ಬೆಂಗಳೂರು: ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ನಾನಾ ಕಸರತ್ತಿನಲ್ಲಿ ತೊಡಗಿದ್ದಾರೆ. ಇದೀಗ ಬೆಂಗಳೂರಲ್ಲಿ ಕಮಲ ಅರಳಿಸಲು ಪ್ರಧಾನಿ ನರೇಂದ್ರ ಮೋದಿ (Modi In Karnataka) ಮೆಗಾ ರೋಡ್ ಶೋ ನಡೆಸುತ್ತಿದ್ದಾರೆ. ಮೇ 6, 7 ರಂದು ಸಿಲಿಕಾನ್ ಸಿಟಿಯಲ್ಲಿ ನರೇಂದ್ರ ಮೋದಿ ಪ್ರಚಾರ ಇದ್ದು, 17 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಪ್ರಚಾರ ನಡೆಯಲಿದೆ.
ಎಲ್ಲೆಲ್ಲಿ ನರೇಂದ್ರ ಮೋದಿ ಶೋ?
6-5-2023
ಮೇ 6ರ ಬೆಳಗ್ಗೆ ಹತ್ತು ಗಂಟೆಗೆ ಮೊದಲ ರೋಡ್ ಶೋ ಪ್ರಾರಂಭವಾಗಲಿದೆ. ಜೆ.ಪಿ.ನಗರದ ಬ್ರಿಗೇಡ್ ಮಿಲೇನಿಯಂ ಅಪಾರ್ಟ್ಮೆಂಟ್‌ನಿಂದ ನರೇಂದ್ರ ಮೋದಿ ರೋಡ್ ಶೋ ಆರಂಭವಾಗಲಿದೆ. ಶ್ರೀ ಸೋಮೇಶ್ವರ ಸಭಾಭವನ > ಜೆಪಿ ನಗರ 5ನೇ ಫೇಸ್> ಪುಟ್ಟೇನಹಳ್ಳಿ ಮುಖ್ಯ ರಸ್ತೆ> ಪುಟ್ಟೇನಹಳ್ಳಿ ರಿಂಗ್ ರೋಡ್ ಜಂಕ್ಷನ್> ರಾಘವೇಂದ್ರ ಮಠ> ಜಯನಗರ 4th ಬ್ಲಾಕ್> ಸೌತ್ ಎಂಡ್ ಸರ್ಕಲ್> ಮಾಧವನರಾವ್ ಪಾರ್ಕ್> ಕೃಷ್ಣರಾವ್ ಪಾರ್ಕ್> ದೊಡ್ಡ ಗಣಪತಿ ದೇವಸ್ಥಾನ> ಬಸವನಗುಡಿಯ ರಾಮಕೃಷ್ಣ ಮಠ> ಉಮಾ ಥಿಯೇಟರ್> ಟಿಆರ್ ಮಿಲ್> ಮೈಸೂರ್ ಸರ್ಕಲ್ > ಬಿನ್ನಿಮಿಲ್ ರೋಡ್> ಮಾಗಡಿ ರಸ್ತೆ> ಟೋಲ್‌ಗೇಟ್> ವೀರೇಶ್ ಚಿತ್ರಮಂದಿರ ದಾಟಿ ಅಲ್ಲಿಂದ ವಿಜಯನಗರ> ಗೋವಿಂದರಾಜ್ ನಗರ> ಮಾಗಡಿ ರೋಡ್ ಜಂಕ್ಷನ್> ಬಸವೇಶ್ವರ ನಗರ > ಶಂಕರಮಠ> ಮಲ್ಲೇಶ್ವರ> ಸಂಪಿಗೆ ರಸ್ತೆಯ ಕಾಡು ಮಲ್ಲೇಶ್ವರ ದೇವಸ್ಥಾನ ಮಾರ್ಗದಲ್ಲಿ ರೋಡ್ ಶೋ ಅಂತ್ಯವಾಗಲಿದೆ.
