ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election 2023) ಕಣಕ್ಕೆ ಏಪ್ರಿಲ್ 29ರಂದು (ಶನಿವಾರ) ಅಧಿಕೃತ ಎಂಟ್ರಿ ಕೊಡಲಿದ್ದಾರೆ. ಈ ಬಾರಿ ಅವರು ಏಪ್ರಿಲ್ 29, 30, ಮೇ 2 ಮತ್ತು 3, ಮೇ 6 ಮತ್ತು 7, ಹೀಗೆ ಆರು ದಿನಗಳ ಕಾಲ ಪ್ರಚಾರ ನಡೆಸಲಿದ್ದಾರೆ, ಏಪ್ರಿಲ್ 29ರಂದು ಹುಮನಾಬಾದ್, ವಿಜಯಪುರ, ಕುಡಚಿ ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಅವರು ಪ್ರಚಾರ ನಡೆಸಲಿದ್ದಾರೆ.
ಪ್ರಧಾನಿ ಮೋದಿ ಅವರ ಪ್ರಚಾರದ ಮೊದಲ ದಿನದ ಪಿನ್‌ಟು ಪಿನ್ ಡಿಟೇಲ್ಸ್ ಇಲ್ಲಿದೆ. ಅವರು ಮೊದಲ ದಿನ ಕೆಲವು ಕಡೆ ಬೃಹತ್ ಸಮಾವೇಶಗಳಲ್ಲಿ ಭಾಗಿಯಾದರೆ, ಕೆಲವು ಕಡೆ ರೋಡ್ ಶೋಗಳನ್ನು ನಡೆಸಲಿದ್ದಾರೆ.
ಏಪ್ರಿಲ್ 29ರಂದು ಬೆಳಗ್ಗೆ 8:20ಕ್ಕೆ ಡೆಲ್ಲಿ ವಿಮಾನ ನಿಲ್ದಾಣದಿಂದ ಹೊರಡುತ್ತಾರೆ.
10: 20ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಾರೆ.
10:25ಕ್ಕೆ ಬೀದರ್ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹುಮ್ನಾಬಾದ್ ಕಡೆ ಪಯಣ
ಹುಮನಾಬಾದ್‌ನಲ್ಲಿ ಏನೇನು ನಡೆಯುತ್ತದೆ?
10: 50ಕ್ಕೆ ಹುಮ್ನಾಬಾದ್ ಹೆಲಿಪ್ಯಾಡ್‌ಗೆ ಆಗಮನ
10:55ಕ್ಕೆ ಹುಮ್ನಾಬಾದ್ ಹೆಲಿಪ್ಯಾಡ್‌ಗೆ ರಸ್ತೆಯ ಮೂಲಕ ಸಾರ್ವಜನಿಕ ಸಭೆಯ ಸ್ಥಳಕ್ಕೆ
11:00ರಿಂದ 11:40ರವರೆಗೆ ಹುಮನಾಬಾದ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿ
11:40ರಿಂದ 11:45ರವರೆಗೆ ಹುಮನಾಬಾದ್‌ನಲ್ಲಿ ರೋಡ್ ಶೋ
11:45ಕ್ಕೆ ಹುಮನಾಬಾದ್ ಹೆಲಿಪ್ಯಾಡ್‌ಗೆ ತೆರಳುವುದು
11:50ಕ್ಕೆ ಹುಮನಾಬಾದ್ ಹೆಲಿಪ್ಯಾಡ್ ಆಗಮಿಸಿ ಅಲ್ಲಿಂದ ವಿಜಯಪುರಕ್ಕೆ ಪಯಣ
ವಿಜಯಪುರದಲ್ಲಿ ಏನೇನು ಪ್ರೊಗ್ರಾಂ?
12:50ಕ್ಕೆ ವಿಜಯಪುರ ಹೆಲಿಪ್ಯಾಡ್‌ಗೆ ಆಗಮಿಸುತ್ತಾರೆ
12:55ಕ್ಕೆ ವಿಜಯಪುರ ಹೆಲಿಪ್ಯಾಡ್‌ನಿಂದ ಸಾರ್ವಜನಿಕ ಸಭೆ ನಡೆಯುವ ಜಾಗಕ್ಕೆ ಪಯಣ
ಮಧ್ಯಾಹ್ನ 1 ಗಂಟೆಯಿಂದ 1:40 ರವರೆಗೆ ಸಾರ್ವಜನಿಕ ಸಭೆಯಲ್ಲಿ ಭಾಗಿ
ಮಧ್ಯಾಹ್ನ 1:45 ಕ್ಕೆ ವಿಜಯಪುರದಲ್ಲಿ ರೋಡ್ ಶೋ
1:50ಕ್ಕೆ ವಿಜಯಪುರ ಹೆಲಿಪ್ಯಾಡ್‌ಗೆ ತೆರಳುವುದು
1:55ಕ್ಕೆ ವಿಜಯಪುರ ಹೆಲಿಪ್ಯಾಡ್‌ಗೆ ಆಗಮಿಸಿ ಅಲ್ಲಿಂದ ಕುಡಚಿಗೆ ಪ್ರಯಾಣ.
ಕುಡಚಿಯಲ್ಲಿ ಏನೇನು ಸ್ಪೆಷಲ್?
