Site icon Vistara News

Modi In Karnataka: ಇಂಧನ ಕ್ಷೇತ್ರದ ಹೂಡಿಕೆಗೆ ಭಾರತವೇ ಅತ್ಯುತ್ತಮ ಆಯ್ಕೆ; ಬನ್ನಿ, ಅನ್ವೇಷಿಸಿ, ಹೂಡಿ: ಇಂಧನ ಸಪ್ತಾಹದಲ್ಲಿ ನರೇಂದ್ರ ಮೋದಿ ಕರೆ

modi-in-karnataka-modi-says-indai-is-the-best-destination-for-investment-in-energy-sector

#image_title

ಬೆಂಗಳೂರು: ಭಾರತದಲ್ಲಿ ಬೆಳೆಯುತ್ತಿರುವ ಜನಸಂಖೈ, ಅತ್ಯುತ್ತಮ ಮಾನವ ಸಂಪನ್ಮೂಲ ಹಾಗೂ ಅತ್ಯಂತ ವೇಗದ ಬೆಳವಣಿಗೆಯು, ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಅತ್ಯುತ್ತಮ ಆಯ್ಕೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು. ಬೆಂಗಳೂರಿನ ಹೊರವಲಯದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (BIEC) ಭಾರತ ಇಂಧನ ಸಪ್ತಾಹ (India Energy Week) ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಭಾಷಣದ ಆರಂಭದಲ್ಲಿ, ಟರ್ಕಿಯಲ್ಲಿ ಸಂಭವಿಸಿದ ಭೂಕಂಪದ ಕುರಿತು ಪ್ರಸ್ತಾಪಿಸಿದರು. ಬಹಳಷ್ಟು ಜನರ ಸಾವು ಹಾಗೂ ಅಪಾರ ಹಾನಿಯ ಸುದ್ದಿಗಳಿವೆ. ಟರ್ಕಿಯ ಅಕ್ಕಪಕ್ಕದ ದೇಶಗಳಲ್ಲೂ ನಷ್ಟದ ಅಂದಾಜಿದೆ. ಭಾರತದ 140 ಕೋಟಿ ಜನರ ಭಾವನೆಯು ಆ ಎಲ್ಲ ಸಂತ್ರಸ್ತರ ಜತೆಗಿದೆ. ಭಾರತವು, ಭೂಕಂಪ ಸಂತ್ರಸ್ತರ ಎಲ್ಲ ರೀತಿಯ ಸಹಾಯಕ್ಕೆ ಬದ್ಧವಾಗಿದೆ.

ಬೆಂಗಳೂರು ತಂತ್ರಜ್ಞಾನ ಹಾಗೂ ಮಾನವ ಸಂಪನ್ಮೂಲಗಳಿಂದ ತುಂಬಿರುವ ನಗರ. ಭಾರತದ G20 ಅಧ್ಯತೆಯ ಸರಣಿಯ ಮೊದಲ ಬಹುದೊಡ್ಡ ಸಭೆ ಇದಾಗಿದೆ. ಭಾರತ ಎನರ್ಜಿ ಸಪ್ತಾಹಕ್ಕೆ ಎಲ್ಲರಿಗೂ ಸ್ವಾಗತ ಎಂದರು.

21ನೇ ಶತಮಾನದ ಭವಿಷ್ಯವನ್ನು ನಿರ್ಧರಿಸುವಲ್ಲಿ ಇಂಧನ ಪ್ರಮುಖ ಪಾತ್ರ ವಹಿಸುತ್ತದೆ. ಭಾರತವು ಇಂದು ಇಂಧನ ಉತ್ಪಾದನೆಯಲ್ಲಿ ಅತ್ಯಂತ ಪ್ರಬಲ ಆಕಾಂಕ್ಷಿಗಳಲ್ಲೊಂದು. ಇತ್ತೀಚೆಗಷ್ಟೆ, 2023ರ ಬೆಳವಣಿಗೆಯ ದರಗಳನ್ನು ಐಎಂಎಫ್‌ ಬಿಡುಗಡೆ ಮಾಡಿದೆ. ಭಾರತವು ಅತ್ಯಂತ ಹೆಚ್ಚು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆ ಎಂದು ಹೇಳಿದೆ. ಕೊರೊನಾ ಹಾಗೂ ಯುದ್ಧದ ನಡುವೆಯೂ 2022ರಲ್ಲಿ ಭಾರತವು ಜಾಗತಿಕವಾಗಿ ಸದೃಢವಾಗಿ ಗುರುತಿಸಿಕೊಂಡಿತು. ಎಲ್ಲ ಸವಾಲುಗಳನ್ನೂ ಎದುರಿಸುವಲ್ಲಿ ಬಹು ವಿಚಾರಗಳು ಕೆಲಸ ಮಾಡಿವೆ. ಸಥಿರ ಹಾಗೂ ನಿರ್ಧಾರ ಕೈಗೊಳ್ಳುವ ಸರ್ಕಾರ, ಸುಸ್ಥಿರ ಸುಧಾರಣೆಗಳು ಹಾಗೂ ಬೇರು ಮಟ್ಟದಲ್ಲಿ ಸಮಾಜೋ ಆರ್ಥಿಕ ಸಬಲೀಕರಣವು ಇದಕ್ಕೆ ಪ್ರಮುಖ ಕಾರಣ.

