Site icon Vistara News

ಹಿರಿಯ ಹಾಸ್ಯ ಕಲಾವಿದ KGF ಮೋಹನ್‌ ಜುನೇಜಾ ವಿಧಿವಶ

ಬೆಂಗಳೂರು : ಕನ್ನಡ ಚಿತ್ರರಂಗ ಮತ್ತು ಕಿರುತರೆ ಜನಪ್ರಿಯ ಹಾಸ್ಯ ನಟ ಮೋಹನ್‌ ಜುನೇಜಾ(54)ಅವರು ಶನಿವಾರ ಬೆಳಿಗ್ಗೆ ವಿಧಿವಶರಾಗಿದ್ದಾರೆ. ಇತ್ತೀಚೆಗೆ KGF ಸರಣಿ ಸೇರಿ ನೂರಾರು ಸಿನಿಮಾಗಳಲಿ ಅಭಿನಯಿಸಿದ್ದ ಮೋಹನ್‌ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕ್ಸತೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ : ಸಾವಿರದ ಸಾಧನೆ ಮಾಡಿದ ಕೆಜಿಎಫ್

ಮೋಹನ್‌ ಅವರಿಗೆ ಕರಳಿನ ತೊಂದರೆ ಆಗಿತ್ತು ಎನ್ನುವುದು ತಿಳಿಯಲ್ಪಟ್ಟಿದೆ. ಈ ಹಿಂದೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ʼವಠಾರʼ ಸಿರಿಯಲ್‌ನಿಂದ ಜನಪ್ರಿಯತೆ ಗಳಿಸಿದ್ದರು. ಹಲವಾರು ಚಿತ್ರಗಳಲ್ಲಿ ಪೋಷಕ ನಟನಾಗಿ ಮತ್ತು ಹಾಸ್ಯನಟನಾಗಿ ರಂಜಿಸಿದ್ದರು. ಅಷ್ಟೇ ಅಲ್ಲದೇ ಗೋಲ್ಡ್‌ನ್‌ ಸ್ಟಾರ್‌ ಗಣೇಶ್‌ ಅವರ ಚೆಲ್ಲಾಟ ಸಿನಿಮಾದಲ್ಲಿ ಮದುಮಗನ ಪಾತ್ರ ಅವರಿಗೆ ಹೆಸರನ್ನೂ ನೀಡಿತ್ತು. ಹೆಚ್ಚಿನ ಜನರು ಮದುಮಗ ಮೋಹನ್‌ ಎಂದೇ ಕರೆಯುತ್ತಿದ್ದರು.

ಕೆಲವು ಚಲನಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವುದು ವಿಶೇಷ. ಕೆಜಿಎಫ್‌ ಚಾಪ್ಟ್‌ರ್‌ 1 (KGF Chapter 1) ಮತ್ತು ಕೆಜಿಎಫ್‌ ಚಾಪ್ಟ್‌ರ್‌ 2 (KGF Chapter 2) ರಲ್ಲಿ ಅಭಿನಯಿಸಿದ್ದರು. ಜೀ ಕನ್ನಡದಲ್ಲಿ ಪ್ರಸಾರವಾಗುವ ಹಿಟ್ಲರ್‌ ಕಲ್ಯಾಣ ಧಾರವಾಹಿಯಲ್ಲಿ ಇತ್ತೀಚಿಗೆ ಕಾಣಿಸಿಕೊಂಡಿದ್ದರು.

ಪತ್ನಿ ಕುಸುಮಾ, ಇಬ್ಬರು ಪುತ್ರರು ಅಕ್ಷಯ್‌, ಅಶ್ವಿನ್‌ ಅವರನ್ನು ಅಗಲಿದ್ದಾರೆ.

ಇದನ್ನೂ ಓದಿ : ಡಾ. ರಾಜ್‌ ಕುಟುಂಬದ ಮತ್ತೊಂದು ಕುಡಿ ಎಂಟ್ರಿ: ಯುವ ರಾಜ್‌ಕುಮಾರ್‌ ಪದಾರ್ಪಣೆ ಘೋಷಣೆ

Exit mobile version