Site icon Vistara News

Modi in Karnataka: ಜನಮನ ಗೆದ್ದ ಪ್ರಧಾನಿ ನಡೆ: ನಡವಳಿಕೆಯಿಂದಲೇ ಸ್ವಚ್ಛ ಭಾರತದ ಸಂದೇಶ ನೀಡಿದ ನರೇಂದ್ರ ಮೋದಿ

modi in karnataka swacch bharat message from the stage

#image_title

ಮೈಸೂರು: ಸ್ವಚ್ಛ ಭಾರತದ ಸಂದೇಶವನ್ನು ನೀಡುವ ಪ್ರಧಾನಿ ನರೇಂದ್ರ ಮೋದಿ ಮೈಸೂರಿನಲ್ಲಿ ನಡೆದ ಹುಲಿ ಯೋಜನೆ ಕಾರ್ಯಕ್ರಮದಲ್ಲಿ ಸ್ವತಃ ಸ್ವಚ್ಛ ಭಾರತ ಅಭಿಯಾನವನ್ನು ಪಾಲಿಸಿ ಜನಮನ ಗೆದ್ದರು.

ರಸ್ತೆ, ಸಾರ್ವಜನಿಕ ಸ್ಥಳಗಳು ಸೇರಿ ಎಲ್ಲ ಕಡೆಯೂ ಸಚ್ಛತೆಯನ್ನು ರೂಢಿಸಿಕೊಳ್ಳಲು ಅಭಿಯಾನ ನಡೆಯುತ್ತಿದೆ. ಸ್ವಚ್ಛತಾ ಕಾರ್ಮಿಕರು ತಮ್ಮ ಕೆಲಸ ಮಾಡುವುದಷ್ಟೆ ಅಲ್ಲದೆ ಜನರ ಸಹಭಾಗಿತ್ವವೂ ಬೇಕು ಎನ್ನುವುದು ಅಭಿಯಾನದ ಸಂದೇಶ.

ದೇಶದಲ್ಲಿ ಹುಲಿ ಯೋಜನೆ ಆರಂಭವಾಗಿ ಸುವರ್ಣ ಸಂಭ್ರಮದ ಕಾರ್ಯಕ್ರಮ ಮೈಸೂರಿನಲ್ಲಿ ಭಾನುವಾರ ಆಯೋಜನೆಯಾಗಿತ್ತು. ಕಾರ್ಯಕ್ರಮದಲ್ಲಿ ಒಟ್ಟು ನಾಲ್ಕು ವರದಿಗಳನ್ನು ಬಿಡುಗಡೆ ಮಾಡಲಾಯಿತು.

ವರದಿಗಳನ್ನು ಬಿಡುಗಡೆ ಮಾಡುವ ಮುನ್ನ ಪ್ರತಿಯೊಂದಕ್ಕೂ ಹಸಿರು ರಿಬ್ಬನ್‌ ಕಟ್ಟಲಾಗಿತ್ತು. ಪ್ರತಿ ಬಾರಿ ಬಿಡುಗಡೆ ಮಾಡುವಾಗಲೂ ಮೋದಿ ರಿಬ್ಬನ್‌ ಅನ್ನು ಬಿಚ್ಚಿದರು. ನಂತರ ಅದನ್ನು ಅಲ್ಲೆ ಬಿಸಾಡದೆಯೇ ಅಥವಾ ಮುಂದಿನ ಮೇಜಿನ ಮೇಲೆ ಇಡದೆಯೇ ತಮ್ಮ ಜೇಬಿಗೆ ಹಾಕಿಕೊಂಡರು.

ಸಾಮಾನ್ಯವಾಗಿ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮಗಳಲ್ಲಿ ಸುತ್ತಿದ್ದ ಕವರ್‌, ರಿಬ್ಬನ್‌ ಅನ್ನು ಅಲ್ಲಿಯೇ ಮೇಜಿನ ಮೇಲೆ ಹಾಕುವುದು ವಾಡಿಕೆ. ಆದರೆ ಪ್ರಧಾನಿ ಮೋದಿ ರಿಬ್ಬನ್‌ ಅನ್ನು ಅತ್ಯಂತ ಸಹಜವಾಗಿ ತಮ್ಮ ಜೇಬಿಗೆ ಹಾಕಿಕೊಂಡರು.

ಇದಕ್ಕೂ ಮುನ್ನ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ತೆರಳಿ ಸಫಾರಿ ನಡೆಸಿದರು. ಬೆಳಗ್ಗೆ 6 ಗಂಟೆಗೇ ತೆರಳಿದ್ದರಾದರೂ, ಮೈಸೂರಿನ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆಗೆ ಸುಮಾರು ಒಂದು ಗಂಟೆ ತಡವಾಯಿತು. ಭಾಷಣದ ಆರಂಭದಲ್ಲೇ ಈ ವಿಷಯವನ್ನು ಮೋದಿ ಪ್ರಸ್ತಾಪಿಸಿದರು.

ಬೇಗ ಆಗಮಿಸುವುದಾಗಿ ತಿಳಿದಿದ್ದೆ, ಆದರೆ ಒಂದು ಗಂಟೆ ತಡವಾಗಿ ಆಗಮಿಸಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದು ಕಾರ್ಯಕ್ರಮದ ಆರಂಭದಲ್ಲಿ ಹೇಳಿ ನಂತರ ಭಾಷಣ ಆರಂಭಿಸಿದರು.

ಇದನ್ನೂ ಓದಿ: Modi in Karnataka: ದೇಶದಲ್ಲೀಗ 3,167 ಹುಲಿ; ಹತ್ತು ವರ್ಷದಲ್ಲಿ ಡಬಲ್‌: IBCAಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ

Exit mobile version