Site icon Vistara News

Modi in Karnataka: ದಾವಣಗೆರೆ ಮಹಾ ಸಂಗಮದ ಆವರಣದಲ್ಲೇ ಮೋದಿ ರೋಡ್‌ ಶೋ ನಡೆಸಿದ್ದೇಕೆ?

modi-in-karnataka-prime-minister-road-show-inside-programme-premises

#image_title

ದಾವಣಗೆರೆ: ವಿಧಾನಸಭೆ ಚುನಾವಣೆಗೆ ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಒಂದೇ ದಿನ ಮೂರು ಜಿಲ್ಲೆಗಳಲ್ಲಿ ವಿಭಿನ್ನ ಕಾರ್ಯಕ್ರಮಗಳಲ್ಲಿ ಮೋದಿ (Modi in Karnataka) ಭಾಗವಹಿಸಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಕಾರ್ಯಕ್ರಮದ ಆವರಣದಲ್ಲಿಯೇ ರೋಡ್‌ ಶೋ ನಡೆಸುವ ಮೂಲಕ ಹೊಸತನ ಮೆರೆದಿದ್ದಾರೆ. ಈ ರೀತಿ ಮಾಡಿದ್ದಕ್ಕೆ ಸ್ವತಃ ಮೋದಿ ಕಾರಣ ನೀಡಿದ್ದಾರೆ.

ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆ ಮಹಾ ಸಂಗಮ ಕಾರ್ಯಕ್ರಮದಲ್ಲಿ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತರನ್ನುದ್ದೇಶಿಸಿ ಮೋದಿ ಮಾತನಾಡಿದರು. ವೇದಿಕೆಗೆ ಆಗಮಿಸುವುದಕ್ಕೂ ಮೊದಲು, ಇಡೀ ಕಾರ್ಯಕ್ರಮದ ಆವರಣದಲ್ಲಿ ತೆರೆದ ವಾಹನದಲ್ಲಿ ಎಲ್ಲ ಕಾರ್ಯಕರ್ತರ ಬಳಿ ಮೋದಿ ತೆರಳಿದರು. ಕಾರ್ಯಕರ್ತರ ಅತ್ಯಂತ ಸಮೀಪಕ್ಕೆ ತೆರಳಿ ಎಲ್ಲರಿಗೂ ನಮಿಸಿದರು. ಕಾರ್ಯಕರ್ತರು ಹೂವಿನ ಮಳೆಗರೆದು ನಾಯಕನನ್ನು ಗೌರವಿಸಿದರು.

ಈ ಬಾರಿ ಚುನಾವಣೆಗಾಗಿ ಬೆಳಗಾವಿ, ಮಂಡ್ಯ, ಹುಬ್ಬಳ್ಳಿಯಲ್ಲಿ ರೋಡ್‌ ಶೋ ನಡೆಸಿದ್ದಾರೆ. ಆದರೆ ಈ ಬಾರಿ ದಾವಣಗೆರೆಯಲ್ಲಿ ಕಾರ್ಯಕ್ರಮದ ಒಳಗೆಯೇ ರೋಡ್‌ ಶೋ ನಡೆಸಿದ್ದು ವಿಶೇಷವಾಗಿತ್ತು. ಈ ಕುರಿತು ತಮ್ಮ ಭಾಷಣದಲ್ಲಿ ಮಾತನಾಡಿದ ಮೋದಿ, ಕರ್ನಾಟಕದಲ್ಲಿ ನಾಲ್ಕು ವಿಜಯ ಸಂಕಲ್ಪ ಯಾತ್ರೆಗಳು ನಡೆದಿವೆ. ರಾಜ್ಯದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲೂ ರಥಗಳು ಸಂಚರಿಸಿವೆ. ಜನರಿಂದ ಅಭೂತಪೂರ್ವವಾದ ಸ್ಪಂದನೆ ದೊರಕಿದ್ದು, ಇದೆಲ್ಲಕ್ಕೆ ಕಾರ್ಯಕರ್ತರ ಪರಿಶ್ರಮವೇ ಕಾರಣ ಎಂದರು.

ಯಾತ್ರೆಗೆ ಹೋಗಿ ಮರಳಿ ಬಂದವರ ದರ್ಶನ ಮಾಡಬೇಕು ಎಂಬುದು ನಮ್ಮ ಸಂಸ್ಕೃತಿಯಲ್ಲಿರುವ ವಿಶೇಷತೆ. ನೀವೆಲ್ಲರೂ ಕಾರ್ಯಕರ್ತರು ವಿಜಯ ಸಂಕಲ್ಪ ಯಾತ್ರೆಗೆ ತೆರಳಿ ವಾಪಸಾಗಿದ್ದೀರ. ಹಾಗಾಗಿ ನಿಮ್ಮೆಲ್ಲರ ದರ್ಶನವನ್ನೂ ಪಡೆದು ನಾನಗು ಕೃತಾರ್ಥನಾದೆ ಎಂದು ಮೋದಿ ಹೇಳಿದರು. ಈ ರೀತಿಯ ವಿಶಿಷ್ಠ ಪರಿಕಲ್ಪನೆಯ ಕಾರ್ಯಕ್ರಮ ಆಯೋಜಿಸಿದ ಕರ್ನಾಟಕ ಬಿಜೆಪಿ ಘಟಕಕ್ಕೆ ಧನ್ಯವಾದಗಳು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಇದನ್ನೂ ಓದಿ: JDS Pancharatna yatre : ನಾಳೆ ಮೈಸೂರಿನಲ್ಲಿ ಪಂಚರತ್ನ ರಥಯಾತ್ರೆ ಸಮಾರೋಪ, 10 ಲಕ್ಷ ಜನ ಸೇರುವ ನಿರೀಕ್ಷೆ, ದೇವೇಗೌಡ್ರ ರೋಡ್‌ ಶೋ

Exit mobile version