ಮೈಸೂರು : ಕರ್ನಾಟಕದ ಪ್ರವಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ಮೋದಿ ಸೋಮವಾರ ರಾತ್ರಿ ಮೈಸೂರಿನಲ್ಲಿ ಉಳಿದುಕೊಳ್ಳಲಿದ್ದಾರೆ.
ಮೋದಿ ಅವರಿಗೆ ವಿಶೇಷವಾದ ಊಟ ಉಪಚಾರದ ಮೆನು ರೆಡಿಯಾಗಿದೆ. ಮೋದಿಗಾಗಿ ಶುದ್ಧ ಸಸ್ಯಹಾರಿ ಊಟ ತಯಾರಿಸಲಾಗುತ್ತದೆ. ಅವರ ಆಹಾರದಲ್ಲಿ ಸಕ್ಕರೆ ಮತ್ತು ಮಸಾಲೆ ಪದಾರ್ಥಗಳನ್ನು ಬಳಸದಂತೆ ಸೂಚಿಸಲಾಗಿದೆ. ಸೋಮವಾರ (ಜೂನ್ 20) ರಂದು ಬೆಳಗಿನ ಉಪಾಹಾರಕ್ಕೆ ಅವಲಕ್ಕಿ, ಉಪ್ಪಿಟ್ಟು, ಇಡ್ಲಿ-ಸಾಂಬಾರ್, ಬ್ರೆಡ್, ಬಟರ್, ಮಿಕ್ಸ್ ಫ್ರೂಟ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ | Modi In Karnataka | ಯಾಕಿಷ್ಟು ಸಣಕಲಾಗಿದ್ದೀರಾ?: ಎಂಟಿಬಿ ನಾಗರಾಜ್‌ಗೆ ಮೋದಿ ಪ್ರಶ್ನೆ!
ಮಧ್ಯಾಹ್ನ ಊಟಕ್ಕೆ ವೆಜಿಟೇಬಲ್ ಸೂಪ್, ಮಸಾಲಾ ಮಜ್ಜಿಗೆ, ರೋಟಿ, ಜೀರಾ ರೈಸ್, ದಾಲ್ ಹಾಗೂ ಮಿಕ್ಸ್ಡ್ ಫ್ರೂಟ್ ವ್ಯವಸ್ಥೆ ಮಾಡಲಾಗಿದೆ. ಟೀ ಹಾಗೂ ಮಾರಿ ಬಿಸ್ಕೆಟ್ ನೀಡಲಾಗುವುದು. ರಾತ್ರಿಯ ಊಟಕ್ಕೆ ಕಿಚಡಿ, ಗುಜುರಾತಿ ಕರಿ, ರೋಟಿ, ದಾಲ್, ರೈಸ್, ಎರಡು ರೀತಿಯ ಸಬ್ಜಿ, ಮೊಸರು, ಮಿಕ್ಸ್ಡ್ ಫ್ರೂಟ್ ಒಳಗೊಂಡ ಮೆನು ಸಿದ್ಧವಾಗಿದೆ.
ಮಂಗಳವಾರ (ಜೂನ್ 21) ಬೆಳಗ್ಗೆ 8.30ಕ್ಕೆ ಅರಮನೆಯ ನಿವಾಸದಲ್ಲಿ ಪ್ರಧಾನಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಅರಮನೆ ನಿವಾಸದಲ್ಲಿ ಪ್ರಮೋದಾದೇವಿ ಒಡೆಯರ್ ಸ್ವಾಗತ ಕೋರಲಿದ್ದಾರೆ. ನಂತರ ರಾಜ ವಂಶದವರ ನಿವಾಸದಲ್ಲಿ ಪ್ರಮೋದಾದೇವಿ ಒಡೆಯರ್ ಜತೆ ನರೆಂದ್ರ ಮೋದಿ ಉಪಾಹಾರ ಸವಿಯಲಿದ್ದಾರೆ. ಇನ್ನೂ ವಿಶೇಷ ಅಂದರೆ ಮೈಸೂರು ಅರಮನೆಯಲ್ಲಿಯೇ ಮೊದಲ ಬಾರಿಗೆ ತಯಾರಾಗಿದ್ದ ಮೈಸೂರ್ ಪಾಕ್ ಅನ್ನು ಬಾಣಸಿಗ ಕಾಕಾಸುರ ಮಾದಪ್ಪ ತಯಾರಿಸಲಿದ್ದಾರೆ.
ಇದನ್ನೂ ಓದಿ | Modi In Karnataka | ಕಾರು ನಿಲ್ಲಿಸಿ ಕೈ ಬೀಸಿದ ಮೋದಿ: ಕಾರ್ಯಕರ್ತರು ಫುಲ್ ಖುಷ್