7-5-2023
ಮೇ 7ರಂದು ಬೆಳಗ್ಗೆ 10 ಗಂಟೆಯಿಂದ ಬೆಳಗ್ಗೆ 11:30ರ ವರೆಗೂ ಸುಮಾರು 8 ಕಿ.ಮೀ ರೋಡ್ ಶೋ ನಡೆಯಲಿದೆ. ಕೆಂಪೇಗೌಡ ಪ್ರತಿಮೆ, ತಿಪ್ಪಸಂದ್ರ ರೋಡ್‌ನಿಂದ ಶುರುವಾಗಿ ಟ್ರಿನಿಟಿ ಸರ್ಕಲ್‌ವರೆಗೂ ರೋಡ್ ಶೋ ನಡೆಯಲಿದೆ.
ತಿಪ್ಪಸಂದ್ರ ರೋಡ್> ಎಚ್‌ಎಎಲ್ 2ನೇ ಹಂತ> 100 ಫೀಟ್ ರೋಡ್> ಇಂದಿರಾನಗರ> ಸುಬ್ರಮಣ್ಯ ಸ್ವಾಮಿ ದೇವಸ್ಥಾನ> ಎಂ.ಜಿ ರೋಡ್> ಟ್ರಿನಿಟಿ ಸರ್ಕಲ್ ಬಳಿ ನಮೋ ಪ್ರಚಾರ ನಡೆಯಲಿದೆ.
ಸ್ವಚ್ಛತಾ ಕಾರ್ಯದಲ್ಲಿ ಮುಳುಗಿದ ಪೌರಕಾರ್ಮಿಕರು
ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಹಿನ್ನೆಲೆಯಲ್ಲಿ ಬಿಬಿಎಂಪಿಯ ಪೌರ ಕಾರ್ಮಿಕರಿಂದ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿದೆ. ಬಿಬಿಎಂಪಿ ಅರಣ್ಯ ಸಿಬ್ಬಂದಿಯಿಂದ ರೋಡ್ ಶೋ ಮಾರ್ಗದಲ್ಲಿ ಮರದ ರೆಂಬೆಗಳ ಟ್ರಿಮ್ಮಿಂಗ್ ನಡೆಯುತ್ತಿದೆ. ಜಯನಗರದ ಸೌತ್ ಎಂಡ್ ಸರ್ಕಲ್ ಬಳಿ ಕಿತ್ತು ಹೋದ ರಸ್ತೆಗೆ ಡಾಂಬರೀಕರಣ ಮಾಡಲಾಗಿದ್ದು, ರಸ್ತೆಯ ಎರಡು ಬದಿ ಬ್ಯಾರಿಕೇಡ್ ಅಳವಡಿಸುವ ಕಾರ್ಯದಲ್ಲಿ ಪೊಲೀಸರು ಮಗ್ನರಾಗಿದ್ದರು.
ಇದನ್ನೂ ಓದಿ: Karnataka Election 2023: ಪ್ರಧಾನಿ ನರೇಂದ್ರ ಮೋದಿ ಮೆಗಾ ರೋಡ್ ಶೋ: ಮನೆ ಬಾಲ್ಕನಿ, ಟೆರೇಸ್ ಮೇಲೆ ನಿಂತು ನೋಡುವಂತಿಲ್ಲ!
ಇತ್ತ ಬಿಬಿಎಂಪಿ ಮಾತ್ರವಲ್ಲದೆ ಬೆಸ್ಕಾಂ ಸಿಬ್ಬಂದಿ ಕೂಡ ಫೀಲ್ಡಿಗಿಳಿದು ಟ್ರಾನ್ಸ್‌ಫಾರ್ಮರ್‌ಗಳ ಪರಿಶೀಲನೆ ನಡೆಸಿದ್ದಾರೆ. ರಸ್ತೆ ಬದಿ ನೇತಾಡುವ ವೈರ್‌ಗಳ ತೆರವು ಮಾಡುವುದು, ಅವುಗಳನ್ನು ಸರಿಪಡಿಸಿ ಬಿಗಿ ಮಾಡುವುದನ್ನು ಮಾಡುತ್ತಿದ್ದಾರೆ. ರಸ್ತೆಯುದ್ದಕ್ಕೂ ಸಿಸಿಟಿವಿ ಅಳವಡಿಸುವ ಕೆಲಸವೂ ಭಾರದಿಂದ ಸಾಗುತ್ತಿದೆ.