Site icon Vistara News

Modi In Karnataka: ಎರಡು ದಿನ ನರೇಂದ್ರ ಮೋದಿ ರೋಡ್‌ ಶೋ; ಒಂದು ಗಂಟೆ ಮೊದಲೇ ಈ 34 ರೋಡ್‌ಗಳು ಬಂದ್‌!

Mobile flung towards PM Modi during Kerala Road Show what happened next

#image_title

ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಹಿನ್ನೆಲೆಯಲ್ಲಿ ಮತ ಬೇಟೆಗಾಗಿ ಕೇಂದ್ರ ನಾಯಕರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಶನಿವಾರ ಮತ್ತು ಭಾನುವಾರ ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಬೆಂಗಳೂರಿನಲ್ಲಿ ರೋಡ್‌ ಶೋ ನಡೆಸಲಿದ್ದಾರೆ. ಈ ರೋಡ್‌ ಶೋ ಎಫೆಕ್ಟ್‌ನಿಂದಾಗಿ ಮೋದಿ ಸಾಗುವ 34 ಮಾರ್ಗವನ್ನು ಒಂದು ಗಂಟೆ ಮೊದಲೇ ವಾಹನ ಸಂಚಾರವನ್ನು ಬಂದ್‌ ಮಾಡಲಾಗುತ್ತಿದೆ.

ವಾಹನಗಳ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರಿ ಪೊಲೀಸರಿಂದ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಹಾಗೂ ಶನಿವಾರ ರಾತ್ರಿ ಬೆಂಗಳೂರಲ್ಲಿ ವಾಸ್ತವ್ಯ ಇರಲಿದ್ದಾರೆ. ಹೀಗಾಗಿ ಕೆಲವು ರಸ್ತೆಗಳಲ್ಲಿ ಸಾರ್ವಜನಿಕರ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಜತೆಗೆ ಪರ್ಯಾಯ ಮಾರ್ಗ ಬಳಕೆಗೆ ಮನವಿ ಮಾಡಲಾಗಿದೆ.

ಮೇ 6ರಂದು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸುಮಾರು 34 ರಸ್ತೆಗಳಲ್ಲಿ ಮೋದಿ ಸಂಚಾರ ಇರಲಿದೆ. ಹೀಗಾಗಿ ಈ ರಸ್ತೆಗಳ ಮಾರ್ಗಕ್ಕೆ ವಾಹನ ಸಂಚಾರವನ್ನು ಒಂದು ಗಂಟೆಗೂ ಮೊದಲೇ ನಿರ್ಬಂಧ ಹೇರಲಾಗಿದೆ.

ಮೋದಿ ರೋಡ್‌ ಶೋ ಹಿನ್ನೆಲೆಯಲ್ಲಿ ಈ ಮಾರ್ಗಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.

ಈ ರೋಡ್‌ಗಳಲ್ಲಿ NO ಎಂಟ್ರಿ!

ರಾಜಭವನ ರಸ್ತೆ> ರಮಣಮಹರ್ಷಿ ರಸ್ತೆ> ಮೇಖ್ರಿ ಸರ್ಕಲ್> ಆರ್‌ಬಿಐ ಲೇಔಟ್‌, ಜೆಪಿನಗರ> ರೋಸ್‌ಗಾರ್ಡನ್‌> ಶಿರ್ಸಿವೃತ್ತ> ಜೆಜೆನಗರ> ಬಿನ್ನಿಮಿಲ್‌ ರಸ್ತೆ> ಶಾಲಿನಿ ಮೈದಾನ> ಸೌತ್‌ಎಂಡ್‌ ಸರ್ಕಲ್‌> ಆರ್ಮುಗಂ ವೃತ್ತ> ಬುಲ್‌ಟೆಂಪಲ್‌ ರಸ್ತೆ> ರಾಮಕೃಷ್ಣಾಶ್ರಮ> ಉಮಾಟಾಕೀಸ್‌> ಟಿ.ಆರ್‌ಮಿಲ್‌> ಚಾಮರಾಜಪೇಟೆ> ಬಾಳೇಕಾಯಿ ಮಂಡಿ> ಕೆ.ಪಿ.ಅಗ್ರಹಾರ> ಮಾಗಡಿ ರಸ್ತೆ> ಚೋಳೂರುಪಾಳ್ಯ> ಎಂ.ಸಿವೃತ್ತ> ವೆಸ್ಟ್‌ ಆಫ್‌ ಕಾರ್ಡ್‌ ರೋಡ್‌> ಎಂಸಿ ಲೇಔಟ್‌> ನಾಗರಭಾವಿ> ಬಿಜಿಎಸ್‌ ಮೈದಾನ> ಹಾವನೂರು ವೃತ್ತ> ಬಸವೇಶ್ವರನಗರ> ಶಂಕರಮಠ> ಮೋದಿ ಆಸ್ಪತ್ರೆ> ನವರಂಗ್‌> ಎಂಕೆಕೆ ವೃತ್ತ> ಮಲ್ಲೇಶ್ವರ> ಸಂಪಿಗೆ ರಸ್ತೆ> ಸ್ಯಾಂಕಿ ರಸ್ತೆ.

ಈ ರಸ್ತೆಗಳಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕ ಪ್ರವೇಶವನ್ನು ಬಂದ್‌ ಮಾಡಲಾಗಿದೆ. ಮೇಲಿನ ಮಾರ್ಗಗಳಲ್ಲಿ ನಿರ್ಬಂಧ ಇರುವುದರಿಂದ ಸವಾರರು ಮಾರ್ಗ ಬದಲಾವಣೆ ಮಾಡಿಕೊಳ್ಳಬೇಕಿದೆ.

ಇದನ್ನೂ ಓದಿ: Modi in Karnataka : ಮೋದಿ ರೋಡ್‌ ಶೋ ತಡೆ ಕೋರಿ ಹೈಕೋರ್ಟ್‌ಗೆ ಮನವಿ, ತಕ್ಷಣ ವಿಚಾರಣೆ

1 ಗಂಟೆ ಮೊದಲೇ ರಸ್ತೆ ಬದಿ ಅಂಗಡಿಗಳು, ವಾಹನ ಸಂಚಾರ ಬಂದ್‌

ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮನ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ವಹಿಸಲಾಗಿದೆ. ಈಗಾಗಲೇ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನರೇಂದ್ರ ಮೋದಿ ಆಗಮಿಸುವ 1 ಗಂಟೆ ಮೊದಲೇ ರಸ್ತೆ ಬದಿಯ ಎಲ್ಲ ಅಂಗಡಿಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ. ಎಲ್ಲ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಮೋದಿ ರೋಡ್ ಶೋ ಮುಂದೆ ಹೋಗುತ್ತಿದ್ದಂತೆ ಎರಡು ಕಿ.ಮೀ ಅಂತರದಲ್ಲಿ ರಸ್ತೆ ಕ್ಲಿಯರ್ ಮಾಡಲು ಪೊಲೀಸರು ತಯಾರಿ ನಡೆಸಿದ್ದಾರೆ.

Exit mobile version