು.
ಐಸಾ ಹೋತಾ ಹೈ ಎಂದ ಮೋದಿ
ಪ್ರಧಾನಿ ಮೋದಿ ಅವರು ಭಾಷಣ ಮಾಡುತ್ತಿದ್ದಾಗ ಮಧ್ಯದಲ್ಲಿ ಒಂದು ಕಡೆ ಅಲ್ಲಿ ಸೇರಿದ್ದ ಜನರು ಮೋದಿ ಮೋದಿ ಎಂದು ಘೋಷಣೆ ಕೂಗಿದರು. ಆಗ ಮೋದಿ ಅವರು ಭಾಷಣ ನಿಲ್ಲಿಸಿ ನಗುಮುಖದಿಂದಲೇ ಸಿದ್ದರಾಮಯ್ಯ ಅವರತ್ತ ನೋಡಿದರು. ಜತೆಗೆ ʻಮುಖ್ಯಮಂತ್ರಿಯವರೇ ಆಗಾಗ ಹೀಗೆ ಆಗುತ್ತದೆʼ ಎಂದು ಹೇಳಿದರು.
ಮೋದಿಯವರ ಮಾತು ಕೇಳಿದ ಸಿದ್ದರಾಮಯ್ಯ ಅವರೂ ಅದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡರು. ಅವರು ನಾಚಿಕೊಳ್ಳುವಂತೆ ಮುಖಕ್ಕೆ ಕೈ ಅಡ್ಡ ಹಿಡಿದರು ಈ ದೃಶ್ಯ ತುಂಬ ಕಚಗುಳಿ ಕೊಡುವಂತಿತ್ತು.
ಸಿದ್ದರಾಮಯ್ಯ ಕೈ ಕುಲುಕಿ ಭುಜತಟ್ಟಿದ ಮೋದಿ
ಅಂತಿಮವಾ ಭಾಷಣ ಮುಗಿಸಿ ತಮ್ಮ ಜಾಗಕ್ಕೆ ಮರಳುವ ಹಂತದಲ್ಲಿ ಸಿದ್ದರಾಮಯ್ಯ ಅವರ ಕೈ ಕುಲುಕಿದರು. ಆಗ ಸಿದ್ದರಾಮಯ್ಯ ಅವರು ಮೋದಿ ಕೈಗಳಿಗೆ ಮೆದುವಾಗಿ ತಟ್ಟಿದರು. ಬಳಿಕ ಎಲ್ಲರ ಜತೆ ಮಾತನಾಡಿ ತೆರಳುವ ಹಂತದಲ್ಲಿ ಮತ್ತೊಮ್ಮೆ ಸಿದ್ದರಾಮಯ್ಯ ಅವರ ಬಳಿ ಬಂದು ಕೈ ಕುಲುಕಿದರು.
ಸಿದ್ದರಾಮಯ್ಯ ಅವರ ಕೈ ಕುಲುಕುತ್ತಲೇ ಅವರ ಭುಜವನ್ನು ತಟ್ಟಿದರು ಮೋದಿ. ಸಣ್ಣಗೆ ಬಾಗಿ ಏನೋ ಮಾತನಾಡಿದರು. ಬಳಿಕ ಒಂದು ಕೈಯಲ್ಲಿ ಸಿದ್ದರಾಮಯ್ಯ ಅವರನ್ನು ಇನ್ನೊಂದು ಕೈಯಲ್ಲಿ ಬಿಜೆಪಿ ನಾಯಕ ಆರ್. ಅಶೋಕ್ ಅವರ ಕೈಯನ್ನು ಹಿಡಿದುಕೊಂಡು ಇಬ್ಬರಲ್ಲೂ ಆತ್ಮೀಯವಾಗಿ ಹರಟಿದರು. ಬಳಿಕ ಇಳಿದು ಹೋಗುವಾಗ ಅಶೋಕ್ ಅವರ ಭುಜವನ್ನು ಮೆದುವಾಗಿ ತಟ್ಟಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರ ನಡುವೆ ಸಿದ್ದರಾಮಯ್ಯ ಅವರ ಹವಾ ಕೂಡಾ ಚೆನ್ನಾಗಿತ್ತು. ಸಿದ್ದರಾಮಯ್ಯ ಅವರಿಗೆ ಸ್ವಾಗತ ಕೋರಿದಾಗ ಹೋ ಎಂಬ ಸದ್ದು ಕೇಳಿಬಂತು.
ಇದನ್ನೂ ಓದಿ: BIETC Campus : ಕರ್ನಾಟಕ ಅತಿ ದೊಡ್ಡ ಏವಿಯೇಷನ್ ಹಬ್ ಆಗಲಿದೆ : ಮೋದಿ ಭವಿಷ್ಯ