Site icon Vistara News

Modi In Karnataka | ಹಲೋ ಬೆಂಗಳೂರು ಎಂದ ʼನಮೋʼ

Modi In Karnataka

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಕರ್ನಾಟಕ ಪ್ರವಾಸಕ್ಕೆ ಸೋಮವಾರ ಬೆಂಗಳೂರಿಗೆ ಬಂದಿಳಿದರು. ಮೋದಿ ಮೊದಲ ಕಾರ್ಯಕ್ರಮಕ್ಕೆ ತೆರಳುವ ಮುನ್ನವೇ ಬಿಜೆಪಿ ಕಾರ್ಯಕರ್ತರು ಮೇಖ್ರಿ ವೃತ್ತದಲ್ಲಿ ಕಾಯುತ್ತಿದ್ದರು.

ಈ ವೇಳೆ ಕಾರಿನಲ್ಲಿ ಕುಳಿತಿರುವ ಮೋದಿಯವರನ್ನು ಕಂಡು ಸಂತಸಪಡುವ ಉಮೇದಿನಲ್ಲಿ ಕಾರ್ಯಕರ್ತರಿದ್ದರು. ಆದರೆ ಉತ್ಸಾಹಭರಿತ ಕಾರ್ಯಕರ್ತರನ್ನು ಕಂಡ ಮೋದಿ ತಾವೂ ಅಷ್ಟೇ ಉತ್ಸಾಹದಿಂದ ಕೈಬೀಸಿದರು. ಅಷ್ಟೆ ಅಲ್ಲದೆ ಕಾರಿನಿಂದ ಕೆಳಗಿಳಿದು ಎಲ್ಲರ ಕಡೆಗೆ ಕೈಬೀಸಿ, ಕೈಮುಗಿದು ತೆರಳಿದರು.

ಈ ಸಂಗತಿ ತಮಗೆ ಸಂತಸ ಉಂಟು ಮಾಡಿದೆ ಎಂದು ಮೋದಿ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಅನಿಸಿಕೆ ವ್ಯಕ್ತಪಡಿಸಿದ್ದಾರೆ, “ಹಲೋ ಬೆಂಗಳೂರು! ಆತ್ಮೀಯ ಸ್ವಾಗತಕ್ಕೆ ಧನ್ಯವಾದಗಳು (Hello Bengaluru! Thanks for the warm welcome)” ಎಂದು ವಿಡಿಯೋ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ | Modi In Karnataka | ಕಾರು ನಿಲ್ಲಿಸಿ ಕೈ ಬೀಸಿದ ಮೋದಿ: ಕಾರ್ಯಕರ್ತರು ಫುಲ್‌ ಖುಷ್‌

ಇದನ್ನೂ ಓದಿ | Modi In Karnataka | ಯಾಕಿಷ್ಟು ಸಣಕಲಾಗಿದ್ದೀರಾ?: ಎಂಟಿಬಿ ನಾಗರಾಜ್‌ಗೆ ಮೋದಿ ಪ್ರಶ್ನೆ!

Exit mobile version