Site icon Vistara News

Modi in Karnataka: ನಾಳೆ ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ; ಪ್ರತಿ 5 ಮೀಟರ್‌ಗೆ ಒಬ್ಬ ಪೊಲೀಸ್‌ ಕಣ್ಗಾವಲು

modi road show

#image_title

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election 2023) ರಂಗೇರಿದೆ. ಮತದಾರರನ್ನು ಓಲೈಸುವ ಸಲುವಾಗಿ ರಾಜಕೀಯ ಪಕ್ಷಗಳ ನಾಯಕರು ಪ್ರಚಾರಕ್ಕೆ ಇಳಿದಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ (Modi in Karnataka) ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಸಮಾವೇಶ ಹಾಗೂ ರೋಡ್‌ಶೋಗಳಲ್ಲಿ ಭಾಗಿಯಾಗುತ್ತಿದ್ದಾರೆ. ಏ.28 ಶನಿವಾರ ಬೆಂಗಳೂರಲ್ಲಿ ರೋಡ್‌ ಶೋ ಇದ್ದು, ಪೊಲೀಸರು ಟೈಟ್‌ ಸೆಕ್ಯೂರಿಟಿ ನೀಡುತ್ತಿದ್ದಾರೆ.

ನಾಳೆ (ಏ.28) ಸಂಜೆ 6:15ಕ್ಕೆ ಮಾಗಡಿ ರೋಡ್ ನೈಸ್ ರೋಡ್ ಜಂಕ್ಷನ್‌ಗೆ ಮೋದಿ ಆಗಮಿಸಲಿದ್ದು, ಸಂಜೆ 6:15 ರಿಂದ 7 ಗಂಟೆವರೆಗೆ ಬೆಂಗಳೂರು ಉತ್ತರದಲ್ಲಿ ರೋಡ್ ಶೋನಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ 8:05ಕ್ಕೆ ರಸ್ತೆ ಮೂಲಕ ಸುಮನಹಳ್ಳಿ ಜಂಕ್ಷನ್‌ಗೆ ಆಗಮಿಸಿ, ರಾತ್ರಿ 8:25ಕ್ಕೆ ರಸ್ತೆ ಮೂಲಕ ರಾಜಭವನಕ್ಕೆ ತೆರಳುತ್ತಾರೆ. ಶನಿವಾರ ರಾತ್ರಿ ಬೆಂಗಳೂರಿನ ರಾಜಭವನದಲ್ಲಿ ಮೋದಿ ವಾಸ್ತವ್ಯ ಇರಲಿದೆ.

ಡ್ರೋನ್‌ ಕ್ಯಾಮೆರಾ ಮೂಲಕ ಪೊಲೀಸರ ಹದ್ದಿನ ಕಣ್ಣು

ಹೀಗಾಗಿ ಮೋದಿ ರೋಡ್ ಶೋ ನಡೆಯುವ ಭಾಗದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಮಾಗಡಿ ರಸ್ತೆಯ ನೈಸ್ ಜಂಕ್ಷನ್‌ನಿಂದ ಸುಮ್ಮನಹಳ್ಳಿ ಸರ್ಕಲ್‌ವರೆಗೂ ಮೋದಿ ರೋಡ್ ಶೋ ಇರಲಿದೆ. ಒಟ್ಟು 5.3 ಕಿ.ಮೀ ರೋಡ್ ಶೋ ಇದಾಗಿದ್ದು, ಸುಮಾರು ಎರಡು ಲಕ್ಷ ಜನ ಸೇರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ನೇತೃತ್ವದಲ್ಲಿ ಭದ್ರತೆಗಾಗಿ ಸುಮಾರು ಮೂರು‌ ಸಾವಿರ ಪೊಲೀಸರ ನಿಯೋಜನೆ ಮಾಡಲಾಗುತ್ತಿದೆ.

5 ಮೀಟರ್ ಒಬ್ಬರಂತೆ ಪೊಲೀಸ್ ಕಾವಲು ಇರಲಿದ್ದು, ಇಬ್ಬರು ಹೆಚ್ಚುವರಿ ಆಯುಕ್ತರು, ಆರು ಡಿಸಿಪಿ, 18 ಎಸಿಪಿ, 120ಕ್ಕೂ ಹೆಚ್ಚು ಇನ್ಸ್‌ಸ್ಪೆಕ್ಟರ್‌, 250 ಸಬ್ ಇನ್ಸ್‌ಸ್ಪೆಕ್ಟರ್‌ ಸೇರಿದಂತೆ 2,600ಕ್ಕೂ ಹೆಚ್ಚು ಸಿವಿಲ್, ಕೆಎಸ್‌ಆರ್‌ಪಿ ಮತ್ತು ಟ್ರಾಫಿಕ್ ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡಿದ್ದಾರೆ.

