Site icon Vistara News

Karnataka Election: ಏ.29ರಿಂದ ರಾಜ್ಯದಲ್ಲಿ ಮೋದಿ ಹವಾ; ಅಮಿತ್‌ ಶಾ, ಯೋಗಿ, ನಡ್ಡಾ ಪ್ರಚಾರದ ಫುಲ್‌ ಡೀಟೇಲ್ಸ್‌ ಇಲ್ಲಿದೆ

Narendra Modi ,amit shah ,yogi adityanath to do road in karnataka

yogi adityanath,Narendra Modi , amit shah

ಬೆಂಗಳೂರು: ವಿಧಾನಸಭಾ ಚುನಾವಣೆ (Karnataka Election 2023) ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿವಿಧ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. ಇದೀಗ ಭಾರತೀಯ ಜನತಾ ಪಾರ್ಟಿ ಪರ ಅಲೆ ಎಬ್ಬಿಸಲು ಬಿಜೆಪಿಯ ಅತಿದೊಡ್ಡ ಸ್ಟಾರ್‌ ಪ್ರಚಾರಕರಾದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಎಂಟ್ರಿ ನೀಡುತ್ತಿದ್ದು, ಇದರಿಂದ ರಾಜ್ಯ ರಾಜಕೀಯ ಅಖಾಡ ಮತ್ತಷ್ಟು ರಂಗೇರಲಿದೆ. ಏ. 29ರಿಂದ 6 ದಿನಗಳಲ್ಲಿ ಅವರು 23ಕ್ಕೂ ಹೆಚ್ಚು ಸರಣಿ ರೋಡ್‌ ಶೋ, ಬೃಹತ್‌ ಸಮಾವೇಶಗಳನ್ನು ನಡೆಸಲಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಕೇಂದ್ರ ಬಿಜೆಪಿ ನಾಯಕರಾದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರು ವಿವಿಧೆಡೆ ರೋಡ್‌ ಶೋ ಮೂಲಕ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಏಕಕಾಲದಲ್ಲಿ ಕೇಂದ್ರದ ಪ್ರಮುಖ ನಾಯಕರನ್ನು ಬಳಸಿಕೊಂಡು ವಿವಿಧೆಡೆ ಬೃಹತ್‌ ರೋಡ್‌ ಶೋ, ಬೃಹತ್‌ ಸಮಾವೇಶಗಳನ್ನು ನಡೆಸಲು ಬಿಜೆಪಿ ʼಕಾರ್ಪೆಟ್‌ ಬಾಂಬಿಂಗ್‌ʼ ಎಂಬ ವಿಧಾನವನ್ನು ಬಳಸಿಕೊಳ್ಳುತ್ತಿದೆ. ಈ ಮೂಲಕ ಜನರ ಬೆಂಬಲ ಗಳಿಸಲು ಮೇ 7ರವರೆಗೆ ಸರಣಿ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಇದನ್ನೂ ಓದಿ | BJP Karnataka: ಬಿಜೆಪಿ ವತಿಯಿಂದಲೇ ಕಿಚ್ಚ ಸುದೀಪ್‌ ಪ್ರವಾಸ ನಿಗದಿ: ಬುಧವಾರ 6 ಅಭ್ಯರ್ಥಿಗಳ ಪರ ಬಿರುಸಿನ ಪ್ರಚಾರ

ಪ್ರಧಾನಿ ನರೇಂದ್ರ ಮೋದಿ (6 ದಿನ), ಅಮಿತ್‌ ಶಾ (10 ದಿನ), ಜೆ.ಪಿ.ನಡ್ಡಾ (10 ದಿನ) ಹಾಗೂ ಯೋಗಿ ಆದಿತ್ಯನಾಥ್‌ (3) ಅವರು ಪ್ರವಾಸ ವೇಳಾಪಟ್ಟಿಯ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ಏ.29ರಿಂದ ಮೇ 7ರವೆರೆಗೆ ಮೋದಿ ಮತ ಬೇಟೆ

ಏ.29- ಹುಮ್ನಾಬಾದ್‌, ವಿಜಯಪುರ, ಕುಡಚಿ, ಬೆಂಗಳೂರು ಉತ್ತರ
ಏ.30- ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರು
ಮೇ 2- ಚಿತ್ರದುರ್ಗ, ವಿಜಯನಗರ, ಸಿಂಧನೂರು, ಕಲಬುರಗಿ
ಮೇ 3- ಮೂಡುಬಿದಿರೆ, ಕಾರವಾರ, ಕಿತ್ತೂರು
ಮೇ 6- ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ
ಮೇ 7- ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಕೇಂದ್ರ

