Site icon Vistara News

ಮೈಸೂರಿಗೆ ನಾಳೆ ಪ್ರಧಾನಿ ಮೋದಿ ಆಗಮನ, ಸ್ವಾಗತಕ್ಕೆ ಸಾಂಸ್ಕೃತಿಕ ನಗರಿ ಸಜ್ಜು

myosre yoga day

ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಪ್ರಧಾನಮಮಂತ್ರಿ ಮೋದಿ ಅವರು ಮೈಸೂರಿಗೆ ನಾಳೆ (ಜೂನ್‌ 20) ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಸಾಂಸ್ಕೃತಿಕ ನಗರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಯೋಗ ದಿನಾಚರಣೆಗೆ ಸಕಲ ಸಿದ್ಧತೆಗಳನ್ನೂ ನಡೆಸಲಾಗುತ್ತಿದೆ.

ನಗರದಲ್ಲಿ ಬಸ್ ಸಂಚಾರ ಹಾಗೂ ನಿಲ್ದಾಣಗಳಲ್ಲಿ ಬದಲಾವಣೆ ಮಾಡಲಾಗಿದೆ. ಹೊರಭಾಗದಿಂದ ಬಸ್ ಗಳು ಸಿಟಿ ಪ್ರವೇಶ ಮಾಡದಂತೆ ಮಾರ್ಗ ಬದಲಾಯಿಸಲಾಗಿದೆ. ದ್ವಿಚಕ್ರ, ನಾಲ್ಕು ಚಕ್ರ ಹಾಗೂ ಬಸ್ ನಿಲುಗಡೆಯಲ್ಲೂ ಬದಲಾವಣೆ ಮಾಡಲಾಗಿದೆ.

” ಯೋಗ ದಿನಾಚರಣೆಗೆ ಎಲ್ಲ ಸಿದ್ಧತೆಗಳೂ ಅಂತಿಮ ಹಂತದಲ್ಲಿದೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಮೈಸೂರು ಜಿಲ್ಲೆ ಪೊಲೀಸರು ಮಾತ್ರವಲ್ಲ ಹೊರ ಜಿಲ್ಲೆಯಿಂದಲೂ ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ ” ಎಂದು ಮೈಸೂರಿನಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

” ಜೂ ೨೧ ರಂದು ಬೆಳಗ್ಗೆ ಮಳೆ ಬಾರದೆ ಇದ್ದರೆ ಯೋಗ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗುತ್ತದೆ.
ನಾವು ಎಲ್ಲ ಸಿದ್ಧತೆಗಳನ್ನೂ ಮುಗಿಸಿದ್ದೇವೆ. ಅರಮನೆ ಕಾರ್ಯಕ್ರಮ, ಯೋಗ ಕಾರ್ಯಕ್ರಮ ಸೇರಿದಂತೆ ಪ್ರಧಾನಿ ಭಾಗವಹಿಸುವ ಎಲ್ಲ ಕಾರ್ಯಕ್ರಮದ ಸಿದ್ಧತೆ ಪೂರ್ಣಗೊಂಡಿದೆʼʼ ಎಂದು ಮೈಸೂರಿನಲ್ಲಿ ಸಚಿವ ಎಸ್‌.ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ.

ಪ್ರಧಾನಿ ಮೋದಿಗೆ ಅರಮನೆಯಲ್ಲಿ ಆತಿಥ್ಯ

“ಅರಮನೆ ಮುಂಭಾಗದ ಯೋಗ ವೇದಿಕೆಯಲ್ಲಿ ಇಬ್ಬರು ರಾಜವಂಶಸ್ಥರು ಆಸೀನರಾಗಲಿದ್ದಾರೆ.
ಪ್ರಧಾನಿ ಜತೆ ಪ್ರಮೋದಾ ದೇವಿ ಒಡೆಯರ್ ಮತ್ತು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ವೇದಿಕೆ ಹಂಚಿಕೊಳ್ಳಲು ಆಹ್ವಾನ ನೀಡಲಾಗಿದೆ. ವೇದಿಕೆ ಕಾರ್ಯಕ್ರಮದ ನಂತರ ರಾಜವಂಶದವರ ಜತೆ ಅರಮನೆಯಲ್ಲೇ ಮೋದಿಗೆ ಉಪಹಾರ ಸೇವಿಸಲಿದ್ದಾರೆʼʼ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಏಳು ಸಾವಿರ ಮಂದಿಯಿಂದ ಯೋಗ