ಮೋದಿ ಓಡಾಡುವ ರೋಡ್‌ನಲ್ಲಿ ಅಂಗಡಿ ಮುಂಗಟ್ಟು ಬಂದ್‌

ಕಾಮಾಕ್ಷಿಪಾಳ್ಯ ಮತ್ತು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೋಡ್ ಶೋ ಕಾರ್ಯಕ್ರಮವಿದ್ದು, ಭದ್ರತಾ ದೃಷ್ಟಿಯಿಂದ ಸಾರ್ವಜನಿಕರಿಗೂ ಕೆಲವು ಸೂಚನೆಯನ್ನು ನೀಡಲಾಗಿದೆ. ಮೋದಿ ರೋಡ್‌ ಶೋ ವೇಳೆ ಸಾರ್ವಜನಿಕರು ವಾಸದ ಮನೆ ಮತ್ತು ಮಳಿಗೆಗಳ ಟೆರಸ್ ಮತ್ತು ಬಾಲ್ಕನಿಗಳಲ್ಲಿ ಅಪರಿಚಿತ ವ್ಯಕ್ತಿಗಳು ಸೇರಿಕೊಳ್ಳಲು ಅವಕಾಶ ಕೂಡಬಾರದು. ಮೋದಿ ರೋಡ್‌ ಶೋ ವೇಳೆ ಅಂಗಡಿ ಮುಂಗಟ್ಟು ಬಂದ್‌ ಮಾಡಬೇಕೆಂದು ಸೂಚಿಸಲಾಗಿದೆ.

ಕಂಪನಿ, ಕೈಗಾರಿಕೆ, ವಾಣಿಜ್ಯ ಮಳಿಗೆಗಳಲ್ಲಿ ವಾಸದ ಮನೆಗಳಲ್ಲಿ ಅಪರಿಚಿತ ವ್ಯಕ್ತಿಗಳು ಅಥವಾ ತಮಗೆ ಪರಿಚಯವಿರದ ಅನುಮಾನ ಬರುವ ವ್ಯಕ್ತಿಗಳು ಕಂಡು ಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿಯನ್ನು ನೀಡಬೇಕು. ಜತೆಗೆ ಅನುಮಾನಸ್ಪಾದವಾಗಿ ವಸ್ತುಗಳು ಕಂಡು ಬಂದರೆ ತಿಳಿಸಬೇಕು.

ಇದನ್ನೂ ಓದಿ: Modi in Karnataka : ರಾಜ್ಯದಲ್ಲಿ ನಾಳೆ ಮೋದಿ ಪ್ರಚಾರ; ಎಲ್ಲೆಲ್ಲಿ ಹೋಗ್ತಾರೆ? ಫುಲ್‌ ಡಿಟೇಲ್ಸ್‌ ಇಲ್ಲಿದೆ

ವಾಣಿಜ್ಯ ಮಳಿಗೆಗಳಲ್ಲಿ ಹೊಸದಾಗಿ ಯಾವುದೇ ಕೆಲಸಗಾರರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಲ್ಲಿ ಅವರುಗಳ ಮಾಹಿತಿಯನ್ನು ತಪ್ಪದೆ ಹಂಚಿಕೊಳ್ಳಲು ಸೂಚಿಸಲಾಗಿದೆ. ಜತೆಗೆ ಕೆಲಸಗಾರರ ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್‌ ಅನ್ನು ನೀಡಬೇಕು. ಈಗಾಗಲೇ ಕಲಸ ನಿರ್ವಹಿಸುತ್ತಿರುವ ಸೆಕ್ಯೂರಿಟಿಗಳಿಗೆ ಜಾಗೃತಿಯಿಂದ ಕೆಲಸ ನಿರ್ವಹಿಸಲು ಸೂಕ್ತ ತಿಳುವಳಿಕ ನೀಡಬೇಕು. ಸೆಕ್ಯೂರಿಟಿಗಳು ಕೆಲಸ ನಿರ್ವಹಿಸುವ ಸಮಯದಲ್ಲಿ ಏನಾದರೂ ಅನುಮಾನ ಬರುವ ಸನ್ನಿವೇಶಗಳು ಕಂಡು ಬಂದರೆ ಪೊಲೀಸರಿಗೆ ಮಾಹಿತಿಯನ್ನು ನೀಡಬೇಕೆಂದು ಪ್ರಕಟಣೆ ಹೊರಡಿಸಿದೆ.

Exit mobile version