ಮಧ್ಯಾಹ್ನ 2:35ಕ್ಕೆ ಕುಡಚಿ ಹೆಲಿಪ್ಯಾಡ್‌ಗೆ ಆಗಮನ
2:40ಕ್ಕೆ ಕುಡಚಿ ಹೆಲಿಪ್ಯಾಡ್‌ನಿಂದ ರಸ್ತೆ ಮೂಲಕ ಸಮಾವೇಶ ಸ್ಥಳಕ್ಕೆ
2:45ಕ್ಕೆ ಕುಡಚಿಯ ರೋಡ್ ಶೋನಲ್ಲಿ ಭಾಗಿ ಆಗುವುದು
2:45ರಿಂದ 3:25ರವರೆಗೆ ಕುಡಚಿ ಸಾರ್ವಜನಿಕ ಸಭೆಯಲ್ಲಿ ಭಾಗಿ
3:30ಕ್ಕೆ ಕುಡಚಿ ರೋಡ್ ಶೋ ಮೂಲಕ ಹೆಲಿಪ್ಯಾಡ್ ಕಡೆಗೆ
3:40ಕ್ಕೆ ಕುಡಚಿ ಹೆಲಿಪ್ಯಾಡ್‌ಗೆ ಆಗಮಿಸಿ ಅಲ್ಲಿಂದ ಬೆಳಗಾವಿಗೆ ಪ್ರಯಾಣ
ಸಂಜೆ 4:20ಕ್ಕೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮನ
4:25ಕ್ಕೆ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಯಾಣ
5:30ಕ್ಕೆ ಬೆಂಗಳೂರಿನ ಎಚ್ಎಎಲ್‌ಗೆ ಆಗಮನ
5:35ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರು ಹೆಲಿಪ್ಯಾಡ್‌ಗೆ ನಿರ್ಗಮನ
5:55ಕ್ಕೆ ಬೆಂಗಳೂರು ಹೆಲಿಪ್ಯಾಡ್‌ಗೆ ಆಗಮನ
ಸಂಜೆ 6 ಗಂಟೆಗೆ ರಸ್ತೆ ಮೂಲಕ ಬೆಂಗಳೂರು ಪ್ರಚಾರ ಶುರು.
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಏನೇನಿದೆ?
6:15ಕ್ಕೆ ಮಾಗಡಿ ರೋಡ್ ನೈಸ್ ರೋಡ್ ಜಂಕ್ಷನ್‌ಗೆ ಆಗಮನ
ಸಂಜೆ 6:15ರಿಂದ 7 ಗಂಟೆ ವರೆಗೆ ಬೆಂಗಳೂರು ಉತ್ತರದಲ್ಲಿ ರೋಡ್ ಶೋನಲ್ಲಿ ಭಾಗಿ
ರಾತ್ರಿ 8:05ಕ್ಕೆ ರಸ್ತೆ ಮೂಲಕ ಸುಮನಹಳ್ಳಿ ಜಂಕ್ಷನ್‌ಗೆ ಆಗಮನ
ರಾತ್ರಿ 8:25ಕ್ಕೆ ರಸ್ತೆ ಮೂಲಕ ರಾಜಭಾವನಕ್ಕೆ ತೆರಳುವುದು.
ಅಂದು ರಾತ್ರಿ ಬೆಂಗಳೂರಿನ ರಾಜಭಾವನದಲ್ಲಿ ಮೋದಿ ವಾಸ್ತವ್ಯ
ಮರುದಿನ ಎಲ್ಲಿಗೆ ಹೋಗ್ತಾರೆ ನರೇಂದ್ರ ಮೋದಿ?
ಏಪ್ರಿಲ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋಲಾರ, ಚೆನ್ನಪಟ್ಟಣ, ಬೇಲೂರು, ಮೈಸೂರುಗಳಲ್ಲಿ ಸಂಚಾರ ಮಾಡಲಿದ್ದಾರೆ.
ಮೇ 2ರಂದು ಚಿತ್ರದುರ್ಗ, ವಿಜಯನಗರ, ಸಿಂಧನೂರು ಮತ್ತು ಕಲಬುರಗಿ ಕ್ಷೇತ್ರದಲ್ಲಿ ಓಡಾಡಲಿದ್ದಾರೆ.
ಮೇ 3ರಂದು ಮೂಡುಬಿದರೆ, ಕಾರವಾರ, ಕಿತ್ತೂರಿನಲ್ಲಿ ಅವರು ಪ್ರಚಾರ ಮಾಡುತ್ತಾರೆ.
ಮೇ 6ರಂದು ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾಮಾಂತರ, ಬೆಂಗಳೂರು ದಕ್ಷಿಣದಲ್ಲಿ ಪ್ರಚಾರ ಮಾಡುತ್ತಾರೆ.
ಮೇ 7ರಂದು ಬಾದಾಮಿ, ಹಾವೇರಿ, ಶಿವಮೊಗ್ಗ ಮತ್ತಿ ಬೆಂಗಳೂರು ಕೇಂದ್ರ ಭಾಗದಲ್ಲಿ ಅವರ ಪ್ರಚಾರವಿರಲಿದೆ.
ಇದನ್ನೂ ಓದಿ : Karnataka Election 2023: ಮೋದಿ ವಿಷದ ಹಾವು ಹೇಳಿಕೆ; ವಿವಾದದ ಬೆನ್ನಲ್ಲೇ ಖರ್ಗೆ ವಿಷಾದ