Site icon Vistara News

Modi In Karnataka | ಮೋದಿ ಕಾರ್ಯಕ್ರಮಕ್ಕಾಗಿ ರೈಲು ಸಂಚಾರ ವಿಳಂಬ

Modi In Karnataka

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಸೋಮವಾರ (ಜೂನ್‌ 20) ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು-ಚಾಮರಾಜನಗರ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಸೋಮವಾರ ಸಂಜೆ ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಕೇಂದ್ರ ಸರ್ಕಾರದ ಪಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು-ಚಾಮರಾಜನಗರ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಮೈಸೂರು-ಚಾಮರಾಜನಗರ ನಗರ ರೈಲು ಮಾರ್ಗದ ರೈಲ್ವೆ ಹಳಿ ಮಹಾರಾಜ ಕಾಲೇಜು ಮೈದಾನದ ಹಿಂಭಾಗ ಹಾದು ಹೋಗಿದೆ. ಸಾಮಾನ್ಯವಾಗಿ ಸಂಜೆ 6.40ಕ್ಕೆ ಮೈಸೂರಿನಿಂದ ಚಾಮರಾಜ ನಗರಕ್ಕೆ ಹೋಗುವ ರೈಲು ಸಂಚರಿಸುತ್ತದೆ. ರೈಲು ತಡವಾಗಿ ಪ್ರಯಾಣ ಆರಂಭಿಸಲಿದೆ. ಕಾರ್ಯಕ್ರಮಕ್ಕೆ ರೈಲು ಸಂಚಾರದಿಂದ ಅಡಚಣೆ ಆಗುತ್ತದೆ ಎನ್ನುವುದಕ್ಕಿಂತಲೂ ಭದ್ರತೆ ದೃಷ್ಟಿಯಿಂದ ಸಂಚಾರದಲ್ಲಿ ವ್ಯತ್ಯಯ ಮಾಡಲಾಗಿದೆ. ಚಾಮರಾಜನಗರದಿಂದ ಮೈಸೂರಿಗೆ ಬರುವ ರೈಲು ಸಹ ವಿಳಂಬವಾಗಲಿದೆ. ಪ್ರಧಾನಿ ಮೋದಿ ಕಾರ್ಯಕ್ರಮ ಮುಗಿದ ನಂತರ ರೈಲು ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದೆ.

ಇದನ್ನೂ ಓದಿ | Modi In Karnataka | ಮೋದಿಗೆ ಕೊಡಲಿರುವ ಸ್ಮರಣಿಕೆ ಕನ್ನಡದಲ್ಲಿ ಏಕೆ ಇಲ್ಲ?

ಚಾಮರಾಜನಗರದಿಂದ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಬರುವ ರೈಲು, ಅಶೋಕ್ ಪುರಂನಿಂದ ಮೈಸೂರು ಜಂಕ್ಷನ್‌ಗೆ ಮೋದಿ ಕಾರ್ಯಕ್ರಮ ಮುಗಿದ ಬಳಿಕ ಆಗಮಿಸಲಿದೆ. ಹೀಗಾಗಿ ಪ್ರಯಾಣಿಕರು ಸಹಕರಿಸುವಂತೆ ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಂಜುನಾಥ್‌ ಮಾಹಿತಿ ನೀಡಿದ್ದಾರೆ.

ಕಾನ್‌ವಾಯ್‌ ಸಂಚಾರಕ್ಕೆ ಸಕಲ ಸಿದ್ದತೆ

ಮಂಡಕಳ್ಳಿ ವಿಮಾನ ನಿಲ್ದಾಣದಿಂದ ಮಹಾರಾಜ ಕಾಲೇಜು ಮೈದಾನದವರೆಗಿನ ಇಡೀ ರಸ್ತೆಯನ್ನು ಜಿಲ್ಲಾಡಳಿತ ಸಜ್ಜುಗೊಳಿಸಿದೆ. ರಸ್ತೆಯ ಎರಡೂ ಬದಿಗಳಲ್ಲಿ ಮರದ ಪೋಲ್‌ಗಳಿಂದ ಬ್ಯಾರಿಕೇಡ್‌ ನಿರ್ಮಾಣ ಮಾಡಿದ್ದು, ರಿಂಗ್‌ ರಸ್ತೆ ವೃತ್ತ, ಗಣಪತಿ ಆಶ್ರಮ, ಸುತ್ತೂರು ಶಾಖಾ ಮಠ ಜಂಕ್ಷನ್‌, ವಿದ್ಯಾಪೀಠ ವೃತ್ತದಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿವೆ. ರಸ್ತೆ ವಿಭಜಕಗಳನ್ನು ಹೂವಿನ ಗಿಡಗಳಿಂದ ಸಿಬ್ಬಂದಿಗಳು ಸಿಂಗಾರ ಮಾಡಿದ್ದಾರೆ. ರಸ್ತೆಯುದ್ದಕ್ಕೂ ಕಾನ್‌ವಾಯ್‌ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗಿದೆ.

ಇದನ್ನೂ ಓದಿ | modi in karnataka | ಮೋದಿ ಪ್ರತಿ ಬಾರಿಯೂ ತಂಗುವುದು ಇದೇ ಕೊಠಡಿಯಲ್ಲಿ

Exit mobile version