ಅಮಿತ್‌ ಶಾ ಪ್ರವಾಸದ ವೇಳಾಪಟ್ಟಿ

ಏ.27- ವಿರಾಜಪೇಟೆ, ಭಂಟ್ವಾಳ, ಕುಂದಾಪುರ, ಮಂಗಳೂರು ನಗರ

ಏ.28- ನವಲಗುಂದ, ಶಿರಹಟ್ಟಿ, ಹಗರಿಬೊಮ್ಮನಹಳ್ಳಿ, ದಾವಣಗೆರೆ ನಗರ

ಏ.29- ರಾಣೆಬೆನ್ನೂರು, ಬ್ಯಾಡಗಿ, ಹಳಿಯಾಳ, ಶಿವಮೊಗ್ಗ

ಮೇ 1- ಚನ್ನಗಿರಿ, ಚಿಕ್ಕಮಗಳೂರು, ಮಾಗಡಿ, ಬೆಂಗಳೂರು ನಗರ

ಮೇ 2- ಶಿಡ್ಲಘಟ್ಟ, ಮಾಲೂರು, ದೊಡ್ಡಬಳ್ಳಾಪುರ, ವರುಣ

ಮೇ 4- ಕಡೂರು, ಗುಬ್ಬಿ, ನೆಲಮಂಗಲ, ಮೈಸೂರು

ಮೇ 6- ಚಿಕ್ಕೋಡಿ-ಸದಲಗಾ, ಸವದತ್ತಿ ಯಲ್ಲಮ್ಮ, ರಾಮದುರ್ಗಾ, ಬಳ್ಳಾರಿ

ಮೇ 7- ಬೀದರ್‌ ನಗರ, ಮಸ್ಕಿ, ಧಾರವಾಡ ನಗರ

ಜೆ.ಪಿ.ನಡ್ಡಾ ಪ್ರಚಾರ ಕಾರ್ಯಕ್ರಮಗಳ ವಿವರ

ಏ.26- ಶಿರಸಿ, ಸೊರಬ, ಮೂಡಿಗೆರೆ, ಹಾಸನ ನಗರ

ಏ.27- ಕೊಪ್ಪಳ, ಶೋರಾಪುರ, ಸೇಡಂ, ಬೀದರ್‌ ನಗರ

ಏ.29- ಮುದ್ದೇಬಿಹಾಳ, ಕಲಘಟಗಿ, ರೋಣ, ಹರಪನಹಳ್ಳಿ

ಮೇ 1- ಸುಳ್ಯ, ಕಾಪು, ತೀರ್ಥಹಳ್ಳಿ

ಮೇ 3- ಕೆಜಿಎಫ್‌, ಕೊರಟಗೆರೆ, ಹೊಸದುರ್ಗ, ಹೊನ್ನಾಳಿ

ಮೇ 5- ಚಾಮುಂಡೇಶ್ವರಿ, ಎಚ್‌.ಡಿ.ಕೋಟೆ, ರಾಮನಗರ

ಮೇ 6- ಸಿರುಗುಪ್ಪ, ರಾಯಚೂರು ನಗರ, ರಾಯಚೂರು ಗ್ರಾಮಾಂತರ

ಮೇ 7- ಮಳವಳ್ಳಿ, ಮೇಲುಕೋಟೆ, ಮಡಿಕೇರಿ

ಯೋಗಿ ಆದಿತ್ಯನಾಥ್‌ ಪ್ರಚಾರ ವೇಳಾಪಟ್ಟಿ

ಏ.26- ದಾವಣಗೆರೆ, ಇಂಡಿ, ಬಸವನ ಬಾಗೇವಾಡಿ

ಏ.30- ಶೃಂಗೇರಿ, ಪುತ್ತೂರು, ಕಾರ್ಕಳ, ಬೈಂದೂರು, ಭಟ್ಕಳ

ಮೇ 3- ಗಂಗಾವತಿ, ಜೇವರ್ಗಿ, ಶಹಾಪುರ, ಭಾಲ್ಕಿ

ಇದನ್ನೂ ಓದಿ | Amit Shah: ಮೀಸಲಾತಿ ರದ್ದುಪಡಿಸುವ ಕಾಂಗ್ರೆಸ್‌ಗೆ ಅಧಿಕಾರ ಸಿಗುವುದಿಲ್ಲ: ಬಿಜೆಪಿಯಿಂದ ನವ ಕರ್ನಾಟಕದ ಕನಸು ನನಸು ಎಂದ ಅಮಿತ್ ಶಾ

ಕೇಂದ್ರದ ಪ್ರಮುಖ ನಾಯಕರ ಜತೆಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರಂತಹ ರಾಜ್ಯ ನಾಯಕರು ಹಾಗೂ ಚಿತ್ರ ನಟ, ನಟಿಯರು ಸೇರಿ 40 ಮಂದಿ ಸ್ಟಾರ್‌ ಪ್ರಚಾರಕರು ಬಿಜೆಪಿ ಕಡೆಯಿಂದ ಪ್ರಚಾರ ನಡೆಸಲಿದ್ದಾರೆ.

Exit mobile version