Site icon Vistara News

Modi in Bengaluru | ಈ ಮಾರ್ಗಗಳಲ್ಲಿ ಇಂದು ಸಂಚಾರ ನಿಷೇಧ

bng

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (Modi in Bengaluru) ಇಂದು (ನ.11) ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ಹಾಗೂ ಭದ್ರತಾ ದೃಷ್ಟಿಯಿಂದ ಹಲವಾರು ಮಾರ್ಗಗಳಲ್ಲಿ ಸಂಚಾರ ಮಾರ್ಪಾಡು ಮಾಡಲಾಗಿದೆ.

ಬೆಳಿಗ್ಗೆ 8ರಿಂದ ಮದ್ಯಾಹ್ನ 2ರವರೆಗೆ ಕೆಳಕಂಡ ರಸ್ತೆಗಳಲ್ಲಿ ಸಾರ್ವಜನಿಕ ಸಂಚಾರ ಬಂದ್ ಮಾಡಲಾಗುತ್ತಿದ್ದು, ಈ ರಸ್ತೆಗಳಲ್ಲಿ ಈ ಹೊತ್ತಿನಲ್ಲಿ ಪ್ರಯಾಣಿಸಬೇಕಾದವರು ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಲು ಸೂಚಿಸಲಾಗಿದೆ.

ಸಿಟಿಓ ಜಂಕ್ಷನ್, ಪೊಲೀಸ್ ತಿಮ್ಮಯ್ಯ ಜಂಕ್ಷನ್, ರಾಜಭವನ ರಸ್ತೆ, ಬಸವೇಶ್ವರ ಸರ್ಕಲ್, ಪ್ಯಾಲೇಸ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಸ್ಯಾಂಕಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ, ಏರ್‌ಪೋರ್ಟ್ ಎಲಿವೇಟೆಡ್ ಕಾರಿಡಾರ್ ರಸ್ತೆ, ಶೇಷಾದ್ರಿ ರಸ್ತೆಯಲ್ಲಿ ಮಹಾರಾಣಿ ಬ್ರಿಡ್ಜ್‌ನಿಂದ ರೈಲ್ವೆ ಸ್ಟೇಷನ್ ಪ್ರವೇಶ ದ್ವಾರದವರೆಗೆ, ಕೆ.ಜಿ ರಸ್ತೆಯಲ್ಲಿ ಶಾಂತಲಾ ಜಂಕ್ಷನ್‌ನಿಂದ ಮೈಸೂರು ಬ್ಯಾಂಕ್‌ ಸರ್ಕಲ್‌ವರೆಗೆ, ವಾಟಾಳ್ ನಾಗರಾಜ್ ರಸ್ತೆಯಲ್ಲಿ ಖೋಡೆ ಅಂಡರ್‌ಪಾಸ್‌ನಿಂದ ಪಿ.ಎಫ್‌ವರೆಗೆ, ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನ ಸುತ್ತ ಮತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ.

ಪರ್ಯಾಯ ಮಾರ್ಗಗಳು

ಮೈಸೂರು ಬ್ಯಾಂಕ್‌ ವೃತ್ತದಿಂದ ಪ್ಯಾಲೇಸ್ ರಸ್ತೆಗೆ ಬರುವ ವಾಹನ ಸವಾರರು ಕೆ.ಜಿ. ರಸ್ತೆಯ ಮೂಲಕ, ಎಲ್‌ಆರ್‌ಡಿಇ ವೃತ್ತದಿಂದ ಬಸವೇಶ್ವರ ವೃತ್ತದ ಕಡೆಗೆ ಸಂಚರಿಸುವವರು ರಾಜಭವನ ರಸ್ತೆ ಮೂಲಕ ಮುಂದೆ, ಟ್ರಿಲೈಟ್ ಜಂಕ್ಷನ್‌ನಿಂದ ಮೌರ್ಯ ಜಂಕ್ಷನ್ ಮೂಲಕ ಬರುವವರು ರೇಸ್‌ ವ್ಯೂವ್ ಸರ್ಕಲ್‌ನಲ್ಲಿ ಹಾಗೂ ಶಿವಾನಂದ ಸರ್ಕಲ್‌ನಲ್ಲಿ ಎಡತಿರುವು ತೆಗೆದುಕೊಂಡು ನೆಹರು ಸರ್ಕಲ್ ಮೂಲಕ, ಕೆಕೆ ರಸ್ತೆ ಮೂಲಕ ವಿಂಡ್ಸ್‌ ಮ್ಯಾನರ್ ವೃತ್ತಕ್ಕೆ ತೆರಳುವ ವಾಹನ ಸವಾರರು ಶಿವಾನಂದ ಸರ್ಕಲ್‌ನಿಂದ ನೆಹರು ಸರ್ಕಲ್‌ ಮೂಲಕ, ಬಿಹೆಚ್‌ ಇಎಲ್ ಸರ್ಕಲ್‌ನಿಂದ ಮೇಕ್ರಿ ಸರ್ಕಲ್ ಕಡೆಗೆ ಬರುವ ವಾಹನ ಸವಾರರು ಸದಾಶಿವನಗರ ಪೊಲೀಸ್ ಠಾಣೆ- ಮಾರಮ್ಮ ಸರ್ಕಲ್- ಮಾರ್ಗೋಸ ರಸ್ತೆ ಮೂಲಕ‌ ಹೋಗಲು ಅವಕಾಶ ಕಲ್ಪಿಸಲಾಗಿದೆ.

ಭಾಷ್ಯಂ ಸರ್ಕಲ್‌ನಿಂದ ಕಾವೇರಿ ಜಂಕ್ಷನ್ ಕಡೆಗೆ ಬರುವ ವಾಹನ ಸವಾರರು ಮಲ್ಲೇಶ್ವರಂ 18ನೇ ಕ್ರಾಸ್- ಮಾರ್ಗೋಸ ರಸ್ತೆಯ ಮೂಲಕ, ಕ್ವೀನ್ಸ್ ವೃತ್ತದಿಂದ ಸಿ.ಟಿ.ಓ ಕಡೆಗೆ ಬರುವ ವಾಹನ ಸವಾರರು ಸಿದ್ದಲಿಂಗಯ್ಯ ವೃತ್ತ- ಆರ್.ಆರ್.ಎಂ.ಆರ್. ರಸ್ತೆಯ ಮೂಲಕ, ಬಾಳೇಕುಂದ್ರಿ ಜಂಕ್ಷನ್‌ನಿಂದ ಮೆಜೆಸ್ಟಿಕ್ ಕಡೆಗೆ ಸಂಚರಿಸುವ ವಾಹನಗಳು ಕನ್ನಿಂಗ್ ಹ್ಯಾಂ ರಸ್ತೆ ಮೂಲಕ ಸಂಚರಿಸಲು‌ ಅವಕಾಶ ಮಾಡಿಕೊಡಲಾಗಿದೆ.

Exit mobile version