ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25 ರಂದು ಬೆಂಗಳೂರಿನಲ್ಲಿ ಕೆ.ಆರ್. ಪುರದಿಂದ ವೈಟ್‌ಫೀಲ್ಡ್‌ವರೆಗಿನ ಮೆಟ್ರೊ ರೈಲು ಮಾರ್ಗವನ್ನು ಉದ್ಘಾಟಿಸುವ ಕಾರ್ಯಕ್ರಮವಿದೆ. ಆದರೆ ಈ ಮಾರ್ಗ ಇನ್ನೂ ಅಪೂರ್ಣವಾಗಿದೆ ಹಾಗೂ ಹಿಂದಿನ ನಿಲ್ದಾಣದೊಂದಿಗೆ ಸಂಪರ್ಕವೇ ಸಾಧ್ಯವಾಗಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ್ದಾರೆ. ನಮ್ಮ ಮೆಟ್ರೋದಲ್ಲಿ ಸೇಫ್ಟೀ ಇಲ್ಲ. ಪ್ರತಿಬಾರಿ ಮಿಸ್ಟೇಕ್ ಆಗ್ತಾನೇ ಇವೆ. ಹಲವು ಕಾಮಗಾರಿಗಳನ್ನ ಉದ್ಘಾಟಿಸ್ತಿದ್ದಾರೆ, ಅರ್ಧಂಬರ್ಧ ಕಾಮಗಾರಿ ಉದ್ಘಾಟಿಸುತ್ತಿದ್ದಾರೆ. ನವೆಂಬರ್ 22ರಂದು ಬೆಂಗಳೂರು ವಿಮಾನ ನಿಲ್ದಾಣ ಎರಡನೇ ರನ್‌ವೇ ಉದ್ಘಾಟನೆ ಮಾಡಿದರು. ಫೆಬ್ರವರಿಯಲ್ಲಿ ಶಿವಮೊಗ್ಗ ಏರ್ಪೋರ್ಟ್ ಉದ್ಘಾಟನೆ ಮಾಡಿದರು, ಇಲ್ಲಿಯವರೆಗೆ ವಿಮಾನ ಹಾರಾಟವಿಲ್ಲ.
ಮಾರ್ಚ್ 12ರಂದು ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಿದರು, ಆದರೆ ಸರ್ವಿಸ್ ರಸ್ತೆಗಳನ್ನು ನಿರ್ಮಾಣ ಮಾಡಿಲ್ಲ. ಅಂಡರ್ ಪಾಸ್ ಸರಿಯಾಗಿ ನಿರ್ಮಿಸಿಲ್ಲ. ಅರ್ಧಂಬರ್ಧ ಕಾಮಗಾರಿಗಳನ್ನ ಉದ್ಘಾಟಿಸ್ತಿದ್ದಾರೆ. ಚುನಾವಣೆಗಾಗಿ ತರಾತುರಿಯಲ್ಲಿ ಮಾಡ್ತಿದ್ದಾರೆ.
ಈಗ ಮೆಟ್ರೋ ಲೈನ್ ಉದ್ಘಾಟನೆಗೆ ಬರ್ತಿದ್ದಾರೆ. ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರಂ ಲೈನ್ ಕೆಲಸ ಇನ್ನೂ ನಡೆದಿದೆ, ಸಂಪೂರ್ಣ ಆಗಿಲ್ಲ. ಸಂಪೂರ್ಣಗೊಳ್ಳಲು ಇನ್ನೂ 6 ತಿಂಗಳ ಸಮಯಾವಕಾಶ ಬೇಕಿದೆ. ಆದರೆ ಕೆ.ಆರ್. ಪುರದಿಂದ ವೈಟ್ ಫೀಲ್ಡ್ ಮೆಟ್ರೋಗೆ ಉದ್ಘಾಟನೆಗೆ ಮುಂದಾಗಿದ್ದಾರೆ.
ಸಾರ್ವಜನಿಕ ರಕ್ಷಣೆ ಮುಖ್ಯ ಅಲ್ಲವೇ? ಒಂದು ಟ್ರೈನ್ ಹೋದ ಮೇಲೆ ಇನ್ನೊಂದು ಟ್ರೈನ್ ಹೋಗಬೇಕು ಈಗಿನ ಸ್ಥಿತಿಯಲ್ಲಿ. ಯಾಕೆ ನೀವು ಕಾಮಗಾರಿ ಮುಗಿಯದ ಯೋಜನೆ ಉದ್ಘಾಟನೆ ಮಾಡ್ತಾ ಇದ್ದೀರಾ? ಟಾರ್ಗೆಟ್ ರೀಚ್ ಪರ್ಮಿಷನ್ ಸ್ವೀಡ್ ಗೆ ಹೊಂದಾಣಿಕೆ ಆಗಿಲ್ಲ. ನೀವು ಯಾಕೆ ಉದ್ಘಾಟನೆ ಮಾಡ್ತಾ ಇದ್ದೀರಾ ಪ್ರಧಾನಿ ಮೋದಿ? ಎಂದು ಪ್ರಶ್ನಿಸಿದರು.
ಪ್ರಚಾರದ ಗಿಮಿಕ್ ಗಾಗಿ ಮೋದಿ ಬಂದು ಉದ್ಘಾಟನೆ ಮಾಡಿ ಹೋಗ್ತಿದ್ದಾರೆ ಅಷ್ಟೆ. ಈಗ ಉದ್ಘಾಟನೆಯಾಗವುವ ಲೈನ್ ಇದು ಎಲ್ಲಿಂದ ಎಲ್ಲಿಗೆ ಎಂಬುದು ತಿಳಿದಿಲ್ಲ. ಬೈಯಪ್ಪನಹಳ್ಳಿವರೆಗೆ ಮೆಟ್ರೊದಲ್ಲಿ ಬಂದು, ಅಲ್ಲಿ ಇಳಿದು ಬಿಎಂಟಿಸಿ ಬಸ್ ಹತ್ತಿ ಕೆ.ಆರ್. ಪುರದವರೆಗೆ ತೆರಳಬೇಕು, ಅಲ್ಲಿ ಮತ್ತೆ ಮೆಟ್ರೊ ಹತ್ತಿ ವೈಟ್‌ಫೀಲ್ಡ್‌ಗೆ ಹೋಗಬೇಕ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: Yuva Kranti: ರಾಜ್ಯಕ್ಕೆ ಬರುವ ಮೋದಿ ಕೇವಲ ಭಾವನಾತ್ಮಕ ಮಾತಾಡುತ್ತಾರೆ: ಸಿದ್ದರಾಮಯ್ಯ ವಾಗ್ದಾಳಿ