ಬೆಂಗಳೂರು: ಇನ್‌ಸ್ಟಾಗ್ರಾಂ ಸೇರಿ ಸಾಮಾಜಿಕ ಜಾಲತಾಣದಲ್ಲಿ ಕಾರ್ಪೊರೇಟ್ ಕಾಮಿಡಿ, ಹ್ಯೂಮರ್ ಮಾಡುತ್ತ ಮನಸೂರೆಗೊಳ್ಳುವ ʼಅಯ್ಯೋ ಶ್ರದ್ಧಾʼ ಅವರನ್ನು ಪ್ರಧಾನಿ ನರೇಂದ್ರ ಮೋದಿ (Modi In Karnataka) ಭೇಟಿಯಾಗಿದ್ದಾರೆ. ಅಷ್ಟಕ್ಕೂ ಶ್ರದ್ಧಾರನ್ನು ಭೇಟಿ ಮಾಡಿದ ಕೂಡಲೆ ಪ್ರಧಾನಿ ಹೇಳಿದೆ ಮೊದಲ ಶಬ್ದ, ʼಅಯ್ಯೋʼ.
ಏರೋ ಇಂಡಿಯಾದ 14ನೇ ಆವೃತ್ತಿಯನ್ನು ಉದ್ಘಾಟನೆ ಮಾಡಲು ಪ್ರಧಾನಿ ಮೋದಿ ಆಗಮಿಸಿದ್ದರು. ಸೋಮವಾರ ಇದ್ದ ಉದ್ಘಾಟನೆ ಕಾರ್ಯಕ್ರಮಕ್ಕೆ ಭಾನುವಾರ ರಾತ್ರಿಯೇ ಬೆಂಗಳೂರಿಗೆ ಆಗಮಿಸಿದ್ದರು. ಈ ಸಮಯದಲ್ಲಿ ರಾಕಿಂಗ್ ಸ್ಟಾರ್ ಯಶ್, ನಿರ್ಮಾಪಕ ವಿಜಯ್ ಕಿರಗಂದೂರ್, ನಟ ರಿಷಭ್ ಶೆಟ್ಟಿ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಜತೆಗೆ ಅಯ್ಯೋ ಶ್ರದ್ಧಾ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಭೋಜನ ಸ್ವೀಕರಿಸಿದ್ದಾರೆ.
ಈ ಔತಣ ಕೂಟದ ಫೋಟೊಗಳನ್ನು ಶ್ರದ್ಧಾ ಶೇರ್ ಮಾಡಿಕೊಂಡಿದ್ದಾರೆ. ʼನಮಸ್ಕಾರ, ಹೌದು, ನಾನು ದೇಶದ ಪ್ರಧಾನಿ ನರೇಂದ್ರಮೋದಿ ಅವರನ್ನು ಭೇಟಿ ಮಾಡಿದೆ. ಅವರು ನನಗೆ ಹೇಳಿದ ಮೊದಲ ಪದ, ಅಯ್ಯೋ.! ಅವರು ನಿಜವಾಗಲೂ ಹಾಗೆ ಹೇಳಿದರೇ ಎನ್ನುವುದೇ ನನಗೆ ಆಶ್ಚರ್ಯ ಉಂಟುಮಾಡಿದೆ. ಇದು ನಿಜವಾಗಲೂ ನಡೆದಿದೆ. ಧನ್ಯವಾದ ಪ್ರಧಾನಿಯವರಿಗೆ” ಎಂದು ಸಂತೋಷ ಹಂಚಿಕೊಂಡಿದ್ದಾರೆ.