ಮಂಗಳೂರು: ನೀಲಿ ಸಂಪತ್ತು ಎಂದೇ ಖ್ಯಾತಿವೆತ್ತ ಸಮುದ್ರ ಸಂಪತ್ತನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮೀನುಗಾರಿಕೆಗೆ ಬೆಂಬಲ ನೀಡುವ ವಾಗ್ದಾನ ಮಾಡಿದರು.
ದೇಶದಲ್ಲೇ ಮೊದಲ ಬಾರಿಗೆ ಕಿಸಾನ್ ಕಾರ್ಡ್‌ನ್ನು ತುಮಕೂರಿನಲ್ಲಿ ವಿತರಿಸಲಾಗಿತ್ತು. ಶುಕ್ರವಾರ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂವರು ಮೀನುಗಾರರಿಗೆ ಪ್ರಾತಿನಿಧಿಕವಾಗಿ ಕಿಸಾನ್ ಕಾರ್ಡ್ ವಿತರಿಸಲಾಯಿತು. ಇದೇ ವೇಳೆ ಆಳ ಸಮುದ್ರ ಮೀನುಗಾರಿಕೆಗೆ ೧೦೦ ಮಂದಿಗೆ ಸಹಾಯಧನ ನೀಡಲಾಗಿದ್ದು, ಅವರ ಪೈಕಿ ಮೂವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಮಾಣಪತ್ರ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸಮುದ್ರ ಸಂಪತ್ತನ್ನು ಇನ್ನಷ್ಟು ಹೆಚ್ಚು ಶಕ್ತಿಶಾಲಿಯಾಗಿ ಬಳಸಲು ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ಮಾಡಲಿದೆ. ಈಗಾಗಲೇ ಮತ್ಸ್ಯ ಸಂಪತ್ತಿನ ಸಂಗ್ರಹ, ಸಾಗಣೆ ಮತ್ತು ಮಾರುಕಟ್ಟೆಯನ್ನು ವಿಸ್ತರಿಸಲು, ವಿದೇಶದಲ್ಲೂ ಮಾರುಕಟ್ಟೆ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಮೀನು ಹಿಡಿದು ಬದುಕು ಕಟ್ಟುತ್ತಿರುವ ಮೀನುಗಾರರಿಗೆ ಸಹಾಯ ನೀಡಲು ನಮ್ಮ ಡಬಲ್ ಎಂಜಿನ್ ಸರಕಾರ ಬದ್ಧವಾಗಿದೆ ಎಂದು ಮೋದಿ ಹೇಳಿದರು. ಆಳ ಸಮುದ್ರ ಮೀನುಗಾರಿಕೆಗೆ ಸಹಾಯವಾಗುವಂತೆ ಅತ್ಯಾಧುನಿಕ ವ್ಯವಸ್ಥೆಗಳನ್ನು ಮಾಡಲಾಗಿದೆ.
ಕುಳಾಯಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಮಾಡಿದ್ದೇನೆ. ಇದು ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಇದರಿಂದ ಮೀನುಗಾರರಿಗೆ, ಅವರ ಮಕ್ಕಳಿಗೆ ದೊಡ್ಡ ಲಾಭವಾಗಲಿದೆ ಎಂದರು ಮೋದಿ.
ಇದನ್ನೂ ಓದಿ| Modi in Mangalore | ಮಂಗಳೂರಿನಲ್ಲಿ 3,800 ಕೋಟಿ ರೂ. ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