Site icon Vistara News

Modi in Karnataka: ಸರ್‌. ಎಂ. ವಿಶ್ವೇಶ್ವರಯ್ಯ ಅವರ ಕುರಿತು ಹೊಸ ಮ್ಯೂಸಿಯಂ ನಿರ್ಮಾಣ: ಪ್ರಧಾನಿ ನರೇಂದ್ರ ಮೋದಿ ಭರವಸೆ

modi in karnataka visits sir M vishveshwarayya meusium

#image_title

ಚಿಕ್ಕಬಳ್ಳಾಪುರ: ದೇಶಕಂಡ ಅತ್ಯಂತ ಪ್ರತಿಭಾನ್ವಿತ ಇಂಜಿನಿಯರ್‌ ಹಾಗೂ ಪ್ರಾಮಾಣಿಕ ವ್ಯಕ್ತಿಗಳಲ್ಲೊಬ್ಬರಾದ ಭಾರತರತ್ನ ಸರ್.‌ ಎಂ. ವಿಶ್ವೇಶ್ವರಯ್ಯ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಗೌರವ ಸಲ್ಲಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಶ್ರೀ ಸತ್ಯ ಸಾಯಿ ರಾಜೇಶ್ವರಿ ಮೆಮೋರಿಯಲ್‌ ಬ್ಲಾಕ್‌ ಉದ್ಘಾಟನೆಗೂ ಮುನ್ನ ಮುದ್ದೇನಹಳ್ಳಿಯಲ್ಲಿ ವಿಶ್ವೇಶ್ವರಯ್ಯನವರ ಸಮಾಧಿಗೆ ಮೋದಿ ಭೇಟಿ ನೀಡಿದರು.

ಸಮಾಧಿಗೆ ತೆರಳಿ ಪುಷ್ಪಾರ್ಚನೆ ಮಾಡಿದ ಮೋದಿ, ನಂತರ ಮ್ಯೂಸಿಯಂಗೆ ತೆರಳಿದರು. ವಿಶ್ವೇಶ್ವರಯ್ಯನವರು ಬಳಸುತ್ತಿದ್ದ ವಸ್ತುಗಳು, ಅವರಿಗೆ ಲಭಿಸಿದ ಪ್ರಶಸ್ತಿಗಳು ಸೇರಿ ಅನೇಕ ವಸ್ತುಗಳನ್ನು ಸಂಗ್ರಹಿಸಿಡಲಾಗಿದೆ. ವಿಶ್ವೇಶ್ವರಯ್ಯ ಅವರ ಮೊಮ್ಮಗ ಮೋಕ್ಷಗುಂಡಂ ಸತೀಶ್‌ ಅವರು ಮ್ಯೂಸಿಯಂ ಕುರಿತು ಮಾಹಿತಿಯನ್ನು ಮೋದಿಯವರಿಗೆ ವಿವರಿಸಿದರು.

ದೇಶದ ಪ್ರಧಾನಿ ನಮ್ಮ ಮನೆಗೆ ಬೇಟಿ ಕೊಟ್ಟಿದ್ದು ಸಂತಸ ತಂದಿದೆ. ನಮ್ಮ ಕುಟುಂಬಕ್ಕೂ ನಮ್ಮ ಗ್ರಾಮದ ಜನರಿಗೂ ಸಂತೋಷ ಆಗಿದೆ‌. ಸರ್. ಎಂ. ವಿ. ಮ್ಯೂಸಿಯಂನಲ್ಲಿ ಹಳೇ ವಸ್ತುಗಳನ್ನು ವೀಕ್ಷಣೆ ಮಾಡಿದರು. ಮುಂದಿನ ದಿನಗಳಲ್ಲಿ ಹೊಸ ಮ್ಯೂಸಿಯಂ ಕಟ್ಟಿಸಿಕೊಡುವ ಬರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಮ್ಯೂಸಿಯಂ ವೀಕ್ಷಣೆ ನಂತರ ವೇದಿಕೆ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯನವರ ಕುರಿತು ಮೋದಿ ಪ್ರಸ್ತಾಪಿಸಿದರು. ಚಿಕ್ಕಬಳ್ಳಾಪುರದ ಈ ಪುಣ್ಯಭೂಮಿಯಿಂದಲೇ ಪ್ರೇರಣೆ ಪಡೆದು ರೈತರು ಹಾಗೂ ಸಾಮಾನ್ಯ ಜನರಿಗಾಗಿ ವಿಶ್ವೇಶ್ವರಯ್ಯನವರು ಕಾರ್ಯ ನಡೆಸಿದರು. ಅನೇಕ ಇಂಜಿನಿಯರಿಂಗ್‌ ಯೋಜನೆಗಳನ್ನು ಕೈಗೊಂಡರು ಎಂದು ಶ್ಲಾಘಿಸಿದರು.

ಅದೇ ರೀತಿ ಸತ್ಯ ಸಾಯಿ ಗ್ರಾಮದ ರೂಪದಲ್ಲಿ ಸೇವೆಯ ಅದ್ಭುತ ಮಾದರಿಯನ್ನು ದೇಶಕ್ಕೆ ನೀಡಲಾಗಿದೆ. ಶಿಕ್ಷಣ ಹಾಗೂ ಆರೋಗ್ಯದ ರೂಪದಲ್ಲಿ ಮಾನವ ಸೇವೆಯ ಅಭಿಯಾನ ನಡೆಯುತ್ತಿದೆ. ಮೆಡಿಕಲ್‌ ಕಾಲೇಜಿನ ಕಾರಣಕ್ಕೆ ಈ ಸೇವೆ ಮತ್ತಷ್ಟು ಸಶಕ್ತವಾಗಿದೆ. ಈ ಆಸ್ಪತ್ರೆಯ ಮೂಲಕ ಪ್ರತಿ ವರ್ಷ ದೇಶದ ಕೋಟ್ಯಂತರ ಜನರ ಸೇವೆಗೆ ವೈದ್ಯರು ಲಭಿಸಲಿದ್ದಾರೆ ಎಂದರು.

ಇದನ್ನೂ ಓದಿ: Modi in Karnataka: ದಾವಣಗೆರೆ ಮಹಾ ಸಂಗಮದ ಆವರಣದಲ್ಲೇ ಮೋದಿ ರೋಡ್‌ ಶೋ ನಡೆಸಿದ್ದೇಕೆ?

Exit mobile version