ಅರಮನೆಯ ಎದುರಿನ ಮುಖ್ಯ ಧ್ವಾರ ಜಯಮಾರ್ತಂಡ ಗೇಟ್ ನಿಂದ ಪ್ರಧಾನ ಮಂತ್ರಿ, ಸಿಎಂ, ರಾಜ್ಯಪಾಲರ ಹಾಗೂ ಸಚಿವರ ಆಗಮಿಸಲಿದ್ದಾರೆ. ಅರಮನೆ ಹಿಂಭಾಗದ ಕರಿಕಲ್ಲು ತೊಟ್ಟಿ ಗೇಟ್ ನಿಂದ ವಿಐಪಿ, ಜನಪ್ರತಿನಿದಿಗಳು ಬರಲಿದ್ದಾರೆ.
ಅರಮನೆಯ ಆವರಣದ ಉಳಿದ ಎರೆಡು ಧ್ವಾರಗಳಿಂದ ಜನರಿಗೆ ಅವಕಾಶ ಇದೆ. ಮೋದಿ ಅವರ ಜತೆ ಏಳು ಸಾವಿರ ಜನ ಯೋಗ ಮಾಡುತ್ತಾರೆ. ಉಳಿದವರು ಅರಮನೆಯ ಎಲ್ಲ ಭಾಗದಲ್ಲಿ ಕುಳಿತು ಯೋಗ ಮಾಡುತ್ತಾರೆ ಎಂದು ಸಂಸದ ಪ್ರತಾಪ್‌ ಸಿಂಹ ವಿವರಿಸಿದ್ದಾರೆ.

ಚಾಮುಂಡಿ ಬೆಟ್ಟಕ್ಕೆ ಪ್ರಧಾನಿ ಭೇಟಿ ಕಾರ್ಯಕ್ರಮ

ಮೈಸೂರಿನಲ್ಲಿ ಪ್ರಧಾನಿ ಮೋದಿ ಸಂಚರಿಸುವ, ಆಗಮಿಸುವ ಕಾರ್ಯಕ್ರಮಗಳಲ್ಲಿ ಭಾರಿ ಭದ್ರತೆ ಕಲ್ಪಿಸಲಾಗಿದೆ. ಕೇಂದ್ರ ವಿಶೇಷ ಭದ್ರತಾ ಪಡೆಯಿಂದ ಭಾರಿ ಬಂದೋಬಸ್ತ್ ಮಾಡಲಾಗಿದೆ. ಇಂದು ಸಂಜೆ ಮತ್ತಷ್ಟು ಭದ್ರತಾ ನಿಯಮಗಳು ಜಾರಿಯಾಗಲಿದೆ.
ಚಾಮುಂಡಿ ಬೆಟ್ಟಕ್ಕೆ ಪ್ರಧಾನಿ ಆಗಮನ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಪ್ರತ್ಯೇಕ ಶಿಷ್ಟಾಚಾರ ಜಾರಿಯಾಗಿದೆ.
ಮೋದಿ ಸಂಚಾರಿಸುವ ರಸ್ತೆಗಳಲ್ಲಿ ಅಂಗಡಿ ಮುಂಗಟ್ಟುಗಳ ಬಂದ್ ಮಾಡಲಾಗುವುದು.

ಚಿತ್ರಮಂದಿರಗಳು ಕ್ಲೋಸ್

ಮಾಲ್ ಆಫ್ ಮೈಸೂರು ಇಂದಿನಿಂದ ಎರಡು ದಿನಗಳ ಕಾಲ ಬಂದ್ ಆಗಲಿದೆ. ಇಂದು ಸಂಜೆ ಸಿನಿಮಾದ ಕೊನೆಯ ಪ್ರದರ್ಶನದ ಬಳಿಕ ಚಿತ್ರಮಂದಿರಗಳು ಕ್ಲೋಸ್ ಆಗಲಿದೆ. ಚಿತ್ರಮಂದಿರಗಳು ಮಂಗಳವಾರ ಮದ್ಯಾಹ್ನದ ವರೆಗೂ ಮುಚ್ಚಲಿವೆ.

ವಾಹನ ಸಂಚಾರ ಮಾರ್ಗಗಳಲ್ಲಿ ಬದಲಾವಣೆ

ಮೈಸೂರು ನಗರಕ್ಕೆ ನಾಲ್ಕು ದಿಕ್ಕುಗಳಿಂದ ಆಗಮಿಸುವ ಬಸ್ , ಕಾರ್ ತಾತ್ಕಾಲಿಕ ಬಸ್ ನಿಲುಗಡೆ ಗೆ ಸ್ಥಳ ನಿಗದಿಯಾಗಿದೆ. ನಗರ ಪೊಲಿಸ್ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ.

