Site icon Vistara News

Modi in Karnataka: ಮೆಟ್ರೊ ರೈಲು ಮಾರ್ಗ ಉದ್ಘಾಟಿಸಿ ಸಾಮಾನ್ಯರಂತೆ ಪ್ರಯಾಣಿಸಿದ ಪ್ರಧಾನಿ ಮೋದಿ

modi-in-karnataka-inaugurates-whitefield-to-kr-puram-stretch

#image_title

ಬೆಂಗಳೂರು: ವೈಟ್‌ಫೀಲ್ಡ್‌ನಿಂದ (ಕಾಡುಗೋಡಿ) ಕೃಷ್ಣರಾಜಪುರದವರೆಗಿನ ಮೆಟ್ರೊ ಮಾರ್ಗವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಅದೇ ಮಾರ್ಗದಲ್ಲಿ ಸಂಚರಿಸಿದರು.

ಮೆಟ್ರೊ ನಿಲ್ದಾಣದಲ್ಲಿ ಟೋಕನ್‌ ಖರೀದಿಸಿದ ಪ್ರಧಾನಿ ಮೋದಿ, ಜನಸಾಮಾನ್ಯರ ರೀತಿಯಲ್ಲಿ ಪ್ಲಾಟ್‌ಫಾರ ಪ್ರವೇಶಿಸಿದರು. ರೈಲ್ವೆ ಸಿಬ್ಬಂದಿಯಾದ ಶ್ರುತಿ, ವೇದ ಹಾಗೂ ಉಮಾ ಅವರ ಜತೆಗೆ ಮಾತನಾಡಿದರು.

ನಂತರದಲ್ಲಿ ಮೆಟ್ರೊ ಕಾರ್ಮಿಕರ ಜತೆಗೆ ಸಂವಾದ ನಡೆಸಿದ ಮೋದಿ, ಯೋಗಕ್ಷೇಮ ವಿಚಾರಿಸಿದರು. ಕೆಲವು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಜತೆಗೂ ಮಾತನಾಡಿದರು. ಪ್ರಧಾನಿ ಮೋದಿ ಜತೆಗೆ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೊಟ್‌, ಶಾಸಕ ಅರವಿಂದ ಲಿಂಬಾವಳಿ ಮತ್ತಿತರರು ಇದ್ದರು.

13.7 ಕಿ.ಮೀ. ಉದ್ದದ ಈ ಮಾರ್ಗವು ಬೆಂಗಳೂರು ಮೆಟ್ರೋ ಹಂತ-2 ನೆಟ್‌ವರ್ಕ್‌ನ ಭಾಗವಾಗಿದೆ. ಹಾಗೂ ಬೆಂಗಳೂರಿನ ಐಟಿ ಕಾರಿಡಾರನ್ನು ನಗರದ ಇತರ ಭಾಗಗಳಿಗೆ ಸಂಪರ್ಕಿಸುತ್ತದೆ. 12 ಮೆಟ್ರೋ ನಿಲ್ದಾಣಗಳನ್ನು ಈ ಮಾರ್ಗ ಹೊಂದಿದ್ದು, ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಸಾದರಮಂಗಲ, ನಲ್ಲೂರಹಳ್ಳಿ, ಕುಂದಲಹಳ್ಳಿ, ಸೀತಾರಾಮ ಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್‌ ಪಾಳ್ಯ, ಸರಸ್ವತಿ ನಗರ ಮತ್ತು ಕೆಆರ್ ಪುರಂ ನಿಲ್ದಾಣಗಳಿವೆ.

ಪ್ರತಿ 10 ನಿಮಿಷಕ್ಕೆ ರೈಲು ಸಂಚರಿಸಲಿದೆ. ಈ ವಿಸ್ತರಣೆಯಲ್ಲಿ ಗರಿಷ್ಠ ಟಿಕೆಟ್‌ ದರವು 35 ರೂ. ಆಗಿರಲಿದೆ. ವೈಟ್‌ಫೀಲ್ಡ್ ಮತ್ತು ಕೆ.ಆರ್. ಪುರಂ ನಡುವಿನ ಅಂತರವನ್ನು 22 ನಿಮಿಷಗಳಲ್ಲಿ ಕ್ರಮಿಸುತ್ತದೆ. ಪಟ್ಟಂದೂರು ಅಗ್ರಹಾರ ಮೆಟ್ರೋ ನಿಲ್ದಾಣದಿಂದ ಇಂಟರ್‌ನ್ಯಾಷನಲ್‌ ಟೆಕ್ ಪಾರ್ಕ್ ಬೆಂಗಳೂರುಗೆ (ITPB) ನೇರ ಪ್ರವೇಶವನ್ನು ಒದಗಿಸಲು ITPLನೊಂದಿಗೆ BMRCL ಒಪ್ಪಂದಕ್ಕೆ ಸಹಿ ಹಾಕಿದೆ. ಇದೀಗ ಬೆಂಗಳೂರು, ದೇಶದ ಎರಡನೇ ಅತಿದೊಡ್ಡ ಮೆಟ್ರೋ ನೆಟ್‌ವರ್ಕ್ ಅನ್ನು ಹೊಂದಿದಂತಾಗಿದೆ..

Exit mobile version