ಉಚಿತ ಆರೋಗ್ಯ ವ್ಯವಸ್ಥೆ, ಶೌಚಾಲಯ, ಕಡಿಯುವ ನೀರು ಸೇರಿ ಅನೇಕ ಮೂಲಸೌಕರ್ಯಗಳು ಕೋಟ್ಯಂತರ ಜನರಿಗೆ ತಲುಪಿದೆ. ಕಳೆದ ಕೆಲ ವರ್ಷಗಳಿಂದ, ಭಾರತದ ಜನಜೀವನದಲ್ಲಿ ಬಹಳಷ್ಟು ಬದಲಾವಣೆ ಆಗಿದೆ. ಕೋಟ್ಯಂತರ ಬಡವರನ್ನು ಬಡತನದಿಂದ ಮೇಲೆತ್ತಲು ಸಹಕಾರಿಯಾಗಿದೆ. ಅನೇಕರು ಬಡತನದಿಂದ ಮಧ್ಯಮ ವರ್ಗದ ಸ್ಥಿತಿಯನ್ನು ತಲುಪುತ್ತಿದ್ದಾರೆ. ಜೀವನ ಗುಣಮಟ್ಟದಲ್ಲಿ ಬದಲಾವಣೆ ಆಗಿದೆ. ಗ್ರಾಮಗಳಿಗೆ ಇಂಟರ್ನೆಟ್‌ ತಲುಪಿಸಲು ಆಪ್ಟಿಕಲ್‌ ಫೈಬರ್‌ ಜಾಲ ವಿಸ್ತರಿಸಲಾಗಿದೆ. ಕಳೆದ 9 ವರ್ಷದಲ್ಲಿ ಬ್ರಾಡ್‌ಬ್ಯಾಂಡ್‌ ಬಳಕೆದಾರರ ಸಂಖ್ಯೆ 11 ಪಟ್ಟು ಹೆಚ್ಚಾಗಿದೆ. ಇಂದು ಗ್ರಾಮೀಣ ಇಂಟರ್ನೆಟ್‌ ಬಳಕೆದಾರರ ಸಂಖ್ಯೆಯು ನಗರಕ್ಕಿಂತ ಹೆಚ್ಚು ವೇಗದಲ್ಲಿ ಸಾಗುತ್ತಿದೆ. ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಮೊಬೈಲ್‌ ಫೋನ್‌ ತಯಾರಿಸುವ ಎರಡನೇ ದೇಶವಾಗಿದೆ.

ನಿರೀಕ್ಷೆ ಹೆಚ್ಚಾಗಿರುವ ಅತಿ ದೊಡ್ಡ ವರ್ಗ ಭಾರತದಲ್ಲಿದೆ. ಪ್ರತಿ ಮನೆಗೂ ಇಂಧನ ಅವಶ್ಯಕತೆ ಹೆಚ್ಚುತ್ತಲೇ ಸಾಗುತ್ತಿದೆ. ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಅನೇಕ ಹೊಸ ನಗರಗಳ ನಿರ್ಮಾಣ ಆಗುತ್ತದೆ. ಅಂತಾರಾಷ್ಟ್ರೀಯ ಇಂಧನ ಸಂಘಟನೆ ಪ್ರಕಾರ, ಮುಂದಿನ ದಶಕದಲ್ಲಿ ಭಾರತದಲ್ಲಿ ವಿಶ್ವದಲ್ಲೆ ಅತಿ ಹೆಚ್ಚು ಇಂಧನ ಬೇಡಿಕೆಯಾಗುತ್ತದೆ. ಭಾರತದ ಅನಿಲ ಬೇಡಿಕೆಯು ಮುಂದಿನ ವರ್ಷಗಳಲ್ಲಿ 500% ಹೆಚ್ಚುವ ಸಾಧ್ಯತೆಯಿದೆ. ಭಾರತದಲ್ಲಿ ಇದಕ್ಕೆ ಅನುಗುಣವಾಗಿ ಹೂಡಿಕೆ ಮತ್ತು ಸಹಭಾಗಿತ್ವದ ಅವಕಾಶಗಳು ನಿರ್ಮಾಣವಾಗುತ್ತಿವೆ.

ಭಾರತದ ಯೋಜನೆಗೆ ನಾಲ್ಕು ಪ್ರಮುಖ ಸ್ಥಂಭಗಳನ್ನು ರೂಪಿಸಿಕೊಳ್ಳಲಾಗಿದೆ. ಭಾರತೀಯ ಉತ್ಪಾದನೆ. ಹಂಚಿಕೆಯ ವೈವಿಧಯೀಕರಣೆ ಮಾಡಲಾಗುತ್ತಿದೆ. ಜೈವಿಕ ಇಂಧನ, ಎಥೆನಾಲ್‌ನಂತಹ ಪರ್ಯಾಯ ಇಂಧನ ಮೂಲಗಳ ವಿಸ್ತಾರ ಮಾಡಲಾಗುತ್ತಿದೆ. ವಿದ್ಯುತ್‌ ವಾಹನಗಳು ಹಾಗೂ ಹೈಡ್ರೊಜನ್‌ ಮೂಲಕ ಕಾರ್ಬನ್‌ ಮುಕ್ತಗೊಳಿಸಲಾಗುವುದು. ಈ ನಾಲ್ಕೂ ಕ್ಷೇತ್ರದಲ್ಲಿ ಭಾರತ ವೇಗವಾಗಿ ಕೆಲಸ ಮಾಡುತ್ತಿದೆ.

ಇದನ್ನೂ ಓದಿ :

Exit mobile version