ಬೆಂಗಳೂರಿನಿಂದ ಬರುವ ಬಸ್‌ಗಳಿಗೆ ಜೆ.ಕೆ ಮೈದಾನದಲ್ಲಿ ನಿಲ್ದಾಣ
ಹುಣಸೂರು ಹಾಸನ ಮಾರ್ಗವಾಗಿ ಬರುವ ಬಸ್ ಗಳಿಗೆ ವಿಲೇಜ್ ಹಾಸ್ಟೆಲ್ ಮೈದಾನ ಬಳಿ ನಿಲ್ದಾಣ ಕಲ್ಪಿಸಲಾಗಿದೆ.
ಪಿರಿಯಾಪಟ್ಟಣ, ಕೆ ಆರ್ ನಗರ ಮಾರ್ಗದ ಬಸ್ ಗಳಿಗೆ ಮೈಸೂರು ವಿವಿ ಪಾರ್ಕಿಂಗ್ ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ನಂಜನಗೂಡು ಚಾಮರಾಜನಗರ ಮಾರ್ಗದ ಬಸ್ ಗಳಿಗೆ ಎನ್ ಎಸ್ ಎಸ್ ಕಚೇರಿ ಮೈದಾನ ಹಾಗು ಸೋಮಾನಿ ಬಿಎಡ್ ಕಾಲೇಜು ಮೈದಾನದ ಆವರಣ ನಿಗದಿಯಾಗಿದೆ.
ಎಚ್ ಡಿ ಕೋಟೆ ಕಡೆಯಿಂದ ಬರುವ ಬಸ್ ಗಳಿಗೆ ಮಹಾಬೋದಿ ಹಾಸ್ಟೆಲ್ ಮೈದಾನ. ತಿ.ನರಸೀಪುರ ಕಡೆಯಿಂದ ಬರುವ ಬಸ್ ಗಳು ಸ್ಕೌಟ್ ಅಂಡ್ ಗೈಡ್ ಮೈದಾನ ನಿಗದಿಯಾಗಿದೆ.


ಯಾವುದೆ ಬಸ್ ಮೋದಿ ಸಂಚರಿಸುವ ಮಾರ್ಗದಲ್ಲಿ ಸಂಚಾರ ಮಾಡದಂತೆ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
ನಿಗದಿತ ಪಾರ್ಕಿಂಗ್ ಸ್ಥಳಕ್ಕೆ ತೆರಳಲು ಮೈಸೂರಿನ ಹೊರ ವಲಯದ ರಿಂಗ್ ರಸ್ತೆ ಮೂಲಕ ವಾಹನಗಳು ಸಂಚರಿಸಬೇಕಾಗುತ್ತದೆ.
ಪೊಲೀಸ್ ಇಲಾಖೆಯವತಿಯಿಂದ ಮಾರ್ಗಸೂಚಿ ಬಿಡುಗಡೆಯಾಗಿದೆ.

ಮೋದಿ ಭದ್ರತೆಗೆ ಸಜ್ಜಾದ ಬೆಂಗಳೂರು ಪೊಲೀಸರು

ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನ ಪ್ರವಾಸ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ನಾಳೆ ಬೆಂಗಳೂರಿನ ಕೆಂಗೇರಿ ಬಳಿಯ ಕೊಮ್ಮಘಟ್ಟದ ಬಳಿ ಓಪನ್ ಗ್ರೌಂಡ್ ನಲ್ಲಿ ಮೋದಿ ಬಹಿರಂಗ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ ಸುಮಾರು ಎರಡು ಸಾವಿರಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.

ಕಮಿಷನರ್ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ಭದ್ರತೆಗೆ ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆಗೆ ನಿಯೋಜನೆಗೊಂಡಿರುವ ಅಧಿಕಾರಿ ಸಿಬ್ಬಂದಿ ಸಂಖ್ಯಾಬಲ‌ ಕೆಳಗಿನಂತಿದೆ.

ಹೆಚ್ಚುವರಿ ಆಯುಕ್ತರು – 02
ಜಂಟಿ ಆಯುಕ್ತರು – 02
ಡಿಸಿಪಿ – 08
ಎಸಿಪಿ – 25
ಇನ್ಸ್ಪೆಕ್ಟರ್ ‌‌‌‌ – 123
ಸಬ್ ಇನ್ಸ್ಪೆಕ್ಟರ್ – 125
ಎಎಸ್ಐ&ಸಿಬ್ಬಂದಿ – 1736
ಒಟ್ಟು -2100

Exit mobile version