ಕೊಡಗು: ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದಿರುವುದೇ ಬೆಂಕಿ ಹಚ್ಚಲು ಎಂದು ಕೆಪಿಸಿಸಿ ಉಪಾಧ್ಯಕ್ಷ ವಿನಯ್ ಕುಮಾರ್ ಸೊರಕೆ ಟೀಕೆ ಮಾಡಿದ್ದಾರೆ.
ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಮಹಮ್ಮದ್ ಪೈಗಂಬರ್ ಅವರನ್ನು ಬಿಜೆಪಿ ಅವಹೇಳನ ಮಾಡಿತು. ಇಂದು ಪೆಟ್ರೋಲಿಯಂ ಉತ್ಪನ್ನಗಳು, ಕ್ರೂಡ್ ಆಯಿಲ್‌ಗಳು ಬರುವುದು ಅರಬ್ ದೇಶಗಳಿಂದ. ಆದರೆ ಪೈಗಂಬರ್ ಅವರನ್ನು ಟೀಕಿಸಿ ಅಂತಾರಾಷ್ಟ್ರೀಯ ಸಂಬಂಧಗಳನ್ನು ಹಾಳು ಮಾಡಲಾಗಿದೆ.
ಇದನ್ನೂ ಓದಿ | Modi In Karnataka | ಸರ್‌ಎಂವಿ ಟರ್ಮಿನಲ್ ಉದ್ಘಾಟನೆ, ಸಬ್‌ಅರ್ಬನ್ ಶಂಕು ಸ್ಥಾಪಿಸಿದ ಮೋದಿ
ಅವೆಲ್ಲವನ್ನು ಮುಚ್ಚಿ ಹಾಕಲು ಇ.ಡಿ. ಬಳಸಿ ರಾಹುಲ್ ಗಾಂಧಿ ಅವರನ್ನು ತನಿಖೆ ಮಾಡಲಾಗುತ್ತಿದೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಕಂಡರೆ ಬಿಜೆಪಿಗೆ ಭಯ. ಅದಕ್ಕೆ ಇಡಿ ಬಿಟ್ಟು ಕಾಂಗ್ರೆಸನ್ನು ಭಯಪಡಿಸಲು ಯತ್ನಿಸುತ್ತಿದೆ. ಅದಕ್ಕೆಲ್ಲಾ ಕಾಂಗ್ರೆಸ್ ತಲೆಕೆಡಿಸಿಕೊಳ್ಳುವುದಿಲ್ಲ, ಹೆದರುವುದಿಲ್ಲ. ಅಗ್ನಿಪಥ್ ಯೋಜನೆ ವಿರುದ್ಧ ದೇಶದ ಜನ ದಂಗೆ ಎದ್ದಿದ್ದಾರೆ. ಇದಕ್ಕೆಲ್ಲಾ ಕೇಂದ್ರದ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂದು ಆರೋಪ ಮಾಡಿದರು.
ಇದನ್ನೂ ಓದಿ | Modi in Karnataka | ನಮ್ಮ ವಿದ್ಯಾರ್ಥಿಗಳು ಭಯೋತ್ಪಾದಕರಲ್ಲ, ರಜೆ ಷೋಷಿಸಿದ್ದಕ್ಕೆ ಡಿಕೆಶಿ ಕಿಡಿ