Site icon Vistara News

Modi in Karnataka : ಮೋದಿ ಆಗಮನದ ವೇಳೆ ಕಪ್ಪು ಬಲೂನು ಪ್ರದರ್ಶನಕ್ಕೆ ಸಿದ್ಧವಾಗಿದ್ದ ಕಾಂಗ್ರೆಸ್‌ ಮುಖಂಡನ ಬಂಧನ

Balloon protest arrest

#image_title

ತುಮಕೂರು: ಸೋಮವಾರ ಗುಬ್ಬಿಯಲ್ಲಿ ಎಚ್ಎಎಲ್‌ನ ಹೆಲಿಕಾಪ್ಟರ್‌ ಉತ್ಪಾದನಾ ಘಟಕ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಆಗಮಿಸಿದ್ದ ವೇಳೆ ಕಪ್ಪು ಬಲೂನು ಹಾರಿಸಲು ಮುಂದಾಗಿದ್ದ ಕಾಂಗ್ರೆಸ್‌ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಶಶಿ ಹುಲೀಕುಂಟೆ ಎಂಬವರು ಬಲೂನು ಹಾರಿಸಿ ಪ್ರತಿಭಟನೆ ದಾಖಲಿಸಲು ಮತ್ತು ಮೋದಿ, ಬಿಜೆಪಿ ವಿರುದ್ಧ ಘೋಷಣೆ ಕೂಗಲು ಸಿದ್ಧವಾಗಿದ್ದರು. ಪೊಲೀಸರು ಇದರ ಬಗ್ಗೆ ಪೂರ್ವ ಸೂಚನೆ ಪಡೆದು ಅವರನ್ನು ಬಂಧಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಯುವ ಸಬಲೀಕರಣ, ಉದ್ಯೋಗ ಸೃಷ್ಟಿ ಭರವಸೆಗಳು ಇನ್ನೂ ಈಡೇರಿಲ್ಲ. ಹೀಗಾಗಿ ನಿರುದ್ಯೋಗಿ ಯುವಕರಿಗೆ ಅನ್ಯಾಯವಾಗುತ್ತಿದೆ. ಈ ಬಾರಿಯ ಬಜೆಟ್ ನಲ್ಲಿ ಸಹ ಯುವಕರಿಗೆ ಉದ್ಯೋಗ ನೀಡುವ ಯಾವ ಯೋಜನೆಯನ್ನೂ ಘೋಷಣೆ ಮಾಡಿಲ್ಲ ಎಂದು ಆರೋಪಿಸಿ ಶಶಿ ಹುಲಿಕುಂಟೆ ಪ್ರತಿಭಟನೆಗೆ ಸಜ್ಜಾಗಿದ್ದರು.

ಕಪ್ಪು ಬಲೂನು ಪ್ರದರ್ಶನ ಮಾಡಿ ಧಿಕ್ಕಾರ ಕೂಗಲು ರೆಡಿಯಾಗಿದ್ದ ಶಶಿ ಹುಲಿಕುಂಟೆ ಅವರನ್ನು ತಿಪಟೂರು ನಗರ ಪೊಲೀಸರು ಬಂಧಿಸಿದ್ದು, ಬಳಿಕ ಸಂಜೆ ಎಂಟು ಗಂಟೆಗೆ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Modi In Karnataka: ಎಚ್‌ಎಎಲ್‌ ಕುರಿತು ಸುಳ್ಳು ಹೇಳಿದವರ ಬಣ್ಣ ಬಯಲಾಗಿದೆ: ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಪ್ರಧಾನಿ ನರೇಂದ್ರ ಮೋದಿ

Exit mobile version