Site icon Vistara News

Modi in Karnataka: ದೇಶದಲ್ಲೀಗ 3,167 ಹುಲಿ; ಹತ್ತು ವರ್ಷದಲ್ಲಿ ಡಬಲ್‌: IBCAಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

modi in karnataka announced new tiger numbers in bharat

#image_title

ಮೈಸೂರು: ಭಾರತದಲ್ಲಿ 50 ವರ್ಷದ ಹಿಂದೆ ಆರಂಭಿಸಿದ ಹುಲಿ ಸಂರಕ್ಷಣೆ ಕಾರ್ಯಕ್ರಮ ಫಲಪ್ರದವಾಗಿದ್ದು, ಕಳೆದ ಹತ್ತು ವರ್ಷದಲ್ಲೇ ಹುಲಿಗಳ ಸಂಖ್ಯೆ ಡಬಲ್‌ ಆಗಿದೆ. ಈ ವರ್ಷದ ಹುಲಿ ಅಂಕಿ ಅಂಶವನ್ನು ಪ್ರಧಾನಿ ಘೋಷಣೆ ಮಾಡಿದರು.

2006ರಲ್ಲಿ 1,411 ಹುಲಿಗಳಿದ್ದವು. ಈ ಸಂಖ್ಯೆ 2010ರಲ್ಲಿ 1,706, 2014ರಲ್ಲಿ 2,967 ಆಗಿತ್ತು. 2022ರ ಸಮೀಕ್ಷೆಯಂತೆ ಇದೀಗ ಭಾರತದಲ್ಲಿ 3,167 ಹುಲಿಗಳಿವೆ ಎಂದು ತಿಳಿಸಿದರು. 2010ರಲ್ಲಿ ರಷ್ಯಾದ ಸೈಂಟ್‌ ಪೀಟರ್ಸ್‌ಬರ್ಗ್‌ನಲ್ಲಿ ನಡೆದಿದ್ದ ಟೈಗರ್‌ ಫೋರಂನಲ್ಲಿ, ಮುಂದಿನ 10 ವರ್ಷದಲ್ಲಿ ಹುಲಿಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡುವ ಸಂಕಲ್ಪವನ್ನು ರಾಷ್ಟ್ರಗಳು ಮಾಡಿದ್ದವು. ಸಮಯಕ್ಕೂ ಮೊದಲೇ ಭಾರತ ಗುರಿ ಸಾಧಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಇದೀಗ ವಿಶ್ವದ ಶೇ.70 ಹುಲಿ ಸಂತತಿ ಭಾರತದಲ್ಲೇ ಇದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳವಾಗುತ್ತದೆ ಎಂದು ತಿಳಿಸಿದರು.

ಹುಲಿ ಸೇರಿ ಏಳು ದೊಡ್ಡ ಬೆಕ್ಕಿನ ( Big Cat) ಪ್ರಭೇದಗಳನ್ನು ರಕ್ಷಿಸಲು ಇಂಟರ್‌ನ್ಯಾಷನಲ್‌ ಬಿಗ್‌ ಕ್ಯಾಟ್‌ ಅಲಯನ್ಸ್‌ಗೆ (IBCA) ಪ್ರಧಾನಿ ಮೋದಿ ಚಾಲನೆ ನೀಡಿದರು. ಅಂತಾರಾಷ್ಟ್ರೀಯ ಬಿಗ್‌ ಕ್ಯಾಟ್‌ ಅಲಯನ್ಸ್‌ ಮೂಲಕ ಹಣಕಾಸು, ತಾಂತ್ರಿಕ ಸಹಕಾರಕ್ಕೆ ಅನುಕೂಲವಾಗುತ್ತದೆ. ಯಾವುದೇ ಒಂದು ದೇಶ ಎಂದು ಪರಿಸರ ಸಂರಕ್ಷಣೆ ಮಾಡಲು ಸಾಧ್ಯವಿಲ್ಲ. ವಿಶ್ವದ ಏಳು ಪ್ರಮುಖ ದೊಡ್ಡ ಬೆಕ್ಕುಗಳ ಸಂರಕ್ಷಣೆ ಇದರಿಂದ ಆಗುತ್ತದೆ. ಸದಸ್ಯ ರಾಷ್ಟ್ರಗಳು ತಮ್ಮ ಅನುಭವ ಹಂಚಿಕೊಳ್ಳಬಹುದು, ತರಬೇತಿ ನೀಡಬಹುದು, ಸಾಮರ್ಥ್ಯ ವರ್ಧನೆಗೂ ಅನುಕೂಲವಾಗುತ್ತದೆ ಎಂದರು.

ಈ ಒಕ್ಕೂಟದಲ್ಲಿ ಒಟ್ಟು 97 ರಾಷ್ಟ್ರಗಳು ಸದಸ್ಯರಾಗಿದ್ದು, ಆಸಕ್ತ ಇತರೆ ದೇಶಗಳು ಹಾಗೂ ಸಂಘಸಂಸ್ಥೆಗಳೂ ಕೈಜೋಡಿಸಬಹುದಾಗಿದೆ.

ಇದನ್ನೂ ಓದಿ: Modi in Karnataka: ನಮ್ಮ ಸಂಸ್ಕೃತಿಯಲ್ಲೇ ಪ್ರಕೃತಿ ಸಂರಕ್ಷಣೆಯ ಭಾವವಿದೆ: ಹುಲಿ ಸಂರಕ್ಷಣೆ ಸುವರ್ಣ ಸಂಭ್ರಮದಲ್ಲಿ ಪ್ರಧಾನಿ ಮೋದಿ ಮಾತು

Exit mobile version